ವಿಶ್ವಕಪ್ ಕ್ವಾಲಿಫಯರ್‌ನ 7ನೇ ಪಂದ್ಯದಲ್ಲಿ ಬ್ರಿಟಿಷ್ ದ್ವೀಪಸಮೂಹಗಳ ಎರಡು ಪ್ರಮುಖ ದೇಶಗಳು ಮುಖಾಮುಖಿಯಾಗಿದೆ. ಐರ್ಲೆಂಡ್ ಹಾಗೂ ಸ್ಕಾಟ್‌ಲೆಂಡ್ ತಂಡಗಳು ಈ ಪಂದ್ಯದಲ್ಲಿ ಸೆಣೆಸಾಟಕ್ಕೆ ಇಳಿದಿದ್ದು ಟಾಸ್ ಗೆದ್ದಿರುವ ಸ್ಕಾಟ್ಲೆಂಡ್ ತಂಡ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಐರ್ಲೆಂಡ್ ಆರಂಭದಲ್ಲಿ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದ್ದಾರೆ.
ಈ ಪಂದ್ಯದಲ್ಲಿ ಐರ್ಲೆಂಡ್ ತಂಡ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದು ಗ್ರಹಮ್ ಹ್ಯೂಮ್ ಆಡುವ ಬಳಗದಿಂದ ಹೊರಬಿದ್ದಿದ್ದರೆ ಕರ್ಟೀಸ್ ಕ್ಯಾಂಪರ್ ಆಡು ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮತ್ತೊಂದೆಡೆ ಸ್ಕಾಟ್ಲೆಂಡ್ ತಂಡ ಈ ಟೂರ್ನಿಯಲ್ಲಿ ಮೊದಲ ಪಂದ್ಯವನ್ನಾಡಲು ಕಣಕ್ಕಿಳಿದ್ದು ಎಲ್ಲಾ ಆಟಗಾರರು ಫಿಚ್ ಆಗಿದ್ದಾರೆ ಎಂದು ನಾಯಕ ಟಾಸ್ ವೇಲೆ ಮಾಹಿತಿ ಹಂಚಿಕೊಂಡಿದ್ದಾರೆ.

Live score ಹೀಗಿದೆ
ಇತ್ತ ಐರ್ಲೆಂಡ್ ತಂಡಕ್ಕೆ ಇದು ಎರಡನೇ ಪಂದ್ಯವಾಗಿದ್ದು ಮೊದಲ ಪಂದ್ಯದಲ್ಲಿ ಒಮ್ ತಂಡದ ವಿರುದ್ಧ 5 ವಿಕೆಟ್‌ಗಳ ಅಂತರದ ಸೋಲು ಅನುಭವಿಸಿತ್ತು. ಐರ್ಲೆಂಟ್ ತಂಡ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರೂ ಬೌಲಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ ಕಾರಣ ಸೋಲಿನ ಆಘಾತಕ್ಕೆ ಒಳಗಾಗಿತ್ತು.
ಐರ್ಲೆಂಡ್ ಆಡುವ ಬಳಗ: ಆಂಡಿ ಮ್ಯಾಕ್‌ಬ್ರೈನ್, ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಲ್ಬಿರ್ನಿ (ನಾಯಕ), ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಮಾರ್ಕ್ ಅಡೇರ್, ಜೋಶುವಾ ಲಿಟಲ್, ಬೆಂಜಮಿನ್ ವೈಟ್
ಬೆಂಚ್: ಗ್ರಹಾಂ ಹ್ಯೂಮ್, ಪೀಟರ್ ಮೂರ್, ಕ್ರೇಗ್ ಯಂಗ್, ಬ್ಯಾರಿ ಮೆಕಾರ್ಥಿ
ಸ್ಕಾಟ್ಲೆಂಡ್ ಆಡುವ ಬಳಗ: ಮ್ಯಾಥ್ಯೂ ಕ್ರಾಸ್, ಕ್ರಿಸ್ಟೋಫರ್ ಮ್ಯಾಕ್‌ಬ್ರೈಡ್, ಬ್ರಾಂಡನ್ ಮೆಕ್‌ಮುಲ್ಲೆನ್, ಜಾರ್ಜ್ ಮುನ್ಸಿ, ರಿಚಿ ಬೆರಿಂಗ್‌ಟನ್ (ನಾಯಕ), ತೋಮಸ್ ಮ್ಯಾಕಿಂಟೋಷ್ (ವಿಕೆಟ್ ಕೀಪರ್), ಮೈಕೆಲ್ ಲೀಸ್ಕ್, ಕ್ರಿಸ್ ಗ್ರೀವ್ಸ್, ಮಾರ್ಕ್ ವ್ಯಾಟ್, ಸಫ್ಯಾನ್ ಷರೀಫ್, ಕ್ರಿಸ್ ಸೋಲ್
ಬೆಂಚ್: ಜ್ಯಾಕ್ ಜಾರ್ವಿಸ್, ಅಲಾಸ್ಡೇರ್ ಇವಾನ್ಸ್, ಹಮ್ಜಾ ತಾಹಿರ್, ಆಡ್ರಿಯನ್ ನೀಲ್