Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

World Cup Qualifiers: ನೇಪಾಳ ವಿರುದ್ಧ ಸುಲಭ ಗೆಲುವು ಸಾಧಿಸಿದ ನೆದರ್ಲೆಂಡ್ಸ್

ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡ ನೇಪಾಳ ತಂಡದ ವಿರುದ್ಧ ಸುಲಭ ಗೆಲುವು ಸಾಧಿಸಿದೆ. ಮೊದಲಿಗೆ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ನೇಪಾಳ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದ್ದ ನೆದರ್ಲೆಂಡ್ಸ್ ತಂಡ ಬಳಿಕ ಬ್ಯಾಟಿಂಗ್‌ನಲ್ಲಿಯೂ ಅಮೋಘ ಆಟ ಪ್ರದರ್ಶಿಸಿದೆ. ಹೀಗಾಗಿ 7 ವಿಕೆಟ್‌ಗಳ ಅಂತರದ ಭಾರೀ ಗೆಲುವು ಸಾಧಿಸಿದೆ ನೆದರ್ಲೆಂಡ್ಸ್ ತಂಡ.

ಟಾಸ್ ಗೆದ್ದು ನೇಪಾಳ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿದ ನೆದರ್ಲೆಂಡ್ಸ್ ತಂಡ ಶಿಸ್ತಿನ ಬೌಲಿಂಗ್ ದಾಳಿ ನಡೆಸಿ ಯಶಸ್ಸು ಸಾಧಿಸಿತು. ನೇಪಾಳ ಆರಂಭದಿಂದಲೇ ಹಿನ್ನಡೆ ಅನುಭವಿಸಿದ್ದು ನಾಯಕ ರೋಹಿತ್ ಪೌಡೆಲ್ ಗಳಿಸಿದ 33 ರನ್ ತಂಡದ ಪರ ದಾಖಲಾದ ಅತಿ ಹೆಚ್ಚಿನ ಸ್ಕೋರ್ ಆಗಿದೆ. ಯಾರಿಂದಲೂ ಉತ್ತಮ ಜೊತೆಯಾಟ ಬಾರದ ಕಾರಣ ನೇಪಾಳ ಈ ಪಂದ್ಯದಲ್ಲಿ 167 ರನ್‌ಗಳನ್ನು ಗಳಿಸಿ ಆಲೌಟ್ ಆಯಿತು.

 Netherlands won against Nepal

ಈ ಮೊತ್ತವನ್ನು ಬೆನ್ನಟ್ಟಿದ ನೆದರ್ಲೆಂಡ್ಸ್ ತಂಡ ಮೊದಲ ವಿಕೆಟ್‌ಗೆ ಅದ್ಭುತ ಆರಂಭವನ್ನು ಪಡೆಯಿತು. ಮ್ಯಾಕ್ಸ್ ಒಡೌಡ್ ಹಾಗೂ ವಿಕ್ರಮ್‌ಜೀತ್ ಸಿಂಗ್ ಜೋಡಿ 86 ರನ್‌ಗಳ ಜೊತೆಯಾಟ ನೀಡುವ ಮೂಲಕ ಈ ಗುರಿಯನ್ನು ಮತ್ತಷ್ಟು ಸುಲಭವಾಗಿಸಿದರು. ಮ್ಯಾಕ್ಸ್ ಒಡೌಡ್ ಈ ಪಂದ್ಯದಲ್ಲಿ 90 ರನ್‌ಗಳಿಸಿ ಔಟಾಗುವ ಮೂಲಕ ಅದ್ಭುತ ಶತಕಗಳಿಸುವ ಅವಕಾಶ ಕಳೆದುಕೊಂಡಿದ್ದಾರೆ. ಬಾಸ್ ಡೆ ಲೀಡ್ 41 ರನ್‌ಗಳಿಸಿದರು. ನೇಪಾಳ ನೀಡಿದ ಈ ಗುರಿಯನ್ನು ನೆದರ್ಲೆಂಡ್ಸ್ ತಂಡ ಕೇವಲ 27.1 ಓವರ್‌ಗಳಲ್ಲಿ ಗುರಿ ತಲುಪಿದ್ದು 7 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದೆ.

ನೆದರ್ಲೆಂಡ್ಸ್ ಆಡುವ ಬಳಗ: ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ವೆಸ್ಲಿ ಬ್ಯಾರೆಸಿ, ಬಾಸ್ ಡಿ ಲೀಡೆ, ತೇಜ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್ (ನಾಯಕ & ವಿಕೆಟ್ ಕೀಪರ್), ಲೋಗನ್ ವ್ಯಾನ್ ಬೀಕ್, ಕ್ಲೇಟನ್ ಫ್ಲಾಯ್ಡ್, ಶರೀಜ್ ಅಹ್ಮದ್, ಆರ್ಯನ್ ದತ್, ರಯಾನ್ ಕ್ಲೈನ್
ಬೆಂಚ್: ವಿವಿಯನ್ ಕಿಂಗ್ಮಾ, ಸಾಕಿಬ್ ಜುಲ್ಫಿಕರ್, ಮೈಕೆಲ್ ಲೆವಿಟ್, ನೋಹ್ ಕ್ರೋಸ್

ನೇಪಾಳ ಆಡುವ ಬಳಗ: ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್ ಕೀಪರ್), ಭೀಮ್ ಶಾರ್ಕಿ, ರೋಹಿತ್ ಪೌಡೆಲ್ (ನಾಯಕ), ಆರಿಫ್ ಶೇಖ್, ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರಿ, ಗುಲ್ಸನ್ ಝಾ, ಸಂದೀಪ್ ಲಮಿಚಾನೆ, ಕರಣ್ ಕೆಸಿ, ಲಲಿತ್ ರಾಜಬಂಶಿ
ಬೆಂಚ್: ಜ್ಞಾನೇಂದ್ರ ಮಲ್ಲಾ, ಸೋಂಪಾಲ್ ಕಾಮಿ, ಕಿಶೋರ್ ಮಹತೋ, ಪ್ರತಿಸ್ ಜಿಸಿ, ಅರ್ಜುನ್ ಸೌದ್

Story first published: Saturday, June 24, 2023, 22:02 [IST]
Other articles published on Jun 24, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+