Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

World Cup Qualifiers: ಐರ್ಲೆಂಡ್ ವಿರುದ್ಧ ಅಮೋಘ ಗೆಲುವು ಸಾಧಿಸಿದ ಸ್ಕಾಟ್ಲೆಂಟ್

ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಐರ್ಲೆಂಡ್ ಹಾಗೂ ಸ್ಕಾಟ್‌ಲೆಂಡ್ ತಂಡಗಳು ಇಮದು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಸ್ಕಾಟ್ಲೆಂಟ್ ಅದ್ಭುತ ಗೆಲುವು ಸಾಧಿಸಿದೆ. ಮೈಕಲ್ ಲೀಸ್ಕ್ ಹಾಗೂ ಮಾರ್ಕ್ ವಾಟ್ ಅವರ ಅದ್ಭುತ ಹೋರಾಟದಿಂದಾಗಿ ಕೊನೆಯ ಎಸೆತದಲ್ಲಿ ಕೇವಲ ಒಂದು ವಿಕೆಟ್ ಅಂತರದಿಂದ ಗೆಲುವು ಸಾಧಿಸಿ ಮಿಂಚಿದೆ.

ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ ಕರ್ಟಿಸ್ ಕ್ಯಾಂಪರ್ ಅವರ ಅಮೋಘ ಶತಕದ ನೆರವಿನಿಂದಾಗಿ 286 ರನ್‌ಗಳನ್ನು ಗಳಿಸಿತು. ಕ್ಯಾಂಫರ್ 120 ರನ್‌ಗಳನ್ನು ಗಳಿಸಿದರೆ ಡಾಕ್ರೆಲ್ 69 ರನ್‌ಗಳ ಕೊಡುಗೆ ನೀಡಿದರು. ಉಳಿದಂತೆ ಆರಂಬಿಕ ಆಟಗಾರ ಆಂಡಿ ಮೆಕ್‌ಬ್ರೈನ್ ಮಾತ್ರವೇ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು.

Scotland won

ಈ ಮೊತ್ತವನ್ನು ಬೆನ್ನಟ್ಟಿದ ಸ್ಕಾಟ್ಲೆಂಡ್ ತಂಡ ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ಅಗ್ರ ಕ್ರಮಾಂಕ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಕ್ರಿಸ್ಟೋಫರ್ ಮೆಕ್‌ಬ್ರೈಡ್ ಮಾತ್ರವೇ ಅರ್ಧ ಶತಕದ ಕೊಡುಗೆ ನೀಡಿದರು. ಒಂದು ಹಂತದಲ್ಲಿ 122 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು ಸ್ಕಾಟ್ಲೆಂಡ್. ಆದರೆ ಕೆಳ ಕ್ರಮಾಂಕದ ಆಟ ಪಂದ್ಯದ ಗತಿಯನ್ನೇ ಬದಲಾಯಿಸಿತು.

7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೈಕಲ್ ಲೀಸ್ಕ್ ಈ ಪಂದ್ಯವನ್ನು ಐರ್ಲೆಂಡ್ ಕೈಯಿಂದ ಕಸಿದುಕೊಂಡ ಆಟಗಾರ. ಇವರಿಗೆ ಅದ್ಭಯತವಾಗಿ ಸಾಥ್ ನೀಡಿದವರು ಮಾರ್ಕ್ ವಾಟ್. ಕೊನೆಯವರೆಗೂ ಕೋರಾಡಿದ ಮೈಕಲ್ ಲೀಸ್ಕ್ 61 ಎಸೆತಗಳಲ್ಲಿ ಅಜೇಯ 91 ರನ್ ಬಾರಿಸಿ ಅಬ್ಬರಿಸಿದ್ದಾರೆ. ಮಾರ್ಕ್ ವಾಟ್ 47 ರನ್‌ಗಳ ಕೊಡುಗೆ ನೀಡಿದರು. ಕೊನೆಯ ಒಮದು ಎಸೆತ ಉಳಿದುಕೊಂಡಿದ್ದರೂ ಕೊನೆಯ ಎಸೆತದಲ್ಲಿ ಸ್ಕಾಟ್ಲೆಂಡ್ ಗೆಲುವು ಸಾಧಿಸಿ ಹುಬ್ಬೇರುವಂತೆ ಮಾಡಿದೆ.

ಐರ್ಲೆಂಡ್ ಆಡುವ ಬಳಗ: ಆಂಡಿ ಮ್ಯಾಕ್‌ಬ್ರೈನ್, ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಲ್ಬಿರ್ನಿ (ನಾಯಕ), ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಮಾರ್ಕ್ ಅಡೇರ್, ಜೋಶುವಾ ಲಿಟಲ್, ಬೆಂಜಮಿನ್ ವೈಟ್
ಬೆಂಚ್: ಗ್ರಹಾಂ ಹ್ಯೂಮ್, ಪೀಟರ್ ಮೂರ್, ಕ್ರೇಗ್ ಯಂಗ್, ಬ್ಯಾರಿ ಮೆಕಾರ್ಥಿ

ಸ್ಕಾಟ್ಲೆಂಡ್ ಆಡುವ ಬಳಗ: ಮ್ಯಾಥ್ಯೂ ಕ್ರಾಸ್, ಕ್ರಿಸ್ಟೋಫರ್ ಮ್ಯಾಕ್‌ಬ್ರೈಡ್, ಬ್ರಾಂಡನ್ ಮೆಕ್‌ಮುಲ್ಲೆನ್, ಜಾರ್ಜ್ ಮುನ್ಸಿ, ರಿಚಿ ಬೆರಿಂಗ್‌ಟನ್ (ನಾಯಕ), ತೋಮಸ್ ಮ್ಯಾಕಿಂಟೋಷ್ (ವಿಕೆಟ್ ಕೀಪರ್), ಮೈಕೆಲ್ ಲೀಸ್ಕ್, ಕ್ರಿಸ್ ಗ್ರೀವ್ಸ್, ಮಾರ್ಕ್ ವ್ಯಾಟ್, ಸಫ್ಯಾನ್ ಷರೀಫ್, ಕ್ರಿಸ್ ಸೋಲ್
ಬೆಂಚ್: ಜ್ಯಾಕ್ ಜಾರ್ವಿಸ್, ಅಲಾಸ್ಡೇರ್ ಇವಾನ್ಸ್, ಹಮ್ಜಾ ತಾಹಿರ್, ಆಡ್ರಿಯನ್ ನೀಲ್

Story first published: Wednesday, June 21, 2023, 23:17 [IST]
Other articles published on Jun 21, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+