World Cup Qualifiers: ಸ್ಕಾಟ್ಲೆಂಡ್ ವಿರುದ್ಧ ಶ್ರೀಲಂಕಾಗೆ ಸುಲಭ ಗೆಲುವು
ವಿಶ್ವಕಪ್ ಟೂರ್ನಿಯ ಪ್ರಧಾನ ಸುತ್ತಿಗೇರಲು ನಡೆಯುತ್ತಿರುವ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಇಂದು ಶ್ರೀಲಂಕಾ ಹಾಗೂ ಸ್ಕಾಟ್ಲೆಂಡ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಶ್ರೀಲಂಕಾ ತಂಡ ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದು ಆಡಿದ ನಾಲ್ಕು ಪಂದ್ಯಗಳಲ್ಲಿ ಗೆದ್ದು ಸೂಪರ್ ಸಿಕ್ಸ್‌ಗೆ ಪ್ರವೇಶಿಸಿದೆ.
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಶ್ರೀಲಂಕಾ 49.3 ಓವರ್‌ಗಳಲ್ಲಿ 245 ರನ್‌ಗಳನ್ನು ಗಳಿಸಿ ಆಲೌಟ್ ಆಯಿತು. ಫಾತುಮ್ ನಿಸ್ಸಂಕ ಹಾಗೂ ಅಸಲಂಕಾ ಹೊರತುಪಡಿಸಿದರೆ ಉಳಿದ ಯಾವ ಆಟಗಾರ ಕೂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಈ ಇಬ್ಬರು ಆಟಗಾರರು ಅರ್ಧ ಶತಕ ಸಿಡಿಸಿ ಮಿಂಚಿದರು. ಹೀಗಾಗಿ 50 ಓವರ್‌ಗಳಿಗೂ ಮುನ್ನವೇ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಶ್ರೀಲಂಕಾ ಆಲೌಟ್ ಆಗಿದ್ದು ಸ್ಕಾಟ್ಲೆಂಡ್‌ಗೆ ಸಾಧಾರಣ ಗುರಿ ನೀಡಿತು.

ಆದರೆ ಶ್ರೀಲಂಕಾ ಗಳಿಸಿದ ಈ ಸ್ಕೋರ್ ಸ್ಕಾಟ್ಲೆಂಡ್‌ಗೆ ಅಸಾಧ್ಯ ಮೊತ್ತವಾಯಿತು. ಸ್ಕಾಟ್ಲೆಂಡ್ ಪರವಾಗಿ ಕೇವಲ ಓರ್ವ ಆಟಗಾರ ಮಾತ್ರವೇ ಅರ್ಧ ಶತಕ ಸಿಡಿಸಿದರು. ಮಧ್ಯಮ ಕ್ರಮಾಂಕದ ಆಟಗಾರ ಕ್ರಿಸ್ ಗ್ರೇವ್ಸ್ 56 ರನ್‌ಗಳಿಸಿ ಅಜೇಯವಾಗುಳಿದಿದ್ದು ಬಿಟ್ಟರೆ ಉಳಿದ ಎಲ್ಲಾ ಬ್ಯಾಟರ್‌ಗಳು ಕೂಡ ನೀರಸ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಸ್ಕಾಟ್ಲೆಂಡ್ ತಂಡ ಈ ಪಂದ್ಯದಲ್ಲಿ 29 ಓವರ್‌ಗಳಲ್ಲಿ 163 ರನ್‌ಗಳಿಸಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿರು. ಈ ಮೂಲಕ ಶ್ರೀಲಂಕಾ 82 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ.
ಇನ್ನು ಈ ಪಂದ್ಯದಲ್ಲಿ ಸ್ಕಾಟ್ಲೆಂಡ್ ಪರವಾಗಿ ಕ್ರಿಸ್ ಗ್ರೇವ್ಸ್ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡು ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮೊದಲಿಗೆ ಬೌಲಿಂಗ್‌ನಲ್ಲಿ 6.3 ಓವರ್‌ಗಳಲ್ಲಿ 32 ರನ್‌ಗಳನ್ನು ನೀಡಿ 4 ವಿಕೆಟ್‌ಗಳನ್ನು ಪಡೆದು ಶ್ರೀಲಂಕಾಗೆ ಆಘಾತ ನಿಡಿದರೆ ನಂತರ ಬ್ಯಾಟಿಂಗ್‌ನಲ್ಲಿಯೂ ಸ್ಕಾಟ್ಲೆಂಟ್‌ಗೆ ಆಸರೆಯಾದರು. ಬ್ಯಾಟಿಂಗ್‌ನಲ್ಲಿ ಗ್ರೇವ್ಸ್ 56 ರನ್‌ಗಳ ಅಮೂಲ್ಯ ಕೊಡುಗೆ ನೀಡಿ ಮಿಂಚಿದ್ದಾರೆ.
ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ದಸುನ್ ಶನಕ (ಸಿ), ವನಿಂದು ಹಸರಂಗ, ಮಹೇಶ ತೀಕ್ಷಣ, ಲಹಿರು ಕುಮಾರ, ಕಸುನ್ ರಜಿತ
ಬೆಂಚ್: ದುಶನ್ ಹೇಮಂತ, ಚಾಮಿಕ ಕರುಣಾರತ್ನ, ಮತೀಶ ಪತಿರಣ, ದುಷ್ಮಂತ ಚಮೀರ
ಸ್ಕಾಟ್ಲೆಂಡ್ ಆಡುವ ಬಳಗ: ಕ್ರಿಸ್ಟೋಫರ್ ಮ್ಯಾಕ್‌ಬ್ರೈಡ್, ಮ್ಯಾಥ್ಯೂ ಕ್ರಾಸ್ (ವಿಕೆಟ್ ಕೀಪರ್), ಬ್ರಾಂಡನ್ ಮೆಕ್‌ಮುಲ್ಲೆನ್, ರಿಚಿ ಬೆರಿಂಗ್‌ಟನ್ (ನಾಯಕ), ತೋಮಸ್ ಮ್ಯಾಕಿಂತೋಷ್, ಮೈಕೆಲ್ ಲೀಸ್ಕ್, ಕ್ರಿಸ್ ಗ್ರೀವ್ಸ್, ಮಾರ್ಕ್ ವ್ಯಾಟ್, ಕ್ರಿಸ್ ಸೋಲ್, ಜ್ಯಾಕ್ ಜಾರ್ವಿಸ್, ಅಲಾಸ್ಡೇರ್ ಇವಾನ್ಸ್
ಬೆಂಚ್: ಸಫ್ಯಾನ್ ಷರೀಫ್, ಜಾರ್ಜ್ ಮುನ್ಸಿ, ಹಮ್ಜಾ ತಾಹಿರ್, ಆಡ್ರಿಯನ್ ನೀಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications