For Quick Alerts
ALLOW NOTIFICATIONS  
For Daily Alerts
 

ನಾನು ಕಂಡ ಅತ್ಯಂತ ಧೈರ್ಯಶಾಲಿ ನಿರ್ಧಾರವದು: ಪ್ಯಾಟ್ ಕಮ್ಮಿನ್ಸ್ ನಾಯಕತ್ವಕ್ಕೆ ಬಾರ್ಡರ್ ಮೆಚ್ಚುಗೆ

ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ ನಡೆಗೆ ಅಲಾನ್ ಬಾರ್ಡರ್ ಭಾರೀ ಮೆಚ್ಚುಗೆ ಸೂಚಿಸಿದ್ದಾರೆ. ನಾಯಕನೊಬ್ಬ ಮಾಡಿದ ಅತ್ಯಂತ ಧೈರ್ಯಶಾಲಿ ನಿರ್ಧಾರ ಅದು ಎಂದು ಕೊಂಡಾಡಿದ್ದಾರೆ ಅಲಾನ್ ಬಾರ್ಡರ್.

ಟಾಸ್ ಸಂದರ್ಭದಲ್ಲಿ ಕಮ್ಮಿನ್ಸ್ ತಗೆದುಕೊಂಡ ನಿರ್ಧಾರ ಆರಂಭದಲ್ಲಿ ಬಹುತೇಕರನ್ನು ಅಚ್ಚರಿಗೆ ದೂಡಿತ್ತು. ಆಸಿಸ್ ಪರ ಅನೇಕ ಕ್ರಿಕೆಟಿಗರು ಈ ನಿರ್ಧಾರಕ್ಕೆ ಟೀಕೆಗಳನ್ನು ಕೂಡ ವ್ಯಕ್ತಪಡಿಸಿದ್ದರು. ಆದರೆ ಅಂತಿಮವಾಗಿ ಈ ನಿರ್ಧಾರವೇ ಪಂದ್ಯದ ಮಾಸ್ಟರ್ಸ್ಟ್ರೋಕ್ ಎಂದು ಪ್ರಶಂಸಿಸಲ್ಪಡುತ್ತಿದೆ.

World Cup: says Allan Border Pat Cummins bowl first call in final one of bravest decision

ಕಮ್ಮಿನ್ಸ್ ನಿರ್ಧಾರದ ಹಿಂದಿನ ತಾರ್ಕಿಕತೆಯು ಬಹುಮುಖವಾಗಿತ್ತು. ಅಹಮದಾಬಾದ್‌ನ ಪಿಚ್ ನಿಧಾನಗತಿಯಲ್ಲಿ ಆಡುತ್ತದೆ ಮತ್ತು ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಇದು ಆಸ್ಟ್ರೇಲಿಯಾದ ಬ್ಯಾಟರ್‌ಗಳಿಗೆ ಮಹತ್ವದ ಸವಾಲನ್ನು ಒಡ್ಡಬಹುದಿತ್ತು.

ಫಾಕ್ಸ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಬಾರ್ಡರ್ ಮೊದಲು ಬೌಲಿಂಗ್ ಮಾಡುವ ನಿರ್ಧಾರಕ್ಕಾಗಿ ಆಸೀಸ್ ನಾಯಕನನ್ನು ಶ್ಲಾಘಿಸಿದರು. ಕ್ರಿಕೆಟ್ ದಂತಕಥೆ ಬಾರ್ಡರ್ ಆಸಿಸ್ ನಾಯಕನ ಈ ನಿರ್ಧಾರ ತನಗೆ ಅಚ್ಚರಿಯುಂಟು ಮಾಡಿತ್ತು ಎಂದಿದ್ದಾರೆ. ಪ್ಯಾಟ್ ಕಮ್ಮಿನ್ಸ್ ಪರಿಸ್ಥಿತಿಯನ್ನು ಅ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿದ್ದು ಈ ನಿರ್ಧಾರ ಸರಿಯಾದುದಲ್ಲ ಎಂದು ಭಾವಿಸಿದ್ದೆ ಎಂದಿದ್ದಾರೆ.

'ಪ್ಯಾಟ್ ಕಮ್ಮಿನ್ಸ್ ಅವರ "ಬೌಲ್ ಫಸ್ಟ್" ನಿರ್ಧಾರ ವಿಶ್ವಕಪ್ ಫೈನಲ್‌ನಲ್ಲಿ ನಾನು ಕಂಡಂತೆ ನಾಯಕನೊಬ್ಬ ತೆಗೆದುಕೊಂಡ ಅತ್ಯಂತ ಧೈರ್ಯಶಾಲಿಯಾದ ನಿರ್ಧಾರ. ಪ್ರಾಮಾಣಿಕವಾಗಿ ಹೇಳಬೇಕೆಂದರೆ "ನಾವು ಬೌಲಿಂಗ್ ಆಯ್ಕೆ ಮಾಡುತ್ತೇವೆ" ಎಂದು ಪ್ಯಾಟ್ ಹೇಳುವುದನ್ನು ನಾನು ಕೇಳಿದಾಗ ನಾನು ಅಚ್ಚರಿಗೊಂಡೆ "ಓಹ್, ಪ್ಯಾಟ್ರಿಕ್ ನೀವು ಪ್ಲಾಟ್ ಕಳೆದುಕೊಂಡಿದ್ದೀರಿ" ಎನಿಸಿತ್ತು" ಎಂದು ಅಲಾನ್ ಬಾರ್ಡರ್ ಪ್ರತಿಕ್ರಿಯೆ ನೀಡಿದ್ದಾರೆ.

Story first published: Tuesday, November 21, 2023, 23:34 [IST]
Other articles published on Nov 21, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+