ಟೀಮ್ ಇಂಡಿಯಾದ ಒಳ್ಳೆಯ, ಕೆಟ್ಟ ಫೀಲ್ಡರ್‌ಗಳ ಹೆಸರಿಸಿದ ಫೀಲ್ಡಿಂಗ್ ಕೋಚ್!

ಲಂಡನ್, ಜೂನ್ 20: ಈಗ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯನ್ನೇ ಪರಿಗಣನೆಗೆ ತೆಗೆದುಕೊಂಡರೆ, ಫೀಲ್ಡಿಂಗ್ ಎಲ್ಲಾ ತಂಡಗಳಿಗೂ ಅತೀ ಪ್ರಮುಖ ವಿಚಾರ. ಫೀಲ್ಡಿಂಗ್ ಚೆನ್ನಾಗಿಲ್ಲದ ತಂಡ ಟೂರ್ನಿಯ ಅಗ್ರ 4ರಲ್ಲಿ ಸ್ಥಾನ ಪಡೆಯಲಿದೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿಯಿಲ್ಲ. ಹಾಗಾದರೆ ಫೀಲ್ಡಿಂಗ್ ವಿಚಾರದಲ್ಲಿ ಭಾರತದ ಸ್ಥಿತಿ ಹೇಗಿದೆ?
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಭಾರತ ಕ್ರಿಕೆಟ್ ತಂಡ ಗಣನೀಯವಾಗಿ ಬದಲಾವಣೆ ಕಾಣುವಲ್ಲಿ ಟೀಮ್ ಇಂಡಿಯಾದ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಅವರ ಪಾತ್ರ ಮಹತ್ವದ್ದು. 2017ರ ಚಾಂಪಿಯನ್ಸ್ ಟ್ರೋಫಿಯ ಬಳಿಕ ಫೀಲ್ಡಿಂಗ್ ಗುಣಮಟ್ಟದ ಬಗ್ಗೆ ಶ್ರೀಧರ್ ವಿಶೇಷ ಲಕ್ಷ್ಯ ಹರಿಸಿದ್ದರು. ಇದರ ಫಲವಾಗಿ ಭಾರತ ಫೀಲ್ಡಿಂಗ್ ವಿಚಾರದಲ್ಲಿ ಈಗ ಸಾಕಷ್ಟು ಸುಧಾರಣೆ ಕಂಡಿದೆ.
ಆದರೂ ಫೀಲ್ಡಿಂಗ್ ವಿಚಾರದಲ್ಲಿ ಭಾರತ ಪ್ಲಸ್ಸು, ಮೈನಸ್ಸು ಅಂಶಗಳನ್ನು ಒಳಗೊಂಡಿದೆ. ಅವು ಯಾವುದು ಎಂಬುದನ್ನು ಶ್ರೀಧರ್ ಅವರು ಇಎಸ್‌ಪಿಎನ್ ಕ್ರಿಕ್ ಇನ್ಫೋ ಜೊತೆಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯ
'2017ರ ಚಾಂಪಿಯನ್ಸ್ ಟ್ರೋಫಿ ಆರಂಭಿಕ ಪಂದ್ಯದಿಂದಲೇ ನಾವು ಕುದಿಯುವಂತಾಯ್ತು. ಮೊದಲ ಪಂದ್ಯವನ್ನು ನಾವು ಸ್ವಲ್ಪದರಲ್ಲಿ ಗೆದ್ದೆವು. ಆದರೆ ನಾವು ಆ ಪಂದ್ಯದಲ್ಲಿ ಒಂದಿಷ್ಟು ಕ್ಯಾಚ್‌ಗಳನ್ನು ಬಿಟ್ಟಿದ್ದೆವು. ಶ್ರೀಲಂಕಾ ವಿರುದ್ಧ ಪಂದ್ಯ ಸೋತು, ದಕ್ಷಿಣ ಆಫ್ರಿಕಾ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ನಾವು ಅದ್ಭುತ ಪೀಲ್ಡಿಂಗ್ ಪ್ರದರ್ಶಿಸಿದ್ದೆವು. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಎಬಿ ಡಿವಿಲಿಯರ್ಸ್ ಅವರನ್ನು ಔಟ್ ಮಾಡಿದರು, ಜಸ್‌ಪ್ರೀತ್ ಬೂಮ್ರಾ ಕೂಡ ಒಂದು ರನ್ ಔಟ್‌ಗೆ ಕಾರಣರಾಗಿದ್ದರು' ಎಂದು ಎರಡು ವರ್ಷಗಳ ಹಿಂದಿನ ಪಂದ್ಯವನ್ನು ಶ್ರೀಧರ್ ಸ್ಮರಿಸಿಕೊಂಡರು.

ಆತ್ಮ ವಿಶ್ವಾಸ ಹೆಚ್ಚಿಸುತ್ತದೆ
ಯೋ ಯೋ ಟೆಸ್ಟ್ ಪ್ರಾಮುಖ್ಯತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಶ್ರೀಧರ್, 'ಯೋ-ಯೊ ಪರೀಕ್ಷೆಯು ನಿಮ್ಮ ದೇಹದ ಶಕ್ತಿಯ ವ್ಯವಸ್ಥೆಗಳ ಸಮಗ್ರ ಮೌಲ್ಯಮಾಪನವಾಗಿದೆ. ಕ್ರಿಕೆಟ್ 6+ಗಂಟೆಗಳ ಕಾಲ ಮುಂದುವರೆಯುವ ಆಟ. ಇಲ್ಲಿ ನಮ್ಮ ಸಹಿಷ್ಣುತೆಯ ಮಟ್ಟ, ಚುರುಕುತನ ಪರೀಕ್ಷೆಗೊಳಗಾಗುತ್ತದೆ. ಯೋ ಯೋ ಟೆಸ್ಟ್ ನಲ್ಲಿ ಆಟಗಾರನೊಬ್ಬ ನಿಗದಿಪಡಿಸಿದ ಕನಿಷ್ಠ ಅಂಕವನ್ನು ದಾಟಿಸಿ ಫಿಟ್ನೆಸ್ ತೋರಿಸಿಕೊಳ್ಳುತ್ತಾನೆ ಎಂದಾದರೆ ಅದು ಅವನ ಆತ್ಮ ವಿಶ್ವಾಸವನ್ನು ಹೆಚ್ಚಿಸೋದಷ್ಟೇ ಅಲ್ಲ, ಮತ್ತೆ ಮತ್ತೆ ತಾನಿದನ್ನು ಮಾಡಲು ಶಕ್ತ ಎಂಬ ಧೈರ್ಯವನ್ನೂ ಅದು ಅವನಲ್ಲಿ ತುಂಬುತ್ತದೆ' ಎಂದು ವಿವರಿಸಿದರು.

ಭಾರತ ತಂಡದ ದುರ್ಬಲ ಫೀಲ್ಡರ್?
ಕೊಹ್ಲಿ ಬಳಗದಲ್ಲಿ ದುರ್ಬಲ ಫೀಲ್ಡರ್ ಯಾರು ಎಂಬ ಪ್ರಶ್ನಗೆ ನಗುತ್ತಾ ಮಾತಿಗಿಳಿದ ಶ್ರೀಧರ್, 'ಅದುಯುಜುವೇಂದ್ರ ಚಾಹಲ್. ಆದರೆ ಚಾಹಲ್ ಈಗ ಸುಧಾರಣೆ ಕಾಣುತ್ತಿದ್ದಾರೆ. ಚಾಹಲ್ ದುರ್ಬಲ ಫೀಲ್ಡಿಂಗ್‌ಗೆ ಅವರ ಸಪೂರ, ಪುಟಾಣಿ ಕೈ ಬೆರಳುಗಳೂ ಒಂದು ನೆಪವೆ. ಬೌಂಡರಿ ಬದಿಯಲ್ಲಿ ಚಾಹಲ್ ಉತ್ತಮ ಫೀಲ್ಡಿಂಗ್ ಮಾಡುತ್ತಾರೆ. ಚಾಹಲ್ ತುಂಬಾ ವೇಗವಾಗಿ ಓಡಬಲ್ಲರೂ ಕೂಡ. ಆದರೆ ಕ್ಯಾಚ್ ವೇಳೆ ಅವರ ಬೆರಳುಗಳು ಅಷ್ಟೇನು ಸ್ಪಂದಿಸಲ್ಲ. ಆದಾಗ್ಯೂ ಚಾಹಲ್ ಈಗ ಕ್ಯಾಚ್ ವಿಚಾರದಲ್ಲಿ ಸಾಕಷ್ಟು ಸುಧಾರಿಸಿದ್ದಾರೆ' ಎಂದರು.

ತಂಡದಲ್ಲಿ ಅದ್ಭುತ ಫೀಲ್ಡರ್
ಶ್ರೀಧರ್ ಹೇಳುವ ಪ್ರಕಾರ ನಾಯಕ ವಿರಾಟ್ ಕೊಹ್ಲಿ ಸದ್ಯ ತಂಡದಲ್ಲಿರುವ ಅಧ್ಭುತ ಫೀಲ್ಡರ್. ಕೊಹ್ಲಿ ಹೆಸರನ್ನು ಹೇಳುತ್ತ ಶ್ರೀಧರ್, ರವೀಂದ್ರ ಜಡೇಜಾ ಹೆಸರನ್ನು ಉಲ್ಲೇಖಿಸಲು ಮರೆಯಲಿಲ್ಲ. ಮಿಂಚಿನ ವೇಗದ ಫೀಲ್ಡಿಂಗ್‌ಗೆ ಹಸರಾಗಿರುವ ಜಡೇಜಾ ಸದ್ಯ ಭಾರತ ವಿಶ್ವಕಪ್ ತಂಡದಲ್ಲಿ ಇದ್ದಾರಾದರೂ, ಯಾವುದೇ ಪಂದ್ಯಗಳಲ್ಲಿ ಆಡಿಲ್ಲ. ಹೀಗಾಗಿ ಬೆಸ್ಟ್ ಫೀಲ್ಡರ್ ಆಗಿ ಕೊಹ್ಲಿ ಗುರುತಿಸಿಕೊಂಡಿದ್ದಾರೆ. ಇಡೀ ತಂಡವನ್ನು ಫೀಲ್ಡಿಂಗ್ ವಿಚಾರದಲ್ಲಿ ನೋಡಿದರೆ ಭಾರತ ಉತ್ತಮ ಸ್ಥಿತಿಯಲ್ಲಿದೆ ಎಂದು ಶ್ರೀಧರ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications