Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದಕ್ಷಿಣ ಆಪ್ರಿಕಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದ ನ್ಯೂಜಿಲೆಂಡ್

ತಿರುವನಂತಪುರಂನಲ್ಲಿ ದಕ್ಷಿಣ ಆಪ್ರಿಕಾ ಹಾಗೂ ನ್ಯೂಜಿಲೆಂಡ್ ತಂಡಗಳು ಅಭ್ಯಾಸ ಪಂದ್ಯದಲ್ಲಿ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಗೆಲುವು ಸಾಧಿಸಿದೆ. ಮೊದಲಿಗೆ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ ಕಿವೀಸ್ ತಮಡ ಬಳಿಕ ಬೌಲಿಂಗ್‌ನಲ್ಲಿಯೂ ಮಿಂಚಿತು. ಮಳೆಯಿಂದ ಅಡ್ಡಿಯಾದ ಕಾರಣ ಡಕ್ವರ್ತ್ ಲೂಯಿಸ್ ನಿಯಮದಲ್ಲಿ ಕಿವೀಸ್ ಪಡೆ 7 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದೆ.

ಮೊದಲಿಗೆ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡಕ್ಕೆ ಡೆವೋನ್ ಕಾನ್ವೆ ಉತ್ತಮ ಆರಂಭ ನೀಡಿದರು. ನಾಯಕ ಕೇನ್ ಚಿಲಿಯಮ್ಸನ, ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್ ಕೂಡ ಅದ್ಭುತ ಪ್ರದರ್ಶನ ನೀಡಿದ್ದಾರೆ. ಕಾನ್ವೆ 73 ಎಸೆತಗಳಲ್ಲಿ 78 ರನ್‌ಗಳನ್ನು ಬಾರಿಸಿದ್ದರೆ ಲ್ಯಾಥಮ್ 52 ರನ್ ಬಾರಿಸಿದ್ದಾರೆ. ವಿಲಿಯಮ್ಸನ್ 37 ರನ್, ಗ್ಲೆನ್ ಫಿಲಿಪ್ಸ್ 43 ರನ್‌ಗಳನ್ನು ಗಳಿಸಿದರು. ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 321 ರನ್‌ಗಳನ್ನು ಗಳಿಸು ಶಕ್ತವಾಯಿತು.

World cup warmup Match: New Zealand beat South Africa by 7 runs in DL method

ಇನ್ನು ನ್ಯೂಜಿಲೆಂಡ್ ತಂಡ ನೀಡಿದ ಈ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ದಕ್ಷಿಣ ಆಪ್ರಿಕಾ ತಂಡ ಮೊದಲ ವಿಕೆಟ್ ಬೇಗನೆ ಕಳೆದುಕೊಂಡರೂ ಕ್ವಿಂಟನ್ ಡಿಕಾಕ್ ಅದ್ಭುತ ಪ್ರದರ್ಶನ ನೀಡಿ ಗಮನಸೆಳೆದರು. ಎರಡನೇ ವಿಕೆಟ್‌ಗೆ ಡಿಕಾಕ್ ಹಾಗೂ ರಾಸ್ಸಿ ವಾನ್‌ಡರ್ ಡುಸೆನ್ ಭರ್ಜರಿ ಜೊತೆಯಾಟ ನೀಡಿದ್ದರು. ಡುಸೆನ್ 51ರನ್‌ಗಳನ್ನು ಗಳಿಸಿದರೆ ಡಿಕಾಕ್ 84 ರನ್‌ಗಳನ್ನು ಗಳಿಸಿ ಅಜೇಯವಾಗುಳಿದಿದ್ದಾರೆ.

ಹೆನ್ರಿಕ್ ಕ್ಲಾನೆಸ್ 39 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ಇನ್ನು ಡೇವಿಡ್ ಮಿಲ್ಲರ್ 18 ರನ್‌ಗಳಿಸಿ ಡಿಕಾಕ್ ಜೊತೆಗೆ ಜೊತೆಯಾಟ ಕಟ್ಟಲು ಆರಂಭಿಸುತ್ತಿದ್ದಾಗ ಮಳೆ ಸುರಿಯಲು ಆರಂಭಿಸಿತು. ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ತಂಡ 37 ಓವರ್‌ಗಳಲ್ಲಿ 211 ರನ್‌ಗಳನ್ನು ಗಳಿಸಿ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಇನ್ನು ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ ಪಂದ್ಯ ಮುಂದುವರಿಯಲು ಅವಕಾಶ ದೊರೆಯಲಿಲ್ಲ. ಹೀಗಾಗಿ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ದಕ್ಷಿಣ ಆಫ್ರಿಕಾ ಈ ಹಂತದಲ್ಲಿ ನ್ಯೂಜಿಲೆಂಡ್‌ಗಿಂತ 7 ರನ್‌ಗಳಿಂದ ಹಿಂದಿತ್ತು. ಹೀಗಾಗಿ ಕಿವೀಸ್ ಪಡೆ ಈ ಅಭ್ಯಾಸ ಪಂದ್ಯವನ್ನು ಗೆದ್ದುಕೊಂಡಂತಾಗಿದೆ.

ನ್ಯೂಜಿಲೆಂಡ್: ಡೆವೊನ್ ಕಾನ್ವೇ, ವಿಲ್ ಯಂಗ್, ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಡ್ಯಾರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ರಚಿನ್ ರವೀಂದ್ರ, ಇಶ್ ಸೋಧಿ, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್, ಟಿಮ್ ಸೌಥಿ

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ, ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಆಂಡಿಲ್ ಫೆಹ್ಲುಕ್ವಾಯೊ, ಜೆರಾಲ್ಡ್ ಕೊಯೆಟ್ಜಿ, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್ಗಿಡಿ, ಲಿಜಾದ್ ವಿಲಿಯಮ್ಸ್, ತಬ್ರೈಜ್ ಶಮ್ಸಿ

Story first published: Monday, October 2, 2023, 23:03 [IST]
Other articles published on Oct 2, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+