ಐಸಿಸಿ ವಿಶ್ವಕಪ್ 2019: ಧೋನಿ ಟೀಕಾಕಾರರಿಗೆ 'ವಾರ್ನ್' ಮಾಡಿದ ಶೇನ್!

ಸಿಡ್ನಿ, ಮೇ 28: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಬೆಂಬಲಕ್ಕೆ ನಿಂತಿರುವ ಆಸ್ಟ್ರೇಲಿಯಾದ ಸ್ಪಿನ್ ದಂತಕತೆ ಶೇನ್ ವಾರ್ನ್, ವಿಶ್ವಕಪ್ ನಲ್ಲಿ ಧೋನಿ ಅವರು ಟೀಮ್ ಇಂಡಿಯಾದ ಪ್ರಮುಖ ಆಟಗಾರ ಎಂದಿದ್ದಾರೆ. ಧೋನಿ ನಿವೃತ್ತಿ ಬಗ್ಗೆ ಮಾತನಾಡುವವರಿಗೂ ತಿರುಗೇಟು ನೀಡಿದ್ದಾರೆ.
ಧೋನಿಯ ನಿವೃತ್ತಿ ಬಗ್ಗೆ ಮಾತನಾಡುವವರನ್ನು ತರಾಟೆಗೆ ತೆಗೆದುಕೊಂಡ ವಾರ್ನ್, 'ಧೋನಿ ನಿವೃತ್ತಿ ಬಗ್ಗೆ ಮಾತನಾಡುವವರು ಧೋನಿಯಲ್ಲಿ, ಯಾಕೆ ನೀವಿನ್ನೂ ನಿವೃತ್ತಿ ಕೊಟ್ಟಿಲ್ಲ ಎಂದು ಪ್ರಶ್ನಿಸುವ ಬದಲು ಯಾಕೆ ನೀವಿನ್ನೂ ಭಾರತ ತಂಡಕ್ಕೆ ಆಡುತ್ತಿದ್ದೀರಿ ಎಂದು ಕೇಳೋದು ಒಳ್ಳೇದು' ಎಂದಿದ್ದಾರೆ.
'ಎಂಎಸ್ ಧೋನಿ ಭಾರತೀಯ ಕ್ರಿಕೆಟ್‌ಗೆ ಬಲುದೊಡ್ಡ ಸೇವೆ ನೀಡಿದವರು. ಭಾರತ ಕ್ರಿಕೆಟ್‌ಗೆ ಏನೆಲ್ಲ ಬೇಕೋ ಅವೆಲ್ಲವನ್ನೂ ಅವರು ನೀಡಿದ್ದಾರೆ. ವಿಶ್ವಕಪ್ ಕ್ರಿಕೆಟ್ ತಂಡದಲ್ಲಿ ಧೋನಿ ಇರಬಾರದಿತ್ತು ಎನ್ನುವ ಕೆಲವರ ಮಾತನ್ನು ನಾನು ಒಪ್ಪುವುದಿಲ್ಲ. ಹಾಗೆ ಹೇಳಲೂ ಬಾರದು' ಎಂದು ವಾರ್ನ್ ಎಚ್ಚರಿಸಿದ್ದಾರೆ.
ಇಂಡೋ ಏಷ್ಯನ್ ನ್ಯೂಸ್ ಸರ್ವೀಸಸ್ (ಐಎಎನ್‌ಎಸ್) ಜೊತೆ ಮಾತನಾಡುತ್ತ ಶೇನ್, 'ಒಬ್ಬ ಆಟಗಾರನಾಗಿ ಎಲ್ಲರಿಗೂ ಗೊತ್ತಿರುವಂತೆ ಧೋನಿಗೆ ತಾನು ನಿವೃತ್ತಿ ನೀಡಲು ಸಕಾಲ ಯಾವುದು ಎಂಬುದು ಚೆನ್ನಾಗೇ ಗೊತ್ತಿದೆ. ಅವರು ಯಾವಾಗ ಬಯಸುತ್ತಾರೋ ಆಗ ಅವರು ನಿವೃತ್ತಿ ಕೊಡುತ್ತಾರೆ. ನಿಮಗ್ಯಾಕೆ ಇಲ್ಲದ ಉಸಾಬರಿ?' ಎಂದು ಪ್ರಶ್ನಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications