ವಿಶ್ವಕಪ್ ಗೆದ್ದ ಈ ಮೂವರು ನಾಯಕರು ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಸೋತಿದ್ದರು!

ವಿಶ್ವ ಕ್ರಿಕೆಟ್‌ನಲ್ಲಿ ಟೆಸ್ಟ್ ಮಾನ್ಯತೆ ಪಡೆದಿರುವ 12 ತಂಡಗಳ ಪೈಕಿ ಜಿಂಬಾಬ್ವೆ ಕೂಡ ಒಂದು. ಆಫ್ರಿಕಾ ರಾಷ್ಟ್ರಗಳ ಪೈಕಿ ಟೆಸ್ಟ್ ಮಾನ್ಯತೆ ಒಡೆದ ಕೇವಲ ಎರಡು ದೇಶಗಳ ಪೈಕಿ ಜಿಂಬಾಬ್ವೆ ಕುಡ ಒಂದು ಎಂಬುದು ಅದರ ಹೆಗ್ಗಳಿಕೆ. ದಕ್ಷಿಣ ಆಫ್ರಿಕಾ ಮತ್ತೊಂದು ತಂಡವಾಗಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ವಿಶ್ವದ ಅಗ್ರ ತಂಡಗಳಲ್ಲಿ ಒಂದಾಗಿ ಮಿಂಚುತ್ತಿದ್ದರೂ ಜಿಂಬಾಬ್ವೆ ತಂಡ ಆ ಸ್ಥಾನವನ್ನು ಪಡೆಯಲು ಈವರೆಗೆ ಸಾಧ್ಯವಾಗಿಲ್ಲ.
ಆಫ್ರಿಕಾದ ಈ ದೇಶ ಕ್ರಿಕೆಟ್‌ನಲ್ಲಿ ದುರ್ಬಲ ತಂಡ ಎನಿಸಿಕೊಂಡು ಬಂದಿದೆ. ಹೀಗಾಗಿ ಪ್ರಮುಖ ತಂಡಗಳಿಗೆ ಜಿಂಬಾಬ್ವೆ ಸುಲಭ ಸವಾಲು ಎಂಬುದು ಅಭಿಮಾನಿಗಳಿಗೂ ತಿಳಿದಿರುವ ವಿಚಾರ. ಅದೇ ಕಾರಣದಿಂದಾಗಿ ಜಿಂಬಾಬ್ವೆ ವಿರುದ್ಧದ ಸರಣಿ ನಡೆದಾಗ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡುವುದು ನಡೆಯುತ್ತದೆ. ಈ ಬಾರಿ ಭಾರತ ಜಿಂಬಾಬ್ವೆಗೆ ಪ್ರಬವಾಸ ಕೈಗೊಂಡಿರುವ ಸಂದರ್ಭದಲ್ಲಿಯೂ ಇದನ್ನು ಗಮನಿಸಬಹುದು. ಹಾಗಿದ್ದರೂ ಜಿಂಬಾಬ್ವೆ ಕೆಲವು ಸಂದರ್ಭಗಳಲ್ಲಿ ಬಲಿಷ್ಠ ತಂಡಗಳಿಗೆ ಆಘಾತ ನೀಡಿದ ಸಂದರ್ಭಗಳೂ ಇದೆ.
ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಪ್ರತಿಷ್ಠಿತ ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿರುವ ನಾಯಕರು ಕೂಡ ಈ ಜಿಂಬಾಬ್ವೆ ವಿರುದ್ಧ ಸೋಲು ಅನುಭವಿಸಿದ ಉದಾಹರಣೆಯಿದೆ. ಹೀಗೆ ಜಿಂಬಾವ್ವೆ ಸೋಲು ಅನುಭವಿಸಿದ ಮೂವರು ಶ್ರೇಷ್ಠ ನಾಯಕರ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ.

ಜಿಂಬಾಬ್ವೆ ವಿರುದ್ಧ ಸೋಲು ಅನುಭವಿಸಿದ್ದಾರೆ ಎಂಎಸ್ ಧೋನಿ
ಎಂಎಸ್ ಧೋನಿ ಟಿ20 ವಿಶ್ವಕಪ್ ಗೆದ್ದ ವಿಶ್ವದ ಮೊದಲ ನಾಯಕ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಐಸಿಸಿಯ ಎಲ್ಲಾ ಟ್ರೋಫಿಗಳನ್ನು ಗೆದ್ದ ನಾಯಕ ಎಂಬ ಹೆಗ್ಗಳಿಕೆ ಕೂಡ ಧೋನಿಗೆ ಇದೆ. ಆದರೆ ಧೋನಿ ನಾಯಕತ್ವದಲ್ಲಿ ಭಾರತ ಜಿಂಬಾಬ್ವೆ ವಿರುದ್ಧ ಒಂದು ಪಂದ್ಯದಲ್ಲಿ ಸೋಲು ಅನುಭವಿಸಿದೆ. 2016ರಲ್ಲಿ ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದಾಗ ಭಾರತ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾಗವಹಿಸಿತ್ತು. ಈ ಸರಣಿಯನ್ನು ಭಾರತ ಗೆದ್ದುಕೊಂಡಿತ್ತಾದರೂ ಒಂದು ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತ್ತು.

ಮೈಕಲ್ ಕ್ಲಾರ್ಕ್‌ಗೂ ಸೋಲಿನ ರುಚಿ ತೋರಿಸಿದೆ ಜಿಂಬಾಬ್ವೆ
2015ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕತ್ವ ವಹಿಸಿಕೊಂಡಿದ್ದ ಮೈಕಲ್ ಕ್ಲಾರ್ಕ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು. ಕ್ರಿಕೆಟ್ ಇತಿಹಾಸದ ಅತ್ಯುತ್ತಮ ನಾಯಕರಲ್ಲಿ ಒಬ್ಬರು ಎಂದು ಮೈಕಲ್ ಕ್ಲಾರ್ಕ್ ಅವರನ್ನು ಅಭಿಮಾನಿಗಳು ಉಲ್ಲೇಖಿಸುವುದುಂಟು. ಸಾಕಷ್ಟು ಅದ್ಭುತ ಆಟಗಾರರನ್ನು ಒಳಗೊಂಡಿದ್ದ ತಂಡವಾಗಿತ್ತು ಮೈಕಲ್ ಕ್ಲಾರ್ಕ್ ಅವರ ನೇತೃತ್ವದ ಆಸಿಸ್ ಪಡೆ. ಆದರೆ 2014ರಲ್ಲಿ ಏಕದಿನ ತ್ರಿಕೋನ ಸರಣಿಯಲ್ಲಿ ಜಿಂಬಾಬ್ವೆ ತಂಡವನ್ನು ಎದುರಿಸಿದ್ದಾಗ 3 ವಿಕೆಟ್‌ಗಳ ಅಂತರದಿಂದ ಕ್ಲಾರ್ಕ್ ನೇತೃತ್ವದ ಜಿಂಬಾಬ್ವೆ ತಂಡ ಸೋಲು ಅನುಭವಿಸಿತ್ತು.
Maharaja Trophy: ಪ್ಲೇಆಫ್ ಆರಂಭಕ್ಕೆ 6 ಪಂದ್ಯಗಳಷ್ಟೇ ಬಾಕಿ; ಅಂಕಪಟ್ಟಿಯಲ್ಲಿ ಬೆಂಗಳೂರು ಟಾಪ್!

ಅರ್ಜುನ ರಣತುಂಗಾಗೂ ಜಿಂಬಾಬ್ವೆ ವಿರುದ್ಧ ಸೋಲಿನ ನೆನಪು
ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕನಾಗಿದ್ದ ಅರ್ಜುನ ರಣತುಂಗ ನೇತೃತ್ವದಲ್ಲಿ ದ್ವೀಪರಾಷ್ಟ್ರ 1996ರ ವಿಶ್ವಕಪ್ ಗೆದ್ದುಬೀಗಿತ್ತು. ಅರ್ಜುನ ರಣತುಂಗಾ ನೇತೃತ್ವದಲ್ಲಿ ಶ್ರೀಲಂಕಾ ತಂಡ ಜಿಂಬಾಬ್ವೆ ತಂಡವನ್ನು 14 ಪಂದ್ಯಗಳಲ್ಲಿ ಎದುರಿಸಿತ್ತು. ಇದರಲ್ಲಿ 10 ಬಾರಿ ಶ್ರೀಲಂಕಾ ತಂಡ ಗೆಲುವು ಸಾಧಿಸಿದ್ದರೆ ಉಳಿದ 4 ಬಾರಿ ಜಿಂಬಾಬ್ವೆ ತಂಡ ಗೆದ್ದು ಸಾಧನೆ ಮಾಡಿದೆ. ಈ ಮೂಲಕ ಶ್ರೀಲಂಕಾ ತಂಡದ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡ ಅರ್ಜುನ ರಣತುಂಗ ಈ ಪಟ್ಟಿಯಲ್ಲಿ ಜಿಂಬಾಬ್ವೆ ವಿರುದ್ಧ ಹೆಚ್ಚು ಸೋಲು ಅನುಭವಿಸಿದ ನಾಯಕನಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications