World Record: 24 ಎಸೆತದಲ್ಲಿ ಶತಕ, ಇನ್ನಿಂಗ್ಸ್‌ನಲ್ಲಿ 22 ಸಿಕ್ಸರ್, 448 ಸ್ಟ್ರೈಕ್ ರೇಟ್, ಇತಿಹಾಸ ನಿರ್ಮಿಸಿದ ಹಮ್ಜಾ
ಕ್ರಿಕೆಟ್ ಅಂಗಳದಲ್ಲಿ ದಿನಕ್ಕೊಂದು ದಾಖಲೆಗಳು ನಿರ್ಮಾಣವಾಗುತ್ತವೆ. ದಿನಕ್ಕೊಬ್ಬ ಸ್ಟಾರ್ ಉದಯಿಸುತ್ತಾನೆ. ಯುರೋಪನಲ್ಲಿ ನಡೆದ ಟಿ20 ಪಂದ್ಯದಲ್ಲೂ ಇಂತಹದ್ದೇ ಒಬ್ಬ ಸೂಪರ್ ಸ್ಟಾರ್ ವಿಶ್ವದ ಚಿತ್ತ ಕದ್ದಿದ್ದಾನೆ. ಈ ಬ್ಯಾಟರ್ ಬ್ಯಾಟಿಂಗ್ ಮೋಡಿಗೆ ವಿಶ್ವವೇ ಒಮ್ಮೆ ಆತನತ್ತ ಮುಖ ಮಾಡಿದೆ.ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದ ಬ್ಯಾಟರ್ ಹಮ್ಜಾ ಸಲೀಂ ದಾರ್ . ಸೋಹಲ್ ಹಾಸ್ಪಿಟಲ್ ವಿರುದ್ಧ ನಡೆದ ಪಂದ್ಯದಲ್ಲಿ ಕ್ಯಾಟಲುನ್ಯ ಜಾಗ್ವಾರ್ ತಂಡದ ಹಮ್ಜಾ ಸಲೀಮ್ ಕ್ರಿಕೆಟ್‌ನ ಐತಿಹಾಸಿಕ ಇನ್ನಿಂಗ್ಸ್‌ನ ಆಡಿದ್ದಾರೆ.
ಹಮ್ಜಾ 43 ಎಸೆತಗಳಲ್ಲಿ 14 ಬೌಂಡರಿ ಮತ್ತು 22 ಸಿಕ್ಸರ್‌ಗಳಿಂದ ಅಜೇಯ 193 ರನ್‌ಗಳನ್ನು ಸಿಡಿಸಿ ಅಬ್ಬರಿಸಿದ್ದಾರೆ. ಇದು ಟಿ10 ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ. ಈ ಇನ್ನಿಂಗ್ಸ್‌ನಲ್ಲಿ ಹಮ್ಜಾ ಕೇವಲ 24 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಈ ಅಜೇಯ ಇನ್ನಿಂಗ್ಸ್‌ನಲ್ಲಿ ಹಮ್ಜಾ ಅವರ ಸ್ಟ್ರೈಕ್ ರೇಟ್ 448.83 ಆಗಿದೆ. ಈ ಇನ್ನಿಂಗ್ಸ್‌ನಲ್ಲಿ ಹಮ್ಜಾ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿದ ಸಾಧನೆಯನ್ನೂ ಮಾಡಿದ್ದಾರೆ.

ಹಮ್ಜಾ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಸಹ ಬಾರಿಸಿದ್ದಾರೆ. 6 ಸಿಕ್ಸರ್‌ಗಳು ಸಿಡಿದ ಓವರ್‌ನಲ್ಲಿ ಒಟ್ಟು 43 ರನ್‌ಗಳು ಹರಿದು ಬಂದಿವೆ. ಇನಿಂಗ್ಸ್‌ನ ಒಂಬತ್ತನೇ ಓವರ್‌ನಲ್ಲಿ, ಮೊಹಮ್ಮದ್ ವಾರಿಸ್ 6 ಸಿಕ್ಸರ್‌ಗಳನ್ನು ನೀಡಿ ಕೈ ಸುಟ್ಟುಕೊಂಡಿದ್ದಾರೆ. ಈ ಓವರ್ ನಲ್ಲಿ ಒಟ್ಟು 9 ಎಸೆತಗಳನ್ನು ಬೌಲ್ ಮಾಡಿದರು, ಇದರಲ್ಲಿ 2 ವೈಡ್‌ಗಳು ಮತ್ತು 1 ನೋ ಬಾಲ್ ಸೇರಿತ್ತು. ಈ ಮೂಲಕ ಹಮ್ಜಾ ವಿಶ್ವದಾಖಲೆಯ ಇನ್ನಿಂಗ್ಸ್ ಪೂರ್ಣಗೊಳಿಸಿದರು.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕ್ಯಾಟಲುನ್ಯ ಜಾಗ್ವಾರ್ 10 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 257 ರನ್ ಗಳಿಸಿತು. ಹಮ್ಜಾಗೆ ಇನ್ನೋಬ್ಬ ಆರಂಭಿಕ ಆಟಗಾರ ಯಾಸಿರ್ ಅಲಿ 19 ಎಸೆತಗಳಲ್ಲಿ ಅಜೇಯ 58 ಸಿಡಿಸಿ ಉತ್ತಮ ಸಾಥ್ ನೀಡಿದರು.
ಗುರಿ ಬೆನ್ನಟ್ಟಿದ ಸೋಹಲ್ ಹಾಸ್ಪಿಟಲ್ 10 ಓವರ್‌ಗಳಲ್ಲಿ 8 ವಿಕೆಟ್‌ಗೆ 104 ರನ್ ಗಳಿಸಲಷ್ಟೇ ಶಕ್ತವಾಯಿತು. ಬ್ಯಾಟಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಹಮ್ಜಾ ಬೌಲಿಂಗ್ ನಲ್ಲೂ ಮಿಂಚಿದರು. ಇವರು ಬೌಲಿಂಗ್‌ನಲ್ಲಿ 3 ವಿಕೆಟ್ ಪಡೆದರು.
Story first published: Friday, December 8, 2023, 15:36 [IST]
Other articles published on Dec 8, 2023
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications