ಬಸ್ಸಿನಲ್ಲೇ ಟೀಂ ಇಂಡಿಯಾದ ರಂಗು ರಂಗಿನ ಹೋಳಿ!
ಬೆಂಗಳೂರು, ಮಾರ್ಚ್ 24: ಬಾಂಗ್ಲಾದೇಶ ವಿರುದ್ಧದ ವಿಶ್ವ ಟಿ20 ಪಂದ್ಯದಲ್ಲಿ 1 ರನ್ ಗಳ ರೋಚಕ ಜಯದ ಸಂಭ್ರಮವನ್ನು ಟೀಂ ಇಂಡಿಯಾ ಹೋಳಿ ಹಬ್ಬದ ಜತೆ ಆಚರಿಸಿದೆ. ಟೀಂ ಇಂಡಿಯಾ ಆಟಗಾರರು ಮಾರ್ಚ್ 24 ರಂಗು ರಂಗಿನ ಹೋಳಿ ಹಬ್ಬವನ್ನು ಬಸ್ಸಿನಲ್ಲಿ ಒಬ್ಬರಿಗೊಬ್ಬರು ಬಣ್ಣ ಎರಚಿಕೊಂಡು ಸಂಭ್ರಮದಿಂದ ಆಚರಿಸಿದರು.
ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ | ಟೂರ್ನಿಗೆ ಫುಲ್ ಗೈಡ್
ಮಾರ್ಚ್ 23 ಬುಧವಾರ ಬಾಂಗ್ಲಾ ವಿರುದ್ಧ ಗೆದ್ದ ಖುಷಿಯಲ್ಲಿ ಟೀಂ ಇಂಡಿಯಾದ ಉಪನಾಯಕ ವಿರಾಟ್ ಕೊಹ್ಲಿ ಉಳಿದ ಆಟಗಾರರ ಮುಖಕ್ಕೆ ಬಣ್ಣ ಎರಚಿ ಸಂಭ್ರಮಸಿದರು. [ಗವಾಸ್ಕರ್ ವಿರುದ್ಧ ಧೋನಿ, ಬಿಗ್ ಬಿ ಕಿಡಿಕಾರಿದ್ದೇಕೆ?]

ಹೋಳಿ ಸಂಭ್ರಮದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ, ಹರ್ಭಜನ್ ಸಿಂಗ್, ರೋಹಿತ್ ಶರ್ಮ, ಯುವರಾಜ್ ಸಿಂಗ್, ಶಿಖರ್ ಧವನ್ ಇವರೆಲ್ಲರು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಾ ಬಣ್ಣ ಹಾಕಿ ಸಂಭ್ರಮದಲ್ಲಿ ತೇಲಾಡಿದರು.[ಕೊನೆ ಓವರ್ ಥ್ರಿಲ್ಲರ್, ಧೋನಿ, ಪಾಂಡ್ಯ ಸೂಪರ್]
ಬಾಂಗ್ಲಾ ವಿರುದ್ಧ ಜಯಗಳಿಸಿ ಉಪಾಂತ್ಯದ ಸ್ಥಾನಕ್ಕೆ ಕಾಲಿಡಲು ಇನ್ನೊಂದು ಮೆಟ್ಟಿಲು ಬಾಕಿ ಇದೆ. ಮಾರ್ಚ್ 27 ರಂದು ಭಾನುವಾರ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ.[ಧೋನಿಗೆ ಸಿಟ್ಟು ಬಂದಿದ್ದು ಏಕೆ?]

ಆ ಪಂದ್ಯದಲ್ಲಿ ಭಾರತ ಗೆಲವು ಪಡೆದುಕೊಂಡರೆ ಸೆಮೀಸ್ ಗ್ಯಾರಂಟಿ ಎನ್ನುವಂತಾಗುತ್ತದೆ. ಜೊತೆಗೆ ರನ್ ರೇಟ್ ಲೆಕ್ಕಾಚಾರವೂ ಇದೆ. ಟೀಂ ಇಂಡಿಯಾದ ಪುರುಷ ಹಾಗೂ ಮಹಿಳೆಯರ ಹೋಳಿ ಹಬ್ಬದ ಸಂಭ್ರಮಾಚರಣೆಯ ಟ್ವೀಟ್ ಇಲ್ಲಿದೆ.[ಪಾಂಡ್ಯಾಗೆ ಧೋನಿ ನೀಡಿದ್ದ ಸಲಹೆ ಏನು?]
Story first published: Wednesday, January 3, 2018, 10:03 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications