ವಿಶ್ವ ಟಿ20ಗಾಗಿ ಟೀಂ ಇಂಡಿಯಾಕ್ಕೆ ಸಕತ್ ಟ್ರೆಂಡಿ ದಿರಿಸು
ಬೆಂಗಳೂರು, ಮಾ.03: ವಿಶ್ವ ಟಿ20 ಟೂರ್ನಿ ಆಡುವ ಟೀಂ ಇಂಡಿಯಾಕ್ಕೆ ಸಕತ್ ಟ್ರೆಂಡಿ ದಿರಿಸು ಸಿಕ್ಕಿದೆ. ಐಸಿಸಿ ವಿಶ್ವಕಪ್ 2015 ರ ನಂತರ ವಿಶ್ವ ಟ್ವೆಂಟಿ20 ಟೂರ್ನಿಗಾಗಿ ವಿಶೇಷ ವಿನ್ಯಾಸದ ದಿರಿಸುಗಳನ್ನು ಆಟಗಾರರಿಗೆ ನೈಕ್ ಕಂಪನಿ ವಿನ್ಯಾಸಗೊಳಿಸಿದೆ.
ನೈಕ್ ಪ್ರಾಯೋಜಕತ್ವದ ಜರ್ಸಿ ಹಾಗೂ ಕಿಟ್ ಗಳನ್ನು ಭಾರತದಲ್ಲಿ ನಡೆಯುವ ವಿಶ್ವ ಟ್ವೆಂಟಿ20 ಟೂರ್ನಿಯಲ್ಲಿ ಟೀಂ ಇಂಡಿಯಾ ಬಳಸಲಿದೆ. ವಿಶ್ವಕಪ್ 2015 ಕ್ಕಾಗಿ ಪರಿಸರ ಪ್ರೇಮ ಜಾಗೃತಿ ಮಾಡುವ ಇಂಥ ಶರ್ಟ್ ನೀಡಲಾಗಿತ್ತು, ಪ್ರತಿಯೊಂದು ಶರ್ಟ್ 33 ಪ್ಲಾಸ್ಟಿಕ್ ಬಾಟಲ್ ಬಳಸಿ ತಯಾರಿಸಲಾಗಿತ್ತು. [ಭಾರತ ವಿಶ್ವಕಪ್ ತಂಡಕ್ಕೆ ಪರಿಸರ ಪ್ರೇಮದ ಜರ್ಸಿ]
ವಿಶ್ವಟಿ20ಗಾಗಿ ಬಳಸುವ ಟ್ರೆಂಡಿ ಜರ್ಸಿಗಳ ಚಿತ್ರಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ಪ್ರದರ್ಶಿಸಿದೆ. ಪುರುಷ ಹಾಗೂ ಮಹಿಳಾ ತಂಡದ ಪ್ರಮುಖ ಆಟಗಾರರು ಹೊಸ ಜರ್ಸಿ ಹಾಗೂ ಟ್ರ್ಯಾಕ್ ಪ್ಯಾಂಟ್ ಧರಿಸಿ ಪೋಸ್ ನೀಡಿದ್ದಾರೆ.

ಚೇಸ್ ಗ್ರೇಟ್ ನೆಸ್ ಎಂಬ ಶೀರ್ಷಿಕೆ ಅಡಿಯಲ್ಲಿ
ಚೇಸ್ ಗ್ರೇಟ್ ನೆಸ್ ಎಂಬ ಶೀರ್ಷಿಕೆ ಅಡಿಯಲ್ಲಿ ಹೊಸ ದಿರಿಸುಗಳನ್ನು ಅನಾವರಣಗೊಳಿಸಲಾಗಿದೆ.

ಪ್ರಮುಖ ಆಟಗಾರರು ಹೊಸ ದಿರಿಸಿನಲ್ಲಿ ಫೋಟೊ
ನಾಯಕ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ ಹಾಗೂ ಉಮೇಶ್ ಯಾದವ್ ಗ್ರೂಪ್ ಫೋಟೊದಲ್ಲಿದ್ದಾರೆ.

ವಿಶ್ವ ಟಿ20 ಮಾರ್ಚ್ 08 ರಿಂದ ಏಪ್ರಿಲ್ 03ರ ತನಕ
2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವ ಟಿ20 ಉದ್ಘಾಟನಾ ಟೂರ್ನಿಯನ್ನು ಗೆದ್ದ ಟೀಂ ಇಂಡಿಯಾ ಈ ಬಾರಿ ಮಾರ್ಚ್ 15ರಂದು ನಾಗ್ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ವಿಶ್ವ ಟಿ20 ಮಾರ್ಚ್ 08 ರಿಂದ ಏಪ್ರಿಲ್ 03ರ ತನಕ ನಡೆಯಲಿದೆ.

ಪರಿಸರ ಪ್ರೇಮ ಜಾಗೃತಿ ಮಾಡುವ ಜರ್ಸಿ
ವಿಶ್ವಕಪ್ 2015 ಕ್ಕಾಗಿ ಪರಿಸರ ಪ್ರೇಮ ಜಾಗೃತಿ ಮಾಡುವ ಇಂಥ ಶರ್ಟ್ ನೀಡಲಾಗಿತ್ತು, ಪ್ರತಿಯೊಂದು ಶರ್ಟ್ 33 ಪ್ಲಾಸ್ಟಿಕ್ ಬಾಟಲ್ ಬಳಸಿ ತಯಾರಿಸಲಾಗಿತ್ತು. ಈ ಬಾರಿ ಕೂಡಾ ವಿಶೇಷ ವಿನ್ಯಾಸ ತಾಪಮಾನಕ್ಕೆ ತಕ್ಕಂತೆ ಹಿತ ಅನುಭವ ನೀಡುವ ಬಟ್ಟೆ ಬಳಕೆ ಮಾಡಲಾಗಿದೆ ಎಂದು ನೈಕ್ ಸಂಸ್ಥೆ ಹೇಳಿದೆ. ಚಿತ್ರಗಳ ಕೃಪೆ: ನೈಕ್.ಕಾಂ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications