ಚಿತ್ರಗಳಲ್ಲಿ : ವಿಶ್ವ ಟಿ20, ಸತತ 2 ಪಂದ್ಯ ಗೆದ್ದ ಜಿಂಬಾಬ್ವೆ
ನಾಗ್ಪುರ್. ಮಾರ್ಚ್ 11: ವಿಶ್ವ ಟಿ20 ಅರ್ಹತಾ ಸುತ್ತಿನಲ್ಲಿ ಗುರುವಾರ ಸ್ಕಾಟ್ಲೆಂಡ್ ವಿರುದ್ಧ ಜಯಿಸುವುದರ ಮೂಲಕ ಸತತ ಎರಡು ಪಂದ್ಯಗಳಲ್ಲಿ ಗೆಲವು ಪಡೆದುಕೊಂಡ ಜಿಂಬಾಬ್ವೆ ಪ್ರಧಾನ ಸುತ್ತಿನತ್ತ ದಾಪುಗಾಲು ಹಾಕಿದೆ. ಸ್ಕಾಟ್ಲೆಂಡ್ ವಿರುದ್ಧ 11 ರನ್ ಗಳ ಜಯ ದಾಖಲಿಸಿದೆ.
ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ
ಮಾರ್ಚ್ 10 ರಂದು ವಿಸಿಎ ಮೈದಾನದಲ್ಲಿ ನಡೆದ ಸ್ಕಾಟ್ಲಾಂಡ್ ವಿರುದ್ಧದ ತನ್ನ 2 ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 147 ರನ್ ಗಳಿಸಿತು.

ಜಿಂಬಾಬ್ವೆ ಪರ ವಿಲಿಯಮ್ಸ್ 36 ಎಸೆತಗಳಲ್ಲಿ ಭರ್ಜರಿ ಅರ್ಧಶತಕ 53 ರನ್ ಗಳನ್ನು ಗಳಿಸಿ ಮಿಂಚಿದರು.[ಪಂದ್ಯದ ಸ್ಕೋರ್ ಕಾರ್ಡ್]

ನಂತರ ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ಆರಂಭದಲ್ಲಿಯೇ ಆಘಾತ ಅನುಭವಿಸಿತು.

8 ಓವರ್ ಗಳಲ್ಲಿ 42 ರನ್ ಗಳಿಗೆ ತನ್ನ ಪ್ರಮುಖ 5 ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ನಂತರ ತಂಡಕ್ಕೆ ಆಸರೆಯಾದ ಬೆರಿಂಗ್ಟನ್ (36) ಮತ್ತು ಮಮ್ಸೆನ್ (31) ಜೋಡಿ ಭರ್ಜರಿ 51 ರನ್ ಗಳ ಜೊತೆ ಆಟದಿಂದ ಸ್ಕಾಟ್ಲೆಂಡ್ ಗೆ ಗೆಲುವಿನ ಆಸೆ ಹುಟ್ಟಿಸಿದರು.

ಆದರೆ, ಜಿಂಬಾಬ್ಬೆ ಯ ವೆಲ್ಲಿಂಗ್ಟನ್ ಮಸಕಡ್ಜ(ನಾಯಕ ಹ್ಯಾಮಿಲ್ಟನ್ ಮಸಕಡ್ಜ ಅವರ ಕಿರಿಯ ಸೋದರ) ಅವರ ಶಿಸ್ತು ಬದ್ಧ ಬೌಲಿಂಗ್ ನಿಂದ 28ಕ್ಕೆ 4 ವಿಕೆಟ್ ಕಬಳಿಸಿ ಸ್ಕಾಟ್ಲೆಂಡ್ ಗೆಲುವಿನ ಆಸೆಯನ್ನು ನುಚ್ಚು ನೂರು ಮಾಡಿದರು.

19.4 ಓವರ್ ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 136 ರನ್ ಗಳಿಸಿ 11 ರನ್ ಗಳ ಸೋಲೊಪ್ಪಿಕೊಂಡು ಬಹುತೇಕ ವಿಶ್ವ ಟಿ-20 ಟೂರ್ನಿಯಿಂದ ಹೊರ ಬಿದ್ದಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
Read in English: World T20: Zimbabwe edge Scotland
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications