Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

World Test Championship: 10 ಪಂದ್ಯಗಳು..7 ಗೆಲುವು, ರೋಹಿತ್-ಗಂಭೀರ್‌ಗೆ ಅಗ್ನಿ ಪರೀಕ್ಷೆ!

ಆಗಸ್ಟ್ 16 ಶುಕ್ರವಾರ, ಶ್ರೀಲಂಕಾ ಪ್ರವಾಸದ ನಂತರ ಟೀಮ್ ಇಂಡಿಯಾ ವಿಶ್ರಾಂತಿಯಲ್ಲಿದ್ದರೂ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಗೆಲ್ಲುವ ಕನಸು ಕಾಣುತ್ತಿದೆ. ನಾಯಕ ರೋಹಿತ್ ಶರ್ಮಾ ಮತ್ತು ಹೆಡ್ ಕೋಚ್ ಗೌತಮ್ ಗಂಭೀರ್ ಭಾರತಕ್ಕೆ ಮತ್ತೊಂದು ಐಸಿಸಿ ಟ್ರೋಫಿ ತಂದು ಕೊಡಲು ಭರ್ಜರಿ ಯೋಜನೆ ರೂಪಿಸಿದ್ದಾರೆ.

ಸದ್ಯ ಟೀಮ್ ಇಂಡಿಯಾ ಡಬ್ಲ್ಯೂಟಿಸಿ ಟೇಬಲ್ ಟಾಪರ್ ಆಗಿದ್ದರೂ, ಫೈನಲ್ ತಲುಪುವ ದಾರಿ ಕಷ್ಟಕರವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ಮುಂದುವರಿಸಿದರೆ ಫೈನಲ್‌ನಲ್ಲಿ ಸ್ಥಾನ ಖಚಿತ. ಆದರೆ ರೋಹಿತ್-ಗಂಭೀರ್ ಗೆ ಈ ಪಯಣ ಸುಲಭವಲ್ಲ.

World Test Championship Challenges that Rohit Sharma- Gautam Gambhir will face

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2024-25 ಋತುವಿನಲ್ಲಿ ಭಾರತ ತಂಡವು ಮೂರು ಸರಣಿಗಳನ್ನು ಆಡಲಿದೆ. ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧ ತವರಿನ ಟೆಸ್ಟ್ ಸರಣಿ ನಂತರ ಆಸ್ಟ್ರೇಲಿಯ ಪ್ರವಾಸ ಕೈಗೊಳ್ಳಲಿದೆ. ಸದ್ಯ ಭಾರತ ತಂಡ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾಕ್ಕಿಂತ ಮುಂದಿದೆ.

ಆದರೂ ಭಾರತ ಡಬ್ಲ್ಯೂಟಿಸಿ ಫೈನಲ್‌ವರೆಗಿನ ಪ್ರಯಾಣದಲ್ಲಿ ಒಟ್ಟು 10 ಟೆಸ್ಟ್‌ಗಳನ್ನು ಆಡಬೇಕಾಗಿದೆ. ಇದರಲ್ಲಿ ಟೀಮ್ ಫೈನಲ್‌ಗೆ ಆರ್ಹತೆ ಪಡೆಯಲು ಕನಿಷ್ಠ 7 ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಏಕೆಂದೆರೆ ಯಾವುದೇ ತಂಡವು ಡಬ್ಲ್ಯೂಟಿಸಿ ಫೈನಲ್‌ಗೆ ತಲುಪಲು ಅಂಕಪಟ್ಟಿಯಲ್ಲಿ ಶೇ.65 ರಷ್ಟು ಪಾಯಿಂಟ್‌ಗಳನ್ನು ಹೊಂದಿರಬೇಕು. ಸದ್ಯ ಟೀಮ್ ಇಂಡಿಯಾ ಶೇ.68.51 ಅಂಕ ಹೊಂದಿದ್ದರೆ, ಆಸ್ಟ್ರೇಲಿಯಾ ಶೇ.62.50 ಅಂಕಗಳನ್ನು ಗಳಿಸಿದೆ.

ಭಾರತಕ್ಕೆ ಬೇಕು 7 ಗೆಲುವು

ಸೆಪ್ಟೆಂಬರ್ 19 ರಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ ಮೊದಲು ಗೆಲ್ಲಬೇಕಿದೆ. ಇದಾದ ಬಳಿಕ ತವರಿನಲ್ಲಿ ನಡೆಯುವ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಮಾಡಬೇಕು. ಈ 5 ಟೆಸ್ಟ್‌ಗಳಲ್ಲಿ ಭಾರತ ತಂಡ ಗೆಲುವು ಸಾಧಿಸಿದ್ದರೆ, ಆಗ ಫೈನಲ್ ತಲುಪುವ ಹಾದಿ ಸುಲಭವಾಗುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಕೇವಲ 2 ಟೆಸ್ಟ್ ಪಂದ್ಯಗಳನ್ನು ಗೆದ್ದರೆ ಸಾಕು ಭಾರತ ಡಬ್ಲ್ಯೂಟಿಸಿ ಫೈನಲ್‌ ತಲುಪಲಿದೆ. ಆದರೆ ಭಾರತ ತಂಡವು ಆಸ್ಟ್ರೇಲಿಯಾದಲ್ಲಿ 2 ಬಾರಿ ಟೆಸ್ಟ್ ಸರಣಿಗಳನ್ನು ಗೆದ್ದಿದ್ದರೂ, ಕಾಂಗರೂ ಪಡೆಯನ್ನು ಅವರ ಅಂಗಳದಲ್ಲಿ ಸೋಲಿಸುವುದು ಯಾವುದೇ ಕೋಚ್ ಅಥವಾ ನಾಯಕನಿಗೆ ದೊಡ್ಡ ಸವಾಲಾಗಿದೆ.

ಭಾರತದ ಸಂಪೂರ್ಣ ಟೆಸ್ಟ್ ವೇಳಾಪಟ್ಟಿ

ಭಾರತ vs ಬಾಂಗ್ಲಾದೇಶ

ಮೊದಲನೇ ಟೆಸ್ಟ್- ಸೆಪ್ಟೆಂಬರ್ 19 ರಿಂದ 23 ರವರೆಗೆ
ಎರಡನೇ ಟೆಸ್ಟ್- ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 1 ರವರೆಗೆ

ಭಾರತ vs ನ್ಯೂಜಿಲೆಂಡ್

ಮೊದಲನೇ ಟೆಸ್ಟ್: ಅಕ್ಟೋಬರ್ 16 ರಿಂದ 20 ರವರೆಗೆ
ಎರಡನೇ ಟೆಸ್ಟ್: ಅಕ್ಟೋಬರ್ 24 ರಿಂದ 28 ರವರೆಗೆ
ಮೂರನೇ ಟೆಸ್ಟ್: ನವೆಂಬರ್ 1 ರಿಂದ 5 ರವರೆಗೆ

ಭಾರತ vs ಆಸ್ಟ್ರೇಲಿಯಾ

ಮೊದಲ ಟೆಸ್ಟ್: ನವೆಂಬರ್ 22 ರಿಂದ 26 ರವರೆಗೆ- ಪರ್ತ್
ಎರಡನೇ ಟೆಸ್ಟ್: ಡಿಸೆಂಬರ್ 6 ರಿಂದ 10 ರವರೆಗೆ- ಅಡಿಲೇಡ್
ಮೂರನೇ ಟೆಸ್ಟ್: ಡಿಸೆಂಬರ್ 14 ರಿಂದ 18 ರವರೆಗೆ- ಬ್ರಿಸ್ಬೇನ್
ನಾಲ್ಕನೇ ಟೆಸ್ಟ್: ಡಿಸೆಂಬರ್ 26 ರಿಂದ 30 ರವರೆಗೆ- ಮೆಲ್ಬೋರ್ನ್
ಐದನೇ ಟೆಸ್ಟ್: ಜನವರಿ 3 ರಿಂದ 7 ರವರೆಗೆ- ಸಿಡ್ನಿ

Story first published: Friday, August 16, 2024, 16:41 [IST]
Other articles published on Aug 16, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+