ನ್ಯೂಜಿಲೆಂಡ್ ವಿರುದ್ಧ WTC Finalನಲ್ಲಿ ಕಣಕ್ಕಿಳಿಯುವ ಸಂಭಾವ್ಯ ಭಾರತ XI

ಲಂಡನ್: ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತೀಯ ತಂಡ ನ್ಯೂಜಿಲೆಂಡ್ ಸವಾಲು ಸ್ವೀಕರಿಸೋದಕ್ಕೆ ಕೇವಲ ಬೆರಳೆಣಿಕೆಯ ದಿನಗಳಷ್ಟೇ ಬಾಕಿ ಉಳಿದಿವೆ. ಜೂನ್ 18-22ರ ವರೆಗೆ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಸೌತಾಂಪ್ಟನ್‌ನ ಏಜಸ್ ಬೌಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಕುತೂಹಲಕಾರಿ ಕದನಕ್ಕೆ ಎರಡೂ ತಂಡಗಳು ಸಜ್ಜಾಗಿವೆ. ವಿರಾಟ್ ಕೊಹ್ಲಿ ಪಡೆ ಈಗ ಅಭ್ಯಾಸ ಪಂದ್ಯದಲ್ಲಿ ತೊಡಗಿದೆ.
ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಜಿದ್ದಾಜಿದ್ದಿಯಿಂದ ಕೂಡಿರುವ ಎಲ್ಲಾ ನಿರೀಕ್ಷೆಗಳಿವೆ. ಬಹುತೇಕ ಕ್ರಿಕೆಟ್ ಪರಿಣಿತರು ನ್ಯೂಜಿಲೆಂಡ್ ಗೆಲ್ಲಲಿದೆ ಎನ್ನುತ್ತಿದ್ದಾರೆ. ಆದರೆ ಭಾರತವೂ ಬಲಿಷ್ಠವಾಗಿದ್ದು, ಪ್ಲೇಯಿಂಗ್XI ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಿದೆ. ಫೈನಲ್ ಪಂದ್ಯದಲ್ಲಿ ಭಾರತದ ಸಂಭಾವ್ಯ ಪ್ಲೇಯಿಂಗ್ XI ಹೀಗಿದೆ.

ಆರಂಭಿಕ ಬ್ಯಾಟ್ಸ್‌ಮನ್‌ಗಳು
ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್‌ನಂತ ಬಲಿಷ್ಠ ತಂಡದ ವಿರುದ್ಧ ಆಡುತ್ತಿರುವಾಗ ಟೀಮ್ ಇಂಡಿಯಾದಿಂದ ಅನುಭವಿ ಬ್ಯಾಟ್ಸ್‌ಮನ್, ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಆಡಲೇಬೇಕಾಗುತ್ತದೆ. ಶರ್ಮಾಗೆ ಜೊತೆಯಾಗಿ ಶುಬ್ಮನ್ ಗಿಲ್ ಬರುವ ಸಾಧ್ಯತೆ ಹೆಚ್ಚಿದೆ. ಯಾಕೆಂದರೆ ಅಭ್ಯಾಸ ಪಂದ್ಯದಲ್ಲೂ ಗಿಲ್ ಉತ್ತಮ ಪ್ರದರ್ಶನ ನೀಡಿದ್ದರು. ಕೆಎಲ್ ರಾಹುಲ್‌ಗೆ ಅವಕಾಶ ತಪ್ಪುವ ಸಾಧ್ಯತೆಯಿದೆ. (1. ರೋಹಿತ್ ಶರ್ಮಾ, 2. ಶುಬ್ಮನ್ ಗಿಲ್).

ಮಧ್ಯಮ ಕ್ರಮಾಂಕ
ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ, ನಾಯಕ ವಿರಾಟ್ ಕೊಹ್ಲಿ, ಹನುಮ ವಿಹಾರಿ, ಅಜಿಂಕ್ಯ ರಹಾನೆ ಆಡುವ ಸಾಧ್ಯತೆ ಹೆಚ್ಚಿದೆ (3. ಚೇತೇಶ್ವರ್ ಪೂಜಾರ, 4. ವಿರಾಟ್ ಕೊಹ್ಲಿ, 5. ಹನುಮ ವಿಹಾರಿ, 6. ಅಜಿಂಕ್ಯ ರಹಾನೆ).

ಒಬ್ಬನೇ ಆಲ್ ರೌಂಡರ್
ಭಾರತ-ನ್ಯೂಜಿಲೆಂಡ್ ಪ್ರಮುಖ ಪಂದ್ಯದಲ್ಲಿ ಆಲ್ ರೌಂಡರ್‌ಗಳಲ್ಲಿ ಆರ್ ಅಶ್ವಿನ್ ಆಡ್ತಾರಾ ಇಲ್ಲ ರವೀಂದ್ರ ಜಡೇಜಾ ಆಡ್ತಾರಾ ಅನ್ನೋ ಅನುಮಾನವಿದೆ. ಸ್ಪಿನ್ನರ್‌ಗಳಾದ ಇಬ್ಬರಲ್ಲಿ ಒಬ್ಬರು ಆಡುವ ಅವಕಾಶ ಮಾತ್ರ ಇದೆ. ಅಶ್ವಿನ್, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಜಡೇಜಾ ಐಪಿಎಲ್‌ನಲ್ಲಿ ಬೌಲಿಂಗ್, ಫೀಲ್ಡಿಂಗ್, ಬ್ಯಾಟಿಂಗ್ ಮೂರರಲ್ಲೂ ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಾಗಿ ಜಡೇಜಾಗೆ ಅವಕಾಶ ಲಭಿಸುವ ಸಾಧ್ಯತೆ ಹೆಚ್ಚು (7. ರಿಷಭ್ ಪಂತ್ (ವಿಕೆಟ್ ಕೀಪರ್), 8. ರವೀಂದ್ರ ಜಡೇಜಾ).

ಬೌಲರ್‌ಗಳ ಪಡೆ
ಬೌಲರ್‌ಗಳಲ್ಲಿ ವೇಗಿ ಮೊಹಮ್ಮದ್ ಸಿರಾಜ್ ಅಥವಾ ಮೊಹಮ್ಮದ್ ಶಮಿ ಇಬ್ಬರಲ್ಲಿ ಯಾರಿಗೆ ಅವಕಾಶ ಸಿಗುತ್ತದೆ ಎಂಬ ಪ್ರಶ್ನೆ ಎದ್ದಿತ್ತು. ಪಂದ್ಯದಲ್ಲಿ ಅನುಭವಿ ಶಮಿ ಅವರನ್ನು ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಇನ್ನು ಇಶಾಂತ್ ಶರ್ಮಾ ಮತ್ತು ಜಸ್‌ಪ್ರೀತ್ ಬೂಮ್ರಾ ಆಡುವ ನಿರೀಕ್ಷೆಯಿದೆ (9. ಇಶಾಂತ್ ಶರ್ಮಾ, 10. ಮೊಹಮ್ಮದ್ ಶಮಿ, 11. ಜಸ್‌ಪ್ರೀತ್ ಬೂಮ್ರಾ).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications