ಐಸಿಸಿ ವಿಶ್ವ ಟಿ20ಕಪ್ ವಿಶ್ವ ಪರ್ಯಟನೆ ಆರಂಭ
ಮುಂಬೈ, ಡಿ. 13: 2016ರ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟ್ರೋಫಿ ಭಾನುವಾರದಂದು ಮುಂಬೈಯಿಂದ ವಿಶ್ವ ಪರ್ಯಟನೆ ಆರಂಭಿಸಿದೆ. ಮುಂದಿನ ವರ್ಷದ ಫೆಬ್ರವರಿ 1 ರಂದು ನವದೆಹಲಿಗೆ ಮರಳಿದೆ.
ಟೂರ್ನಿಯಲ್ಲಿ ಭಾಗವಹಿಸಲಿರುವ 12 ದೇಶಗಳಿಗೆ ನಿಸ್ಸಾನ್ ಟ್ರೋಫಿ ಟೂರ್‌ನ ಅಂಗವಾಗಿ ವಿಶ್ವಕಪ್ ಟ್ರೋಫಿ ಪ್ರಯಾಣಿಸಲಿದೆ. 6ನೇ ಆವೃತ್ತಿಯ ವಿಶ್ವಕಪ್ ಟೂರ್ನಿಯು ಇದೇ ಮೊದಲ ಬಾರಿ ಭಾರತದಲ್ಲಿ ಮಾರ್ಚ್ 8 ರಿಂದ ಏಪ್ರಿಲ್ 3ರ ತನಕ ನಡೆಯಲಿದೆ. ವಿಶ್ವಕಪ್ ಟ್ರೋಫಿಯು ವಿಶ್ವ ಪರ್ಯಟನೆಯ ವೇಳೆ ದೇಶಿಯ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪ್ರದರ್ಶಿಸಲ್ಪಡಲಿದೆ.
ಟ್ವೆಂಟಿ-20 ಟ್ರೋಫಿಯೊಂದಿಗೆ ಕ್ರಿಕೆಟ್ ಅಭಿಮಾನಿಗಳು ವಿಶೇಷ ಕ್ಷಣವನ್ನು ಕಳೆಯುವಂತಾಗಲು ಟ್ರೋಫಿಯನ್ನು ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕಿಡಲಾಗುತ್ತದೆ ಎಂದು ಐಸಿಸಿ ತಿಳಿಸಿದೆ.[ಐಸಿಸಿ ವಿಶ್ವ ಟ್ವೆಂಟಿ20 ಕ್ರಿಕೆಟ್ ಸಂಪೂರ್ಣ ವೇಳಾಪಟ್ಟಿ]
ಆಯಾ ದೇಶದ ಕ್ರಿಕೆಟ್ ಮಂಡಳಿಗಳು ಟ್ರೋಫಿಯ ಸಾರ್ವಜನಿಕವಾಗಿ ಲಭ್ಯವಿರುವ ದಿನಾಂಕದ ವಿವರವನ್ನು ಪ್ರಕಟಿಸಲಿದೆ.
'ನಿಸ್ಸಾನ್ ಟ್ರೋಫಿ ಟೂರ್ ವಿಶ್ವಕಪ್ ಟೂರ್ನಿಯನ್ನು ಪ್ರಚಾರಪಡಿಸುವ ಉದ್ದೇಶದಿಂದ ಆರಂಭಿಸಲಾಗಿದೆ.

ಏ..3 ರಂದು ವಿಶ್ವಕಪ್ ವಿಜೇತ ತಂಡದ ನಾಯಕನ ಕೈ ಸೇರುವ ಟ್ರೋಫಿಯನ್ನು ಕ್ರಿಕೆಟ್ ಅಭಿಮಾನಿಗಳಿಗೆ ಹತ್ತಿರುವಾಗಿಸುವ ಅವಕಾಶವನ್ನು ಈ ಮೂಲಕ ಕಲ್ಪಿಸಲಾಗುತ್ತಿದೆ'ಎಂದು ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೇವಿಡ್ ರಿಚರ್ಡ್‌ಸನ್ ತಿಳಿಸಿದ್ದಾರೆ.
ವಿಶ್ವಕಪ್ ಟ್ರೋಫಿ ಮೊದಲಿಗೆ ಸ್ಕಾಟ್ಲೆಂಡ್‌ಗೆ ತೆರಳಲಿದ್ದು, ಆ ನಂತರ ಐರ್ಲೆಂಡ್, ಇಂಗ್ಲೆಂಡ್ ಹಾಗೂ ಹಾಲೆಂಡ್‌ಗೆ ಸಂಚರಿಸಲಿದೆ. ಜ.2 ರಿಂದ 7ರ ತನಕ ಟ್ರೋಫಿಯು ಆಫ್ರಿಕನ್ ಸಫಾರಿ ಕೈಗೊಳ್ಳಲಿದೆ. ಪಾಕಿಸ್ತಾನ (ಜ.11-12), ಬಾಂಗ್ಲಾದೇಶ (ಜ.14-15) ಹಾಗೂ ಶ್ರೀಲಂಕಾದಲ್ಲಿ (ಜ.17-18) ಪ್ರದರ್ಶಿಸಲಾಗುವುದು.
ಜ.21 ರಂದು ನ್ಯೂಝಿಲೆಂಡ್‌ನ ವೆಲ್ಲಿಂಗ್ಟನ್‌ಗೆ ತೆರಳಲಿರುವ ಟ್ರೋಫಿ ಜ.26 ರಂದು ಆಸ್ಟ್ರೇಲಿಯಕ್ಕೆ ತೆರಳಿ ಜ.31 ರ ತನಕ ಅಡಿಲೇಡ್, ಮೆಲ್ಬೋರ್ನ್ ಹಾಗೂ ಸಿಡ್ನಿಯಲ್ಲಿ ಪ್ರದರ್ಶಿಸಲ್ಪಡುತ್ತದೆ.
ಟ್ರೋಫಿಯು ಸಿಡ್ನಿಯಿಂದ ಫೆ.1ಕ್ಕೆ ನವದೆಹಲಿಗೆ ವಾಪಸಾಗುತ್ತದೆ. ಭಾರತಕ್ಕೆ ತರಲಾದ ನಂತರ ಐಸಿಸಿ ಟ್ವೆಂಟಿ-20 ವಿಶ್ವಕಪ್ ಅನ್ನು ಆಯೋಜಿಸುತ್ತಿರುವ ಎಲ್ಲ 8 ಕ್ರೀಡಾಂಗಣಗಳಲ್ಲಿ ಪ್ರದರ್ಶಿಸಲಾಗುತ್ತದೆ. (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications