For Quick Alerts
ALLOW NOTIFICATIONS  
For Daily Alerts
 

ಕೊರೊನಾ ವೈರಸ್ ಭೀತಿ : ವಿಶ್ವ XI vs ಏಷ್ಯಾ XI ಪಂದ್ಯ ಮುಂದೂಡಿಕೆ

World XI v Asia XI Matches Postponed Amid Coronavirus Fears

ಢಾಕಾ: ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ವಿಶ್ವ XI vs ಏಷ್ಯಾXI ನಡುವಿನ ಪಂದ್ಯ ಮುಂದೂಡಿಕೆಯಾಗಿದೆ. ವಿಶ್ವಾದ್ಯಂತ ಕೊರೊನಾ ವೈರಸ್ ಕರಿಛಾಯೆ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ಬಾಂಗ್ಲಾದೇಶ ಆತಿಥ್ಯವನ್ನು ವಹಿಸಿಕೊಂಡಿರುವ ಈ ಬಹುನಿರೀಕ್ಷಿತ ಪಂದ್ಯ ಮಾರ್ಚ್ 21 ಮತ್ತು 22 ರಂದು ನಿಗದಿಯಾಗಿತ್ತು. ಆದರೆ ಕೊರೊನಾ ವೈರಸ್ ಭೀತಿಯಿಂದ ಈ ಪಂದ್ಯವನ್ನು ಮುಂದೂಡುವ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದುಬಂದಿದೆ.

ಬಾಂಗ್ಲಾದೇಶದ ಪಿತಾಮಹ ಎನಿಸಿರುವ ಶೇಖ್ ಮುಜಿಬುರ್ ರಹ್ಮಾನ್ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಬಾಂಗ್ಲಾದೇಶ ಈ ಟೂರ್ನಿಯನ್ನು ಆಯೋಜನೆ ಮಾಡಿದೆ. ಈಗಾಗಲೆ ಈ ಟೂರ್ನಿಗೆ ಈಗಾಗಲೆ ತಂಡಗಳನ್ನೂ ಅಂತಿಮಗೊಳಿಸಲಾಗಿತ್ತು.

ಟೀಮ್ ಇಂಡಿಯಾದ ಆರು ಮಂದಿ ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದರು. ಢಾಕಾದ ಶೇರ್ ಇ ಬಾಂಗ್ಲಾ ಸ್ಟೇಡಿಯಮ್‌ನಲ್ಲಿ ಈ ಪಂದ್ಯಾವಳಿ ನಿಯೋಜನೆಯಾಗಿತ್ತು. ಪಾಕಿಸ್ತಾನವನ್ನು ಹೊರತುಪಡಿಸಿ ಎಳಿದ ಏಷ್ಯಾ ಖಂಡದ ಕ್ರಿಕೆಟ್‌ ಆಡುವ ದೇಶಗಳಾದ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಮತ್ತು ಅಪ್ಘಾನಿಸ್ತಾನ ತಂಡದ ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಳ್ಳುವವರಿದ್ದರು. ಮತ್ತೊಂದೆಡೆ ವಿಶ್ವ ಇಲವೆನ್ ತಂಡದಿಂದ ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾದ ಆಟಗಾರರು ಪಾಲ್ಗೊಳ್ಳುವವರಿದ್ದರು.

ಕೊರೊನಾ ಭೀತಿಯಿಂದ ಸದ್ಯ ಬಿಸಿಬಿ ಕ್ರಿಕೆಟ್‌ ಟೂರ್ನಿಯನ್ನು ಮುಂದೂಡುವ ನಿರ್ಧಾರವನ್ನು ಕೈಗೊಂಡಿದೆ. ಆದರೆ ಮುಂದೆ ಯಾವಾಗ ಈ ಟೂರ್ನಿ ಆಯೋಜನೆಯಾಗಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಶೇರ್‌ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ಪ್ರಸಕ್ತ ಜಿಂಬಾಬ್ವೆ ಸರಣಿ ನಡೆಯುತ್ತಿದ್ದು ಕೊರೊನಾ ಭೀತಿಯಿಂದ ಟಿಕೆಟ್‌ಗೆ ಸಾಕಷ್ಟು ನಿರ್ಬಂಧವನ್ನು ವಿಧಿಸಿದೆ.

Story first published: Wednesday, March 11, 2020, 19:17 [IST]
Other articles published on Mar 11, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+