4ನೇ ಕ್ರಮಾಂಕದಲ್ಲಿ ರಹಾನೆ ಕಣಕ್ಕಿಳಿಯದಿದ್ದರೆ ಅಚ್ಚರಿಯಾಗಲಿದೆ: ಅಜಿತ್ ಅಗರ್ಕರ್

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಮೆಲ್ಬರ್ನ್ ಅಂಗಳದಲ್ಲಿ ನಡೆಯಲು ಕ್ಷಣಗಣನೆ ಆರಂಭವಾಗಿದೆ. ಬಾಕ್ಸಿಂಡ್ ಡೇ ದಿನವಾದ ಡಿಸೆಂಬರ್ 26ರಂದು ಈ ಪಂದ್ಯ ಆರಂಭವಾಗಲಿದೆ. ಈ ಪಂದ್ಯದಲ್ಲಿ ನಾಯಕನಾಗಿ ಕಣಕ್ಕಿಳೀಯಲಿರುವ ಅಜಿಂಕ್ಯ ರಹಾನೆ ತಮ್ಮ ಕ್ರಮಾಂಕದಲ್ಲಿ ಏರಿಕೆ ಮಾಡಬೇಕು ಎಂದು ಅಜಿತ್ ಅಗರ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಅಜಿಂಕ್ಯ ರಹಾನೆ ಮುಂದಿನ ಮೂರು ಪಂದ್ಯಗಳಲ್ಲಿ ನಾಲ್ಕನೇ ಕ್ರಮಾಂಕಕ್ಕೆ ತನ್ನ ಬ್ಯಾಟಿಂಗ್ ಕ್ರಮಾಂಕ ಏರಿಸಿಕೊಳ್ಳದಿದ್ದರೆ ನನಗೆ ಅದು ಅಚ್ಚರಿಯಾಗಲಿದೆ ಎಂದು ಅಗರ್ಕರ್ ಹೇಳಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಮುಂದಿನ ಮೂರು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗುತ್ತಿದ್ದು ವಿರಾಟ್ ಕೊಹ್ಲಿಯ ಕ್ರಮಾಂಕದಲ್ಲಿ ರಹಾನೆ ಕಣಕ್ಕಿಳಿಯಬೇಕು ಎಂದು ಅಗರ್ಕರ್ ಅಭಿಪ್ರಾಯಪಟ್ಟಿದ್ದಾರೆ.

ನಾಯಕನಾಗಿ ಮುಂದೆ ಬರಬೇಕು
"ನನ್ನ ಪ್ರಕಾರ ವಿರಾಟ್ ಕೊಹ್ಲಿ ಅಲಭ್ಯತೆಯಲ್ಲಿ ಅಜಿಂಕ್ಯ ರಹಾನೆ ತನ್ನ ಕ್ರಮಾಂಕವನ್ನು ತಾವು ಏರಿಸಿಕೊಳ್ಳಬೇಕು. ಆತನಲ್ಲಿ ಸಾಕಷ್ಟು ಅನುಭವ ಇದೆ, ಆತ ಭಾರತದಿಂದ ಹೊರಗಡೆ ಸಾಕಷ್ಟು ರನ್ ಬಾರಿಸಿದ್ದಾರೆ. ಈಗ ನಾಯಕನೇ ಮುಂದೆ ಬರಬೇಕಾದ ಸಮಯ ಬಂದಿದೆ" ಎಂದು ಅಗರ್ಕರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಶುಭ್ಮನ್ ಗಿಲ್ ಆಡಲಿ
"ಮುಂದಿನ ಪಂದ್ಯದಲ್ಲಿ ಶುಭ್ಮನ್ ಗಿಲ್ ಖಂಡಿತಾ ಆಟಬೇಕು. ಈ ಬಗ್ಗೆ ಸಾನು ಅನೇಕ ಬಾರಿ ಹೇಳಿದ್ದೇನೆ. ಯಾಕೆಂದರೆ ಆತನಲ್ಲಿ ಆ ಸಾಮರ್ಥ್ಯವಿದೆ. ನನಗೆ ಆತನ ಬಗ್ಗೆ ತಿಳಿದಿದೆ. ಆತ ಪಂಜಾಬ್ ಒರವಾಗಿ ದೇಶೀಯ ಕ್ರಿಕೆಟ್‌ನಲ್ಲಿ ಆರಂಭವನ್ನು ಮಾಡುತ್ತಾನೆ. ಆತನ ರೀತಿಯಲ್ಲಿ ಉತ್ತಮ ಪ್ರದರ್ಶನವನ್ನು ಯಾರಾದರೂ ನೀಡುತ್ತಿದ್ದರೆ ಆತ ಸುದೀರ್ಘ ಕಾಲ ಭಾರತೀಯ ಕ್ರಿಕೆಟ್‌ಗೆ ಸೇವೆಯನ್ನು ಸಲ್ಲಿಸಲು ಸಾಧ್ಯವಿದೆ" ಎಂದು ಅಗರ್ಕರ್ ಹೇಳಿದ್ದಾರೆ.

ಒಂದು ಪಂದ್ಯದಿಂದ ನಿರ್ಧರಿಸಲಾಗದು
ಇನ್ನು ಇದೇ ಸಂದರ್ಭದಲ್ಲಿ ಪೃಥ್ವಿ ಶಾ ಪ್ರದರ್ಶನದ ಬಗ್ಗೆಯೂ ಅಗರ್ಕರ್ ಅಭಿಪ್ರಾಯಪಟ್ಟಿದ್ದಾರೆ. "ಆರಂಬಭಿಕ ಆಟಗಾರರಿಂದ ಉತ್ತಮ ಪ್ರದರ್ಶನ ಬಾರದಿದ್ದರೆ ಅದು ತಂಡದ ಉಳಿದ ಬ್ಯಾಟ್ಸ್‌ಮನ್‌ಗಳ ಮೇಲೆ ಸಾಕಷ್ಟು ಒತ್ತಡವನ್ನು ಬೀರುತ್ತದೆ. ವಿದೇಶಿ ಕಂಡೀಶನ್‌ನಲ್ಲಿ ನೀವು ಉತ್ತಮವಾಗಿ ಆಡಿದರೆ ಮಧ್ಯಮ ಕ್ರಮಾಂಕಕ್ಕೆ ಹಾದಿ ಸುಗಮವಾಗುತ್ತದೆ. ಆದರೆ ಒಂದು ಟೆಸ್ಟ್ ಪಂದ್ಯ ನಿಮ್ಮನ್ನು ಉತ್ತಮ ಅಥವಾ ಕೆಟ್ಟ ಆಟಗಾರ ಎಂದು ನಿರ್ಧರಿಸಲು ಸಾಧ್ಯವಿಲ್ಲ" ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications