ಆತ ರಾಕ್‌ಸ್ಟಾರ್, ಆತನನ್ನು ಟೆಸ್ಟ್ ತಂಡದಲ್ಲಿ ನೋಡಲು ಇಷ್ಟಪಡುತ್ತೇನೆ: ಶೇನ್ ವಾರ್ನ್

ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಟೀಮ್ ಇಂಡಿಯಾದ ಓರ್ವ ಆಟಗಾರನ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ಆತ ಟೆಸ್ಟ್ ತಂಡದಲ್ಲಿ ಇರಬೇಕಿತ್ತು, ಆತನನ್ನು ಭಾರತದ ಟೆಸ್ಟ್ ತಂಡದಲ್ಲಿ ನಾನು ನೋಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಶೇನ್ ವಾರ್ನ್ ಹೀಗೆ ಹೇಳಿದ್ದು ಟೀಮ್ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬಗ್ಗೆ. ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಪಾಲ್ಗೊಂಡಿದ್ದ ಹಾರ್ದಿಕ್ ಪಾಂಡ್ಯ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಹೀಗಾಗಿ ಏಕದಿನ ಹಾಗೂ ಟಿ20 ಸರಣಿ ಮುಕ್ತಾಯದ ಬಳಿಕ ಅವರು ತವರಿಗೆ ವಾಪಾಸಾಗಿದ್ದಾರೆ.
ಹಾರ್ದಿಕ್ ಪಾಂಡ್ಯ ಬಗ್ಗೆ ಶೇನ್ ವಾರ್ನ್ ಅದ್ಭುತ ಮಾತುಗಳನ್ನು ಆಡಿದ್ದಾರೆ. ಪಾಂಡ್ಯ ಆಟದ ಬಗ್ಗೆ ಕೊಂಡಾಡಿರುವ ದಿಗ್ಗಜ ಆಟಗಾರ ಶೇನ್ ವಾರ್ನ್ ಪಾಂಡ್ಯ ವ್ಯಕ್ತಿತ್ವದ ಬಗ್ಗೆಯೂ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ.

ಆತ ಫೇವರೀಟ್ ಆಟಗಾರರಲ್ಲಿ ಓರ್ವ
ಈ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ವಿಶ್ವದ ಅಗ್ರ ಮೂವರು ಟಾಪ್ ಕ್ರಿಕೆಟರ್‌ಗಳಲ್ಲಿ ಹಾರ್ದಿಕ್ ಪಾಂಡ್ಯ ಕೂಡ ಒಬ್ಬರು ಎಂದು ವಾರ್ನ್ ಹೇಳಿದ್ದಾರೆ. "ಹಾರ್ದಿಕ್ ಪಾಂಡ್ಯ ಅವರನ್ನು ಟೆಸ್ಟ್ ತಂಡದಲ್ಲಿ ನೋಡುವುದನ್ನು ನಾನು ಬಯಸುತ್ತೇನೆ. ನಾನು ವಾರದ ಹಿಂದೆಯೇ ಹೇಳಿದ್ದೆ ವಿಶ್ವದ ಮೂವರು ಫೇವರೀಟ್ ಕ್ರಿಕೆಟರ್‌ಗಳಲ್ಲಿ ಆತನೂ ಓರ್ವ ಎಂದಿದ್ದೆ. ಆದರೆ ಎಲ್ಲರೂ ಅದರ ಬಗ್ಗೆ ಈ ಮಾತು ದೊಡ್ಡದಾಯಿತು ಎಂದಿದ್ದರು. ಆದರೆ ನಾನು ಹೇಳಿತ್ತೇನೆ ಇಲ್ಲ, ಆತನೋರ್ವ ಅದ್ಭುತ ಆಟಗಾರ" ಎಂದು ವಾರ್ನ್ ಪ್ರಶಂಸಿಸಿದ್ದಾರೆ.

ಕೊಹ್ಲಿಗೆ ಸಹಕಾರಿಯಾಗಿರುತ್ತಿದ್ದರು
ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಇದ್ದಿದ್ದರೆ ವಿರಾಟ್ ಕೊಹ್ಲಿ ಅಲಭ್ಯತೆಯಲ್ಲಿ ಸಾಕಷ್ಟು ಸಹಕಾರಿಯಾಗುತ್ತಿದ್ದರು ಎಂದಿದ್ದಾರೆ. "ಪಾಂಡ್ಯ ನಿಜಕ್ಕೂ ಶ್ರೇಷ್ಠವಾದ ಫಾರ್ಮ್‌ನಲ್ಲಿದ್ದಾರೆ. ವಿರಾಟ್ ಕೊಹ್ಲಿಯ ಅಲಭ್ಯತೆಯಲ್ಲಿ ಪಾಂಡ್ಯ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ದೊಡ್ಡ ಕೊಡುಗೆಯನ್ನು ನೀಡುತ್ತಿದ್ದರು. ಭಾರತ ತಂಡ ಮತ್ತಷ್ಟು ಎತ್ತರಕ್ಕೇರಿಸಲು ಅವರಿಂದ ಸಾಧ್ಯವಾಗುತ್ತಿತ್ತು" ಎಂದು ವಾರ್ನ್ ಹೇಳಿಕೆಯನ್ನು ನೀಡಿದ್ದಾರೆ.

ಆತನಲ್ಲಿ ರಾಕ್‌ಸ್ಟಾರ್ ಲಕ್ಷಣಗಳು ಇದೆ
ಆತನಲ್ಲಿ ರಾಕ್‌ಸ್ಟಾರ್‌ನ ಲಕ್ಷಣಗಳಿವೆ. ಆತನೋರ್ವ ಸ್ವಾಗರ್, ಆತ ತಾಳ್ಮೆಯ ವ್ಯಕ್ತಿ. ಆತ ಮಾತನಾಡುತ್ತಿದ್ದರೆ ಆತ ವೆಸ್ಟ್ ಇಂಡೀಸ್‌ನಿಂದ ಬಂದಿದ್ದಾನೆಯೇ ಎಂದೆನಿಸುತ್ತದೆ. ಆತ ಆಂಟಿಗುವಾದ ಬೀಚ್‌ನಿಂದ ಬಂದವರಂತೆ ಭಾಸವಾಗುತ್ತಾನೆ" ಎಂದು ಶೇನ್ ವಾರ್ನ್ ಪಾಂಡ್ಯ ವ್ಯಕ್ತಿತ್ವದ ಬಗ್ಗೆಯೂ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ.

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮಿಂಚುಹರಿಸಿದ್ದ ಪಾಂಡ್ಯ
ಆಸ್ಟ್ರೇಲಿಯಾ ನೆಲದಲ್ಲಿ ಹಾರ್ದಿಕ್ ಪಾಂಡ್ಯ ಶ್ರೇಷ್ಠ ಪ್ರದರ್ಶನವನ್ನು ನೀಡಿದ್ದಾರೆ. ಮೊದಲಿಗೆ ಏಕದಿನ ಸರಣಿಯಲ್ಲಿ ತಂಡದ ಪರವಾಗಿ ಅದ್ಭುತ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಎರಡು ಅರ್ಧ ಶತಕವನ್ನು ಬಾರಿಸಿ ಮಿಂಚಿದ್ದರು. ಅದಾದ ಬಳಿಕ ಟಿ20 ಸರಣಿಯಲ್ಲೂ ಇದೇ ಪ್ರದರ್ಶನ ಮುಂದುವರಿಸಿ ಸರಣಿ ಗೆಲುವಿಗೆ ಕಾರಣರಾದರು. ಈ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications