Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2023: ಅಲಿಸ್ಸಾ ಹೀಲಿ, ತಹಿಲಾ ಮೆಕ್‌ಗ್ರಾತ್ ಅರ್ಧಶತಕ : ಸವಾಲಿನ ಮೊತ್ತ ಕಲೆಹಾಕಿದ ಯುಪಿ ವಾರಿಯರ್ಸ್

WPL 2023: Alyssa Healy And Tahlia Mcgraths Half Centuries Power UP Warriorz To Score 159 Runs

ಮುಂಬೈ ಇಂಡಿಯನ್ಸ್ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಯುಪಿ ವಾರಿಯರ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿದೆ. ನಾಯಕಿ ಅಲಿಸ್ಸಾ ಹೀಲಿ ಮತ್ತು ಆಲ್‌ರೌಂಡರ್ ತಹಿಲಾ ಮೆಕ್‌ಗ್ರಾತ್ ಅರ್ಧಶತಕ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಯುಪಿ ವಾರಿಯರ್ಸ್ ಆರಂಭದಲ್ಲೇ ಆಘಾತ ಅನುಭವಿಸಿತು. ದೇವಿಕಾ ವೈದ್ಯ 5 ಎಸೆತಗಳಲ್ಲಿ 6 ರನ್ ಗಳಿಸಿ ಸೈಕಾ ಇಶಾಖ್‌ಗೆ ವಿಕೆಟ್ ಒಪ್ಪಿಸಿದರು. ನಾಯಕಿ ಅಲಿಸ್ಸಾ ಹೀಲಿ ಅತ್ಯುತ್ತಮ ಫಾರ್ಮ್ ಮುಂದುವರೆಸಿದರು.

ಕಿರಣ್ ನಾವಿಗೆರೆ ಮತ್ತು ಅಲಿಸ್ಸಾ ಹೀಲಿ ಎರಡನೇ ವಿಕೆಟ್‌ಗೆ 50 ರನ್‌ಗಳ ಜೊತೆಯಾಟ ಆಡುವ ಮೂಲಕ ಆರಂಭಿಕ ಆಘಾತದಿಂದ ಚೇತರಿಸಿಕೊಂಡಿತು. ಕಿರಣ್ ನವಿಗೆರೆ 14 ಎಸೆತಗಳಲ್ಲಿ 17 ರನ್ ಗಳಿಸಿ ಅಮೆಲಿಯಾ ಕೆರ್ ಬೌಲಿಂಗ್‌ನಲ್ಲಿ ಔಟಾದರು.

ನಂತರ ನಾಯಕಿಯ ಜೊತೆಯಾದ ತಹಿಲಾ ಮೆಕ್‌ಗ್ರಾತ್‌ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. ಮೂರನೇ ವಿಕೆಟ್‌ಗೆ ಈ ಜೋಡಿ 88 ರನ್‌ಗಳ ಅತ್ಯುತ್ತಮ ಜೊತೆಯಾಟ ಆಡಿದರು. ಇವರಿಬ್ಬರೂ ಅರ್ಧಶತಕ ಪೂರೈಸಿದರು. ಒಂದು ಹಂತದಲ್ಲಿ ಯುಪಿ ವಾರಿಯರ್ಸ್ ದೊಡ್ಡ ಮೊತ್ತ ಕಲೆಹಾಕುವ ನಿರೀಕ್ಷೆಯಲ್ಲಿತ್ತು. ಆದರೆ ಇವರಿಬ್ಬರೂ ಔಟಾದ ನಂತರ ಯುಪಿ ವಾರಿಯರ್ಸ್ ದಿಢೀರ್ ಕುಸಿತ ಕಂಡಿತು.

WPL 2023: Alyssa Healy And Tahlia Mcgraths Half Centuries Power UP Warriorz To Score 159 Runs

ಹೀಲಿ, ತಹಿಲಾ ಅರ್ಧಶತಕ

ಯುಪಿ ವಾರಿಯರ್ಸ್ ನಾಯಕಿ ಅಲಿಸ್ಸಾ ಹೀಲಿ 46 ಎಸೆತಗಳಲ್ಲಿ 7 ಬೌಂಡರಿ ಒಂದು ಸಿಕ್ಸರ್ ನೆರವಿನಿಂದ 58 ರನ್ ಗಳಿಸಿದರು. ತಹಿಲಾ ಮೆಕ್‌ಗ್ರಾತ್ 37 ಎಸೆತಗಳಲ್ಲಿ 9 ಬೌಂಡರಿ ನೆರವಿನಿಂದ 50 ರನ್ ಗಳಿಸಿ ಔಟಾದರು. ಸಿಮ್ರಾನ್ ಶೈಕ್ 9 ರನ್ ಗಳಿಸಿದರೆ, ದೀಪ್ತಿ ಶರ್ಮಾ ಕೇವಲ 7 ರನ್ ಗಳಿಸಿ ಔಟಾದರು.

ಸೈಕಾ ಇಶಾಕ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. 4 ಓವರ್ ಗಳಲ್ಲಿ 33 ರನ್ ನೀಡಿ 3 ವಿಕೆಟ್ ಪಡೆದುಕೊಂಡರು. ಅಮೆಲಿಯಾ ಕೆರ್ 2 ವಿಕೆಟ್ ಪಡೆದರೆ, ಹೈಲಿ ಮ್ಯಾಥ್ಯೂಸ್ ಒಂದು ವಿಕೆಟ್ ಪಡೆದರು.

WPL 2023: Alyssa Healy And Tahlia Mcgraths Half Centuries Power UP Warriorz To Score 159 Runs

ಉಭಯ ತಂಡಗಳ ಆಡುವ ಬಳಗ

ಮುಂಬೈ ಇಂಡಿಯನ್ಸ್: ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹೇಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಧಾರಾ ಗುಜ್ಜರ್, ಅಮೆಲಿಯಾ ಕೆರ್, ಇಸ್ಸಿ ವಾಂಗ್, ಅಮಾನ್ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್.

ಯುಪಿ ವಾರಿಯರ್ಸ್ : ದೇವಿಕಾ ವೈದ್ಯ, ಅಲಿಸ್ಸಾ ಹೀಲಿ (ನಾಯಕಿ), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಗ್ರಾತ್, ದೀಪ್ತಿ ಶರ್ಮಾ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಶಬ್ನಿಮ್ ಇಸ್ಮಾಯಿಲ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್.

Story first published: Sunday, March 12, 2023, 21:25 [IST]
Other articles published on Mar 12, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+