Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2023: ಹೀನಾಯ ಸೋಲಿನ ಬೆನ್ನಲ್ಲೇ ಗುಜರಾತ್ ಜೈಂಟ್ಸ್‌ಗೆ ಮತ್ತೊಂದು ಆಘಾತ!

WPL 2023: Big Blow For Gujarat Giants As Captain Beth Mooney Is Doubtful For WPL 2023

ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಪಂದ್ಯದಲ್ಲೇ ಭಾರಿ ಸೋಲು ಕಂಡಿರುವ ಗುಜರಾತ್ ಜೈಂಟ್ಸ್‌ಗೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ನಾಯಕಿ ಬೆತ್ ಮೂನಿ ಗಾಯಗೊಂಡಿದ್ದು, ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ.

ಶನಿವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮಿಂಚು ಹರಿಸಿದರು. ಟಾಸ್ ಸೋತಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್‌ಪ್ರೀತ್ ಕೌರ್, ಹೇಯ್ಲಿ ಮ್ಯಾಥ್ಯೂಸ್ ಮತ್ತು ಅಮೆಲಿಯಾ ಕೆರ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿತು.

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಗುಜರಾತ್ ಜೈಂಟ್ಸ್‌ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ನಾಯಕಿ ಬೆತ್ ಮೂನಿ 3 ಎಸೆತಗಳನ್ನು ಎದುರಿಸಿದ ನಂತರ ಕಾಲಿನ ನೋವಿನಿಂದ ನರಳಿದರು, ಮತ್ತೆ ಬ್ಯಾಟಿಂಗ್ ಮಾಡಲು ಸಾಧ್ಯವಾಗದೆ ರಿಟೈರ್ಡ್ ಹರ್ಟ್ ಆಗಿ ವಾಪಸಾದರು.

ನಾಯಕಿ ಗಾಯಗೊಂಡ ಬೆನ್ನಲ್ಲೇ ತಂಡದ ಬ್ಯಾಟರ್ ಗಳು ರನ್ ಗಳಿಸುವಲ್ಲಿ ಸಂಪೂರ್ಣವಾಗಿ ವಿಫಲವಾದರು. ಸೈಕಾ ಇಶಾಕ್ 3.1 ಓವರ್ ಗಳಲ್ಲಿ 11 ರನ್ ನೀಡಿ 4 ವಿಕೆಟ್ ಪಡೆದರು. ಅಮೆಲಿಯಾ ಕೆರ್ 2 ಓವರ್ ಗಳಲ್ಲಿ 12 ರನ್ ನೀಡಿ 2 ವಿಕೆಟ್ ಪಡೆದರು. ನ್ಯಾಟ್ ಸಿವರ್ ಬ್ರಂಟ್ ಕೂಡ 2 ವಿಕೆಟ್ ಪಡೆದು ಮಿಂಚಿದರು. ಅಂತಿಮವಾಗಿ 64 ರನ್‌ಗಳಿಗೆ ಗುಜರಾತ್ ತಂಡವನ್ನು ಆಲೌಟ್ ಮಾಡಿದ ಮುಂಬೈ ಇಂಡಿಯನ್ಸ್ ದಾಖಲೆಯ ಗೆಲುವಿನೊಂದಿಗೆ ಟೂರ್ನಿಯನ್ನು ಆರಂಭಿಸಿದೆ.

WPL 2023: Big Blow For Gujarat Giants As Captain Beth Mooney Is Doubtful For WPL 2023

ವಿಶ್ವಕಪ್ ವಿಜೇತ ತಂಡದ ನಾಯಕಿ ಬೆತ್ ಮೂನಿ

ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆದ ಆಸ್ಟ್ರೇಲಿಯಾ ತಂಡದ ನಾಯಕಿ ಬೆತ್ ಮೂನಿ. ಗುಜರಾತ್ ಜೈಂಟ್ಸ್ ಅನುಭವಿ ನಾಯಕಿಯನ್ನೇ ತಮ್ಮ ತಂಡವನ್ನು ಮುನ್ನಡೆಸಲು ಆಯ್ಕೆ ಮಾಡಿತ್ತು.

ಆದರೆ, ಮೊದಲನೇ ಪಂದ್ಯದಲ್ಲೇ ಅವರು ಗಾಯಗೊಂಡಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಭಾನುವಾರ (ಇಂದು) ನಡೆಯುವ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಸ್ನೇಹ್ ರಾಣಾ ನಾಯಕಿಯಾಗಿರಲಿದ್ದಾರೆ.

ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಬೆತ್ ಮೂನಿಯನ್ನು ಗುಜರಾತ್ ಜೈಂಟ್ಸ್ 2 ಕೋಟಿ ರುಪಾಯಿ ನೀಡಿ ಖರೀದಿ ಮಾಡಿತ್ತು. ಅನುಭವಿ ನಾಯಕಿ ಟೂರ್ನಿಯಿಂದ ಸಂಪೂರ್ಣವಾಗಿ ಹೊರಗುಳಿದರೆ ತಂಡಕ್ಕೆ ದೊಡ್ಡ ನಷ್ಟವಾಗಲಿದೆ.

Story first published: Sunday, March 5, 2023, 9:26 [IST]
Other articles published on Mar 5, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+