WPL 2023: ಮತ್ತೆ ಅಬ್ಬರಿಸಿದ ಡೆಲ್ಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ಸ್‌ಗೆ ಗೆಲ್ಲಲು 212 ರನ್‌ಗಳ ಸವಾಲು

ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಮತ್ತೊಂದು ಬೃಹತ್ ಮೊತ್ತದ ಪಂದ್ಯ ನಡೆಯುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಯುಪಿ ವಾರಿಯರ್ಸ್ ತಂಡಗಳ ನಡುವಿನ ಸೆಣೆಸಾಟ ರೋಚಕವಾಇ ನಡೆಯುತ್ತಿದ್ದು ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸ್ಪೋಟಕ ಪ್ರದರ್ಶನ ನೀಡಿದೆ. ನಾಯಕಿ ಮೆಗ್ ಲ್ಯಾನ್ನಿಂಗ್, ಜಮಿಮಾ ಹಾಗೂ ಜಿನಾಸನ್ ಅಬ್ಬರದ ಪ್ರದರ್ಶನ ನೀಡಿದ್ದು ಬರೊಬ್ಬರಿ 211 ರನ್‌ಗಳನ್ನು ಗಳಿಸಿದೆ.
ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿತ್ತು. ಮೊದಲ ವಿಕೆಟ್‌ಗೆ ಭರ್ಜರಿ 67 ರನ್‌ಗಳ ಜೊತೆಯಾಟ ನೀಡಿ ಆರಂಭಿಕ ಜೋಡಿ ಬೇರ್ಪಟ್ಟಿತು. ಆದರೆ ಈ ಪಂದ್ಯದಲ್ಲಿ ಶಫಾಲಿ ವರ್ಮಾ ಕೇವಲ 17 ರನ್‌ಗಳಿಗಷ್ಟೇ ಸೀಮಿತವಾದರು. ಮತ್ತೊಂದು ತುದಿಯಲ್ಲಿ ನಾಯಕಿ ಲ್ಯಾನಿಂಗ್ ಅಬ್ಬರಿಸುತ್ತಿದ್ದರು.
Live ಸ್ಕೋರ್ ಹೀಗಿದೆ
ಮೆಗ್ ಲ್ಯಾನಿಂಗ್ ಈ ಪಂದ್ಯದಲ್ಲಿ ಕೇವಲ 42 ಎಸೆತಗಳನ್ನು ಎದುರಿಸಿ ಭರ್ಜರಿ 70 ರನ್ ಗಳಿಸಿದರು. 10 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿದ್ದರು ಡಿಸಿ ನಾಯಕಿ. ಇನ್ನು ಜಮಿಮಾ ರೋಡ್ರಿಗಸ್ 22 ಎಸೆತಗಳಲ್ಲಿ 34 ರನ್ ಸಿಡಿಸಿದರೆ ಜೆಸ್ ಜೊನಾಸನ್ 20 ಎಸೆತಗಳಲ್ಲಿ 42 ರಬ್ ಬಾರಿಸಿ ತಂಡದ ಮೊತ್ತ ಮತ್ತೊಮ್ಮೆ 200ರ ಗಡಿ ದಾಟಲು ಕಾರಣವಾದರು. ಅಂತಿಮವಾಗಿ ನಿಗಗಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಡೆಲ್ಲಿ ಕ್ಯಾಪಿಟಲ್ಸ್ ತಂಡ 211 ರನ್ ಬಾರಿಸಿದೆ.
ಇನ್ನು ಈ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಒಂದು ಬದಲಾವಣೆ ಮಾಡಿಕೊಂಡು ಕಣಕ್ಕಿಳಿದಿದೆ. ಗ್ರೇಸ್ ಹ್ಯಾರಿಸ್ ಆಡುವ ಬಳಗದಿಂದ ಹೊರಗುಳಿದಿದ್ದು ಅವರ ಬದಲಿಗೆ ಶಬ್ನಿಮ್ ಇಸ್ಮೈಲ್‌ಗೆ ಅವಕಾಶ ದೊರೆತಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಆಡಿದ ಬಳಗದೊಂದಿಗೆ ಕಣಕ್ಕಿಳಿದಿದೆ.
ಡೆಲ್ಲಿ ಕ್ಯಾಪಿಟಲ್ಸ್ ಆಡುವ ಬಳಗ: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಮರಿಜಾನ್ನೆ ಕಪ್, ಜೆಮಿಮಾ ರಾಡ್ರಿಗಸ್, ಆಲಿಸ್ ಕ್ಯಾಪ್ಸೆ, ಜೆಸ್ ಜೊನಾಸ್ಸೆನ್, ತಾನಿಯಾ ಭಾಟಿಯಾ(ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ರಾಧಾ ಯಾದವ್, ತಾರಾ ನಾರ್ರಿಸ್
ಯುಪಿ ವಾರಿಯರ್ಸ್ ಆಡುವ ಬಳಗ: ಅಲಿಸ್ಸಾ ಹೀಲಿ (ವಿಕೆಟ್ ಕೀಪರ್/ನಾಯಕಿ), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ದೀಪ್ತಿ ಶರ್ಮಾ, ಸಿಮ್ರಾನ್ ಶೇಖ್, ದೇವಿಕಾ ವೈದ್ಯ, ಸೋಫಿ ಎಕ್ಲೆಸ್ಟೋನ್, ಶಬ್ನಿಮ್ ಇಸ್ಮಾಯಿಲ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications