WPL 2023: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಜೈಂಟ್ಸ್ ಸೆಣೆಸಾಟ, ಟಾಸ್ ರಿಪೋರ್ಟ್, ಆಡುವ ಬಳಗ

ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಇಂದು ಆರನೇ ಪಂದ್ಯ ನಡೆಯುತ್ತಿದ್ದು ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೊಂಡಿದೆ. ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿದೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲಿಗೆ ಬೌಲಿಂಗ್ ನಡೆಸುವ ಸವಾಲು ಸ್ವೀಕರಿಸಿದೆ.
ರಾಯಲ್ ಚಾಲೆಂಜರ್ಸ್ ಹಾಗೂ ಗುಜರಾತ್ ಜೈಂಟ್ಸ್ ಈ ಎರಡು ತಂಡಗಳಿಗೂ ಕೂಡ ಇದು ಮೂರನೇ ಪಂದ್ಯವಾಗಿದೆ. ಮೊದಲ ಎರಡು ಪಂದ್ಯಗಳಲ್ಲಿಯೂ ಎರಡು ತಂಡಗಳು ಕೂಡ ಸೋಲು ಕಂಡಿದ್ದು ಟೂರ್ನಿಯಲ್ಲಿ ಮೊದಲ ಗೆಲುವಿಗಾಗಿ ಎದುರು ನೋಡುತ್ತಿವೆ. ಹಾಗಾಗಿ ಅಂಕಪಟ್ಟಿಯಲ್ಲಿ ಯಾವ ತಂಡ ಇಂದು ಖಾತೆ ತೆರೆಯಲಿದೆ ಎಂಬುದು ಸದ್ಯದ ಕುತೂಹಲ.
ಗುಜರಾತ್ ಜೈಂಟ್ಸ್ ತಂಡವನ್ನು ಈ ಪಂದ್ಯದಲ್ಲಿ ಸ್ನೇಹ್ ರಾಣಾ ಮುನ್ನಡೆಸುತ್ತಿದ್ದಾರೆ. ನಾಯಕಿ ಮೂನಿ ಅಲಭ್ಯತೆಯಲ್ಲಿ ರಾಣಾ ನಾಯಕತ್ವದ ಜವಾಬ್ಧಾರಿ ವಹಿಸಿಕೊಂಡಿದ್ದಾರೆ. ಇನ್ನು ಯಾವುದೇ ಬದಲಾವಣೆಯಿಲ್ಲದೆ ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡ ಕಣಕ್ಕಿಳಿದಿದೆ. ಇತ್ತ ಆರ್‌ಸಿಬಿ ತಂಡದಲ್ಲಿ ಒಂದು ಬದಲಾವನೆ ಮಾಡಲಾಗಿದ್ದು ದಿಶಾ ಆಡುವ ಬಳಗದಿಂದ ಹೊರಬಿದ್ದಿದ್ದರೆ ಪೂನಮ್ ಕೆಮ್ನಾರ್ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಗುಜರಾತ್ ಜೈಂಟ್ಸ್ ಆಡುವ ಬಳಗ: ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲಿ, ಹರ್ಲೀನ್ ಡಿಯೋಲ್, ಅನ್ನಾಬೆಲ್ ಸದರ್ಲ್ಯಾಂಡ್, ಸುಷ್ಮಾ ವರ್ಮಾ(ವಿಕೆಟ್ ಕೀಪರ್), ಆಶ್ಲೀ ಗಾರ್ಡ್ನರ್, ದಯಾಲನ್ ಹೇಮಲತಾ, ಸ್ನೇಹ ರಾಣಾ(ನಾಯಕಿ), ಕಿಮ್ ಗಾರ್ತ್, ಮಾನ್ಸಿ ಜೋಶಿ, ತನುಜಾ ಕನ್ವರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ(ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್(ವಿಕೆಟ್ ಕೀಪರ್), ಪೂನಂ ಖೇಮ್ನಾರ್, ಕನಿಕಾ ಅಹುಜಾ, ಶ್ರೇಯಾಂಕಾ ಪಾಟೀಲ್, ಮೇಗನ್ ಶುಟ್, ರೇಣುಕಾ ಠಾಕೂರ್ ಸಿಂಗ್, ಪ್ರೀತಿ ಬೋಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications