RCB Vs GG: ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಗುಜರಾತ್ ಜೈಂಟ್ಸ್: ಪ್ಲೇಯಿಂಗ್ 11, ಪಿಚ್ ವರದಿ

ಮುಂಬೈನ ಬ್ರಾಬೌರ್ನೆ ಅಂಗಳದಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಟಾಸ್ ಗೆದ್ದಿರುವ ಗುಜರಾಜ್ ಜೈಂಟ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಎರಡೂ ತಂಡಗಳಿಗೂ ಮಹತ್ವದ ಪಂದ್ಯವಾಗಿದೆ.
ಎರಡೂ ತಂಡಗಳಲ್ಲಿ ಒಂದು ಬದಲಾವಣ ಮಾಡಲಾಗಿದೆ. ಆರ್ಸಿಬಿ ತಂಡದಲ್ಲಿ ರೇಣುಕಾ ಸಿಂಗ್ ಠಾಕೂರ್ ಹೊರಗುಳಿದಿದ್ದು, ಪ್ರೀತಿ ಬೋಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಗುಜರಾತ್ ಜೈಂಟ್ಸ್ ತಂಡದ ಮಾನ್ಸಿ ಜೋಶಿ ಹೊರಗುಳಿದಿದ್ದು, ಶಬ್ಬಿನೇನಿ ಮೇಘನಾ ಆಡುವ ಬಳಗದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.
ಗುಜರಾತ್ ಜೈಂಟ್ಸ್ ಮೊದಲ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಗುಜರಾತ್ ಜೈಂಟ್ಸ್ ವಿರುದ್ಧ ಸೋಲಿನ ಸೇಡು ತೀರಿಸಿಕೊಂಡು ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಉತ್ಸಾಹದಲ್ಲಿದೆ ಮಂಧಾನ ಪಡೆ.
ನಾಯಕಿ ಸ್ಮೃತಿ ಮಂದಾನ 6 ಪಂದ್ಯಗಳಲ್ಲಿ ಉತ್ತಮ ರನ್ ಗಳಿಸುವಲ್ಲಿ ವಿಫಲವಾಗಿದ್ದಾರೆ. ಅವರು ಫಾರ್ಮ್‌ಗೆ ಮರಳಿದರೆ ಆರ್ ಸಿಬಿ ಗೆಲುವು ಸುಲಭವಾಗಲಿದೆ. ಆರ್ಸಿಬಿ ಉತ್ತಮ ಅಂತರದಲ್ಲಿ ಗೆದ್ದು ರನ್‌ರೇಟ್ ಉತ್ತಮಪಡಿಸಿಕೊಂಡರೆ ಮಾತ್ರ ಪ್ಲೇ ಆಫ್ ಅವಕಾಶ ಇರುತ್ತದೆ.

ಸ್ಪಿನ್ನರ್ ಗಳಿಗೆ ನೆರವಾಗುವ ಪಿಚ್
ಬ್ರಾಬೌರ್ನೆ ಕ್ರೀಡಾಂಗಣದಲ್ಲಿ ಪಿಚ್ ಬೌಲರ್ ಗಳಿಗೆ ಹೆಚ್ಚಿನ ನೆರವು ನೀಡುತ್ತಿದೆ. ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಗಳು ಮಿಂಚಿದ್ದರು. ಆಶಾ ಶೋಬನಾ, ಮೇಗನ್ ಶುಟ್, ಸೋಫಿ ಡಿವೈನ್ ಉತ್ತಮ ಬೌಲಿಂಗ್ ಮಾಡುತ್ತಿರುವುದು, ಎಲ್ಲಿಸ್ ಪೆರ್ರಿ ವಿಕೆಟ್ ಪಡೆಯುತ್ತಿರುವುದು ತಂಡದ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ.
ಉಭಯ ತಂಡಗಳ ಆಡುವ ಬಳಗ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸೋಫಿ ಡಿವೈನ್, ಸ್ಮೃತಿ ಮಂಧಾನ(ನಾಯಕಿ), ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್(ವಿಕೆಟ್ ಕೀಪರ್), ಕನಿಕಾ ಅಹುಜಾ, ಶ್ರೇಯಾಂಕ ಪಾಟೀಲ್, ದಿಶಾ ಕಸತ್, ಮೇಗನ್ ಶುಟ್, ಆಶಾ ಶೋಬನಾ, ಪ್ರೀತಿ ಬೋಸ್.
ಗುಜರಾತ್ ಜೈಂಟ್ಸ್ (ಪ್ಲೇಯಿಂಗ್ XI): ಸೋಫಿಯಾ ಡಂಕ್ಲಿ, ಲಾರಾ ವೊಲ್ವಾರ್ಡ್ಟ್, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಸಬ್ಬಿನೇನಿ ಮೇಘನಾ, ಸುಷ್ಮಾ ವರ್ಮಾ(ವಿಕೆಟ್ ಕೀಪರ್), ಕಿಮ್ ಗಾರ್ತ್, ಸ್ನೇಹ ರಾಣಾ(ನಾಯಕಿ), ತನುಜಾ ಕನ್ವರ್, ಅಶ್ವನಿ ಕುಮಾರಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications