WPL 2023: ಮುಂಬೈಗೆ ಬಂದಿಳಿದ ಲಾರಾ ವೊಲ್ವಾರ್ಡ್: ವಿಶೇಷವಾಗಿ ಸ್ವಾಗತಿಸಿದ ಗುಜರಾತ್ ಜೈಂಟ್ಸ್

ಗುಜರಾತ್ ಜೈಂಟ್ಸ್ ತಂಡದ ನಾಯಕಿ ಬೆತ್ ಮೂನಿ ಬದಲಾಗಿ ತಂಡದಲ್ಲಿ ಅವಕಾಶ ಪಡೆದ ಲಾರಾ ವೊಲ್ವಾರ್ಡ್ ಮುಂಬೈಗೆ ಆಗಮಿಸಿದ್ದು ತಂಡವನ್ನು ಸೇರಿಕೊಂಡಿದ್ದಾರೆ. ಸ್ಟಾರ್ ಆಲ್‌ರೌಂಡರ್ ಲಾರಾರನ್ನು ಗುಜರಾತ್ ಜೈಂಟ್ಸ್ ವಿಶೇಷವಾಗಿ ಬರಮಾಡಿಕೊಂಡಿದೆ.
ಲಾರಾ ವೊಲ್ವಾರ್ಡ್ ಗುಜರಾತ್ ಜೈಂಟ್ಸ್ ತಂಡದ ಆಟಗಾರರು ಉಳಿದುಕೊಂಡಿರುವ ಹೋಟೆಲ್‌ಗೆ ಆಗಮಿಸಿದರು. ಗುಜರಾತ್ ಜೈಂಟ್ಸ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ವೋಲ್ವಾರ್ಡ್ ಆಗಮಿಸುತ್ತಿರುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಬಾಲಿವುಡ್‌ನ ಜನಪ್ರಿಯ ಸಿನಿಮಾ 'ಕಭಿ ಖುಷಿ ಕಭಿ ಗಮ್' ಚಲನಚಿತ್ರದ ಹಾಡಿನೊಂದಿಗೆ ಲಾರಾರನ್ನು ಬರಮಾಡಿಕೊಂಡಿದೆ.
ಟೆಸ್ಟ್ ತಂಡಕ್ಕೆ ಮರಳಲಿದ್ದಾರಾ ಸ್ಟಾರ್ ಆಲ್‌ರೌಂಡರ್? ಮಾತುಕತೆಗೆ ಮುಂದಾದ ಬಿಸಿಸಿಐ
ದಕ್ಷಿಣ ಆಫ್ರಿಕಾದ ಬ್ಯಾಟರ್ ಲಾರಾ ವೊಲ್ವಾರ್ಡ್ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಯಾವುದೇ ತಂಡಕ್ಕೆ ಮಾರಾಟವಾಗದೆ ನಿರಾಸೆ ಅನುಭವಿಸಿದ್ದರು. ಲಾರಾ 30 ಲಕ್ಷ ರುಪಾಯಿ ಮೂಲಬೆಲೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದರು.
ಗುಜರಾತ್ ಜೈಂಟ್ಸ್ ತಂಡದ ನಾಯಕಿ ಬೆತ್ ಮೂನಿ ಮೊದಲನೇ ಪಂದ್ಯದಲ್ಲಿ ಗಾಯಗೊಂಡು ಲೀಗ್‌ನಿಂದಲೇ ಹೊರಗುಳಿದ ಕಾರಣ ಬದಲೀ ಆಟಗಾರರಾಗಿ ಲಾರಾ ವೊಲ್ವಾರ್ಡ್‌ರನ್ನು ಆಯ್ಕೆ ಮಾಡಲಾಗಿದೆ. ಪಾಕಿಸ್ತಾನದಲ್ಲಿದ್ದ ಲಾರಾ ವೊಲ್ವಾರ್ಡ್ ಅಲ್ಲಿಂದ ನೇರವಾಗಿ ಮುಂಬೈಗೆ ಆಗಮಿಸಿದ್ದಾರೆ.
ಮೂನಿಯಂತೆ ಸಮರ್ಥ ಆಲ್‌ರೌಂಡರ್
ಬೆತ್ ಮೂನಿಯಂತೆ ಲಾರಾ ವೊಲ್ವಾರ್ಡ್ ಕೂಡ ಟಿ20 ಮಾದರಿಯಲ್ಲಿ ಸ್ಥಿರವಾದ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಜೈಂಟ್ಸ್ ಮೂನಿ ಬದಲಾಗಿ ಸಮರ್ಥ ಆಟಗಾರ್ತಿಯನ್ನೇ ಆಯ್ಕೆ ಮಾಡಿಕೊಂಡಿದೆ. ಅವರು ಮುಂದಿನ ಪಂದ್ಯದಲ್ಲಿ ಸೋಫಿಯಾ ಡಂಕ್ಲಿ ಜೊತೆ ಬ್ಯಾಟಿಂಗ್ ಆರಂಭಿಸುವ ಸಾಧ್ಯತೆ ಇದೆ.
ಬುಧವಾರ ಪಾಕಿಸ್ತಾನ್ ಸೂಪರ್ ಲೀಗ್ ಮಹಿಳಾ ಪಂದ್ಯದಲ್ಲಿ ಆಡಿದ್ದರು. ಸೂಪರ್ ವುಮೆನ್ ತಂಡದ ಪರವಾಗಿ ಕಣಕ್ಕಿಳಿದ ಅವರು 53 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ
ಇತ್ತೀಚೆಗೆ ಮುಕ್ತಾಯವಾದ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಲಾರಾ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 6 ಪಂದ್ಯಗಳಿಂದ 46 ಸರಾಸರಿಯಲ್ಲಿ 230 ರನ್ ಗಳಿಸಿ ಮಿಂಚಿದ್ದರು. ಮೊದಲ ಬಾರಿಗೆ ಫೈನಲ್ ತಲುಪಿದ್ದ ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾ ವಿರುದ್ಧ ಸೋತು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಆಡಿರುವ ಮೂರು ಪಂದ್ಯಗಳಲ್ಲಿ ಒಂದು ಪಂದ್ಯದಲ್ಲಿ ಮಾತ್ರ ಜಯ ಸಾಧಿಸಿರುವ ಗುಜರಾತ್ ಜೈಂಟ್ಸ್ ಮುಂದಿನ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಲಾರಾ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಪ್ಲೇ ಆಫ್ ಸ್ಥಾನಕ್ಕೆ ಪ್ರವೇಶ ಪಡೆಯಬೇಕೆಂದರೆ ಮುಂದಿನ ಪಂದ್ಯಗಳನ್ನು ಗೆಲ್ಲುವುದು ಅನಿವಾರ್ಯವಾಗಿದೆ. ಲಾರಾ ವೊಲ್ವಾರ್ಡ್ ತಂಡವನ್ನು ಸೇರಿಕೊಂಡಿರುವುದು, ಬ್ಯಾಟಿಂಗ್ ಶಕ್ತಿಯನ್ನು ಹೆಚ್ಚಿಸಿದೆ.
ಗುಜರಾತ್ ಜೈಂಟ್ಸ್ ತಂಡ: ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲಿ, ಲಾರಾ ವೊಲ್ವಾರ್ಡ್, ಹರ್ಲೀನ್ ಡಿಯೋಲ್, ಅನ್ನಾಬೆಲ್ ಸದರ್ಲ್ಯಾಂಡ್, ಸುಷ್ಮಾ ವರ್ಮಾ (ವಿಕೆಟ್ ಕೀಪರ್), ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಸ್ನೇಹ ರಾಣಾ (ನಾಯಕಿ), ಕಿಮ್ ಗಾರ್ತ್, ಮಾನ್ಸಿ ಜೋಶಿ, ತನುಜಾ ಕನ್ವರ್, ಮೋನಿಕಾ ಪಟೇಲ್, ಅಶ್ವನಿ ಕುಮಾರಿ, ಶಬ್ನಮ್ ಗಾಲಾ, ಶಕಿಲ್, ಜಾರ್ಜಿಯಾ ವೇರ್ಹ್ಯಾಮ್, ಪರುನಿಕಾ ಸಿಸೋಡಿಯಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications