RCB Vs GG: ಸೋಫಿ ಡಿವೈನ್ ಅಬ್ಬರಕ್ಕೆ ಗುಜರಾತ್ ಜೈಂಟ್ಸ್ ಧೂಳಿಪಟ : ಮಂದಾನ ಪಡೆಗೆ ಭರ್ಜರಿ ಗೆಲುವು

ಮುಂಬೈನ ಬ್ರಾಬೌರ್ನೆ ಅಂಗಳದಲ್ಲಿ ಸೋಫಿ ಡಿವೈನ್ ಅಬ್ಬರಕ್ಕೆ ಗುಜರಾತ್ ಜೈಂಟ್ಸ್ ಪಡೆ ಕಂಗಾಲಾಗಿದೆ. 189 ರನ್‌ಗಳ ಗುರಿಯನ್ನು ಕೇವಲ 15.3 ಓವರ್ ಗಳಲ್ಲಿ ಬೆನ್ನತ್ತುವ ಮೂಲಕ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಎರಡನೇ ಗೆಲುವು ದಾಖಲಿಸಿದೆ.
189 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ್ದ ಆರ್ಸಿಬಿ ತಂಡಕ್ಕೆ ಸೋಫಿ ಡಿವೈನ್ ಸ್ಫೋಟಕ ಆರಂಭ ನೀಡಿದರು. ಮಂದಾನ ಕೂಡ ಎಚ್ಚರಿಕೆಯಿಂದ ಆಡುವ ಮೂಲಕ ಅವರಿಗೆ ಜೊತೆಯಾದರು. 6 ಓವರ್ ಗಳಲ್ಲೇ ಈ ಜೋಡಿ 77 ರನ್ ಕಲೆಹಾಕುವ ಮೂಲಕ ಸುಲಭವಾಗಿ ಗುರಿ ಮುಟ್ಟುವ ಸೂಚನೆ ನೀಡಿತು. ಸ್ಮೃತಿ ಮಂದಾನ 31 ಎಸೆತಗಳಲ್ಲಿ 5 ಬೌಂಡರಿ 1 ಸಿಕ್ಸರ್ ಸಹಿತ 37 ರನ್ ಗಳಿಸಿದರು.
ಒಂದು ಕಡೆ ಮಂದಾನ ವಿಕೆಟ್ ಉಳಿಸಿಕೊಂಡು ನಿಧಾನವಾಗಿ ಆಡುತ್ತಿದ್ದರೆ ಮತ್ತೊಂದೆಡೆ ಸೋಫಿ ಡಿವೈನ್ ಬೌಂಡರಿಗಳು ಸುರಿಮಳೆಗೈದರು. ಕೇವಲ 36 ಎಸೆತಗಳಲ್ಲಿ 275 ಸ್ಟ್ರೈಕ್‌ರೇಟ್‌ನಲ್ಲಿ 9 ಬೌಂಡರಿ ಮತ್ತು 8 ಭರ್ಜರಿ ಸಿಕ್ಸರ್ ನೆರವಿನಿಂದ 99 ರನ್ ಗಳಿಸಿದರು. ಕಿಮ್ ಗಾರ್ತ್ ಬೌಲಿಂಗ್‌ನಲ್ಲಿ ಬೌಂಡರಿ ಹೊಡೆಯುವ ಯತ್ನದಲ್ಲಿ ಅಶ್ವಿನಿ ಕುಮಾರಿಗೆ ಕ್ಯಾಚ್ ನೀಡಿ ಔಟಾದರು.

ಆರ್ಸಿಬಿ ತಂಡಕ್ಕೆ ಸುಲಭ ಗೆಲುವು
ಸೋಫಿ ಡಿವೈನ್ ಔಟಾದ ಬಳಿಕ ಎಲ್ಲಿಸ್ ಪೆರ್ರಿ ಮತ್ತು ಹೀಥರ್ ನೈಟ್ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. ಪೆರ್ರಿ 12 ಎಸೆತಗಳಲ್ಲಿ 3 ಬೌಂಡರಿ ಸಹಿತ 19 ರನ್ ಗಳಿಸಿದರೆ, ಹೀಥರ್ ನೈಟ್ 15 ಎಸೆತಗಳಲ್ಲಿ 22 ರನ್ ಗಳಿಸಿದರು.
ಅಂತಿಮವಾಗಿ 15.3 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 189 ರನ್ ಗಳಿಸುವ ಮೂಲಕ ಆರ್ ಸಿಬಿ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. 7 ಪಂದ್ಯಗಳಲ್ಲಿ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿ 4 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಯುಪಿ ವಾರಿಯರ್ಸ್ ಉಳಿದ ಎರಡೂ ಪಂದ್ಯಗಳಲ್ಲಿ ಭಾರಿ ಅಂತರದಲ್ಲಿ ಸೋತರೆ ಮತ್ತು ಆರ್ ಸಿಬಿ ಮುಂಬೈ ಇಂಡಿಯನ್ಸ್ ವಿರುದ್ಧ ಭಾರಿ ಗೆಲುವು ಸಾಧಿಸಿದರೆ ಮಾತ್ರ ಪ್ಲೇ ಆಫ್‌ಗೆ ಅರ್ಹತೆ ಪಡೆಯಲಿದೆ.

ಶತಕ ತಪ್ಪಿಸಿಕೊಂಡ ಡಿವೈನ್
ಸೋಫಿ ಡಿವೈನ್ ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಶತಕ ದಾಖಲಿಸುವ ಸುವರ್ಣ ಅವಕಾಶವನ್ನು ಕಳೆದುಕೊಂಡರು. ಆದರೂ ಅವರ ಈ ಇನ್ನಿಂಗ್ಸ್ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ. 99 ರನ್ ಗಳಿಸುವ ಮೂಲಕ ಸದ್ಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಆರೆಂಜ್ ಕ್ಯಾಪ್ ಪಡೆದುಕೊಂಡರು. 7 ಪಂದ್ಯಗಳಿಂದ ಅವರು 253 ರನ್ ಗಳಿಸಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್‌ಲ್ಲಿ 94 ಮೀಟರ್ ದೂರದ ಸಿಕ್ಸರ್ ಬಾರಿಸುವ ಮೂಲಕ ಮತ್ತೊಂದು ದಾಖಲೆ ಮಾಡಿದ್ದಾರೆ. ಅಲ್ಲದೆ ಲೀಗ್‌ನಲ್ಲಿ 13 ಸಿಕ್ಸರ್ ಬಾರಿಸಿದ್ದು, ಮೊದಲನೇ ಸ್ಥಾನಕ್ಕೇರಿದ್ದಾರೆ. ತಮ್ಮ ಶ್ರೇಷ್ಠ ಬ್ಯಾಟಿಂಗ್‌ಗಾಗಿ ಪಂದ್ಯ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಉಭಯ ತಂಡಗಳ ಪ್ಲೇಯಿಂಗ್ 11
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸೋಫಿ ಡಿವೈನ್, ಸ್ಮೃತಿ ಮಂಧಾನ(ನಾಯಕಿ), ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್(ವಿಕೆಟ್ ಕೀಪರ್), ಕನಿಕಾ ಅಹುಜಾ, ಶ್ರೇಯಾಂಕ ಪಾಟೀಲ್, ದಿಶಾ ಕಸತ್, ಮೇಗನ್ ಶುಟ್, ಆಶಾ ಶೋಬನಾ, ಪ್ರೀತಿ ಬೋಸ್.
ಗುಜರಾತ್ ಜೈಂಟ್ಸ್ : ಸೋಫಿಯಾ ಡಂಕ್ಲಿ, ಲಾರಾ ವೊಲ್ವಾರ್ಡ್ಟ್, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಸಬ್ಬಿನೇನಿ ಮೇಘನಾ, ಸುಷ್ಮಾ ವರ್ಮಾ(ವಿಕೆಟ್ ಕೀಪರ್), ಕಿಮ್ ಗಾರ್ತ್, ಸ್ನೇಹ ರಾಣಾ(ನಾಯಕಿ), ತನುಜಾ ಕನ್ವರ್, ಅಶ್ವನಿ ಕುಮಾರಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications