Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸತತ ಐದನೇ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್: ಗೆಲುವಿನ ಮಂತ್ರ ವಿವರಿಸಿದ ನಾಯಕಿ ಕೌರ್

WPL 2023: MI skipper Harmanpreet Kaur reaction after 5 victory say Positivity is giving the results

ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ತಡೆಯುವವರೇ ಇಲ್ಲ ಎಂಬಂತಾಗಿದೆ. ಆಡಿರುವ ಐದು ಪಂದ್ಯಗಳಲ್ಲಿ ಐದರಲ್ಲಿಯೂ ಗೆಲುವು ಸಾಧಿಸಿರುವ ಮುಂಬೈ ಇಂಡಿಯನ್ಸ್ ಅಮೋಘ ಪ್ರದರ್ಶನದೊಂದಿಗೆ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಮಂಗಳವಾರ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿಯೂ ಅದ್ಭುತ ಪ್ರದರ್ಶನ ನೀಡಿರುವ ಮುಂಬೈ ಇಂಡಿಯನ್ಸ್ ಅಜೇಯ ತಂಡವಾಗಿ ಮುಂದುವರಿದಿದೆ.

ಈ ಗೆಲುವಿನ ಬಳಿಕ ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಪ್ರತಿಕ್ರಿಯೆ ನೀಡಿದ್ದು ತಂಡದ ಈ ಸತತ ಯಶಸ್ಸಿನ ಹಿಂದಿನ ಕಾರಣ ವಿವರಿಸಿದ್ದಾರೆ. ತಂಡದಲ್ಲಿರುವ ಸಕಾರಾತ್ಮಕತೆಯೇ ಈ ಫಲಿತಾಂಶಕ್ಕೆ ಕಾರಣ ಎಂದಿದ್ದಾರೆ ಮುಂಬೈ ಇಂಡಿಯನ್ಸ್ ತಂಡದ ನಾಯಕಿ. ಸ್ವತಃ ಹರ್ಮನ್‌ಪ್ರೀತ್ ಅದ್ಭುತ ಫಾರ್ಮ್‌ನಲ್ಲಿದ್ದು ಮುಂಬೈ ಇಂಡಿಯನ್ಸ್ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.

ಮಂಗಳವಾರ ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಅಮೋಘ ಗೆಲುವು ಸಾಧಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡ ಸತತ ಐದನೇ ಗೆಲುವು ಸಾಧಿಸುವುದರ ಜೊತೆಗೆ ತನ್ನ ಪ್ಲೇ ಆಫ್ ಸ್ಥಾನವನ್ನು ಭದ್ರಗೊಳಿಸಿದೆ. ಹರ್ಮನ್‌ಪ್ರೀತ್ ಹೌರ್ ಹಾಗೂ ಬೌಲರ್‌ಗಳ ಪರಿಶ್ರಮದಿಂದಾಗಿ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 55 ರನ್‌ಗಳ ಅಂತರದ ಗೆಲುವು ಸಾಧಿಸಿದೆ.

ಈ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಮತ್ತೊಂದು ಅರ್ಧ ಶತಕ ಸಿಡಿಸಿದ್ದು ನ್ಯಾಟ್ ಸೀಮಿರ್ ಬ್ರಂಟ್ ಮತ್ತು ಹೀಲಿ ಮ್ಯಾಥ್ಯೂಸ್ ತಲಾ ಮೂರು ವಿಕೆಟ್ ಪಡೆದುಕೊಂಡಿದ್ದಾರೆ. ಮುಂವೈ ಇಂಡಿಯನ್ಸ್ ನೀಡಿದ 163 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಜೈಂಟ್ಸ್ ತಂಡ ಕೇವಲ 107 ರನ್‌ಗಳಿಗೆ ಆಲೌಟ್ ಆಗಿ ತನ್ನ ಆಟವನ್ನು ಮುಗಿಸಿತು.

"ಗೆಲುವಿನ ಬಳಿಕ ಮಾತನಾಡಿದ ಹರ್ಮನ್‌ಪ್ರೀತ್ ಕೌರ್, "ಈ ಗೆಲುವಿನ ಶ್ರೇಯಸ್ಸು ತಂಡದ ಎಲ್ಲಾ ಸಹಾಯಕ ಸಿಬ್ಬಂದಿಗಳಿಗೆ ಹಾಗೂ ಸದಸ್ಯರಿಗೆ ಸೇರಬೇಕು. ಈಗ ಆಡುತ್ತಿರುವ ರೀತಿಯಲ್ಲಿಯೇ ಮುಂದುವರಿಯಲು ನಾವು ಬಯಸುತ್ತೇವೆ. ನಾವೆಲ್ಲರೂ ಬಹಳ ಸಕಾರಾತ್ಮಕವಾಗಿದ್ದು ಎಲ್ಲರೂ ತಂಡಕ್ಕೆ ಉತ್ತಮವಾಗಿರುವುದನ್ನು ಮಾಡಲು ಉತ್ಸುಕರಾಗಿದ್ದಾರೆ. ಈ ತಂಡ ದೊರೆತಾಗ ನಾನು ಬಹಳ ಹರ್ಷಿತನಾಗಿದ್ದೆ. ಎಲ್ಲರೂ ತಮ್ಮ ದೇಶಕ್ಕೆ ಉತ್ತಮವಾದ ಕೊಡುಗೆ ನೀಡುತ್ತಿದ್ದರು. ಈಗ ಮುಂಬೈ ಇಂಡಿಯನ್ಸ್ ಪರವಾಗಿಯೂ ಅಂಥಾದ್ದೇ ಪ್ರದರ್ಶನ ನೀಡುತ್ತಿದ್ದಾರೆ" ಎಂದಿದ್ದಾರೆ ಹರ್ಮನ್‌ಪ್ರೀತ್ ಕೌರ್.

ಮುಂಬೈ ಇಂಡಿಯನ್ಸ್: ಹೀಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಧಾರಾ ಗುಜ್ಜರ್, ಅಮೆಲಿಯಾ ಕೆರ್, ಇಸ್ಸಿ ವಾಂಗ್, ಅಮನ್ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್
ಬೆಂಚ್: ಸೋನಮ್ ಯಾದವ್, ನೀಲಂ ಬಿಷ್ಟ್, ಪ್ರಿಯಾಂಕಾ ಬಾಲಾ, ಪೂಜಾ ವಸ್ತ್ರಾಕರ್, ಹೀದರ್ ಗ್ರಹಾಂ, ಕ್ಲೋಯ್ ಟ್ರಯಾನ್

ಗುಜರಾತ್ ಜೈಂಟ್ಸ್: ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲಿ, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಅನ್ನಾಬೆಲ್ ಸದರ್ಲ್ಯಾಂಡ್, ಸುಷ್ಮಾ ವರ್ಮಾ (ವಿಕೆಟ್ ಕೀಪರ್), ಕಿಮ್ ಗಾರ್ತ್, ತನುಜಾ ಕನ್ವರ್, ಸ್ನೇಹ ರಾಣಾ (ನಾಯಕಿ), ಮಾನ್ಸಿ ಜೋಶಿ
ಬೆಂಚ್: ಲಾರಾ ವೊಲ್ವಾರ್ಡ್ಟ್, ಜಾರ್ಜಿಯಾ ವೇರ್ಹ್ಯಾಮ್, ಮೋನಿಕಾ ಪಟೇಲ್, ಅಶ್ವನಿ ಕುಮಾರಿ, ಹರ್ಲಿ ಗಾಲಾ, ಶಬ್ನಮ್ ಎಂಡಿ ಶಕಿಲ್, ಪರುನಿಕಾ ಸಿಸೋಡಿಯಾ

Story first published: Wednesday, March 15, 2023, 8:56 [IST]
Other articles published on Mar 15, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+