For Quick Alerts
ALLOW NOTIFICATIONS  
For Daily Alerts
 

WPL 2023: ಮೊದಲ ಪಂದ್ಯದಲ್ಲಿ ಕೌರ್ ಅಬ್ಬರ: ಗುಜರಾತ್‌ಗೆ ಬೃಹತ್ ಗುರಿ ನೀಡಿದ ಎಂಐ

WPL 2023: MI vs GG 1st match, Gujarat Giants need 208 runs to win against Mumbai Indians

ವುಮೆನ್ಸ್ ಪ್ರೀಮಿಯರ್ ಲೀಗ್‌ ಭರ್ಜರಿಯಾಗಿ ಆರಂಭ ಪಡೆದುಕೊಂಡಿದ್ದು ಮೊದಲ ಪಂದ್ಯ ಅಭಿಮಾನಿಗಳಿಗೆ ಭರಪೂರ ಮನರಂಜನೆ ಒದಗಿಸಿದೆ. ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳ ನಡುವಿನ ಸೆಣೆಸಾಟದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ಅದ್ಬುತ ಬ್ಯಾಟಿಂಗ್ ಪ್ರದರ್ಶಿಸಿದೆ. ಸ್ವತಃ ನಾಯಕಿ ಕೌರ್ ಸ್ಪೋಟಕ ಪರದರ್ಶನ ನಿಡಿದ್ದು ತಂಡದ ಬೃಹತ್ ಮೊತ್ತಕ್ಕೆ ಕಾರಣವಾದರು.

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಆರಂಭಿಸಿದ ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಆಟಗಾರ್ತಿ ಯಸ್ತಿಕಾ ಭಾಟಿಯಾ ವೇಗನೆ ವಿಕೆಟ್ ಕಳದುಕೊಂಡರು. ಆದರೆ ಉಳಿದ ಬ್ಯಾಟರ್‌ಗಳಿಂದ ಅದ್ಭುತ ಪ್ರದರ್ಶನ ಬಂದಿದೆ. ಹೇಲಿಸ್ ಮ್ಯಾಥ್ಯೂಸ್ 47 ರನ್‌ಗಳ ಕೊಡುಗೆ ನೀಡಿದರೆ ಬ್ರುಂಟ್ 23 ರನ್‌ಗಳನ್ನು ಗಳಿಸಿದರು.

ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕಿ ಕೌರ್ ಅಬ್ಬರದ ಪ್ರದರ್ಶನ ನೀಡಿದ್ದಾರೆ. ಕೇವಲ 30 ಎಸೆತಗಳಲ್ಲಿ 65 ರನ್‌ಗಳಿಸಿದ ಹರ್ಮನ್ 216.67 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಬರೊಬ್ಬರಿ 14 ಬೌಂಡರಿ ಸಿಡಿಸಿದರು ಕೌರ್. ನಂತರ ಅಮೆಲಿ ಕೆರ್ ಕೂಡ ಸ್ಪೋಟಕ ಪ್ರದರ್ಶನ ನೀಡಿದ್ದು 24 ಎಸೆಯಗಳಲ್ಲಿ 45 ರನ್‌ಗಳಿಸಿದರು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ 5 ವಿಕೆಟ್ ಕಳೆದುಕೊಂಡು 207 ರನ್‌ಗಳನ್ನು ಗಳಿಸಿದೆ.

ಇನ್ನು ಗುಜರಾತ್ ಜೈಂಟ್ಸ್ ತಂಡದ ಪರವಾಗಿ ಸ್ನೇಹ್ ರಾಣಾ ಎರಡು ವಿಕೆಟ್ ಪಡೆದರಾದರೂ 4 ಓವರ್‌ಗಳಲ್ಲಿ 43 ರನ್ ನೀಡುವ ಮೂಲಕ ದುಬಾರಿ ಎನಿಸಿದ್ದಾರೆ. ಆಶ್ಲೆ ಗಾರ್ಡ್ನರ್, ತನುಜಾ ಕನ್ವರ್, ಝಾರ್ಜಿಯಾ ವರೆಹಮ್ ತಲಾ ಒಂದು ವಿಕೆಟ್ ಪಡೆದರು.

ಗುಜರಾತ್ ಜೈಂಟ್ಸ್ ಸ್ಕ್ವಾಡ್: ಬೆತ್ ಮೂನಿ (ನಾಯಕಿ & ವಿಕೆಟ್ ಕೀಪರ್), ಸಬ್ಬಿನೇನಿ ಮೇಘನಾ, ಹರ್ಲೀನ್ ಡಿಯೋಲ್, ಆಶ್ಲೀ ಗಾರ್ಡ್ನರ್, ಅನ್ನಾಬೆಲ್ ಸದರ್ಲ್ಯಾಂಡ್, ದಯಾಲನ್ ಹೇಮಲತಾ, ಜಾರ್ಜಿಯಾ ವಾರೆಹಮ್, ಸ್ನೇಹ ರಾಣಾ, ತನುಜಾ ಕನ್ವರ್, ಮೋನಿಕಾ ಪಟೇಲ್, ಮಾನ್ಸಿ ಜೋಶಿ
ಬೆಂಚ್: ಸೋಫಿಯಾ ಡಂಕ್ಲಿ, ಅಶ್ವನಿ ಕುಮಾರಿ, ಹರ್ಲಿ ಗಾಲಾ, ಶಬ್ನಮ್ ಎಂಡಿ ಶಕಿಲ್, ಪರುಣಿಕಾ ಸಿಸೋಡಿಯಾ, ಸುಷ್ಮಾ ವರ್ಮಾ, ಕಿಮ್ ಗಾರ್ತ್

ಮುಂಬೈ ಇಂಡಿಯನ್ಸ್ ಸ್ಕ್ವಾಡ್: ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹರ್ಮನ್‌ಪ್ರೀತ್ ಕೌರ್ (ನಾಯಕಿ), ನ್ಯಾಟ್ ಸ್ಕಿವರ್-ಬ್ರಂಟ್, ಅಮೆಲಿಯಾ ಕೆರ್, ಅಮಂಜೋತ್ ಕೌರ್, ಪೂಜಾ ವಸ್ತ್ರಕರ್, ಹುಮೈರಾ ಕಾಜಿ, ಇಸ್ಸಿ ವಾಂಗ್, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್
ಬೆಂಚ್: ಹೀದರ್ ಗ್ರಹಾಂ, ಪ್ರಿಯಾಂಕಾ ಬಾಲಾ, ನೀಲಂ ಬಿಷ್ಟ್, ಧಾರಾ ಗುಜ್ಜರ್, ಸೋನಮ್ ಯಾದವ್, ಕ್ಲೋಯ್ ಟ್ರಯಾನ್

Story first published: Saturday, March 4, 2023, 21:43 [IST]
Other articles published on Mar 4, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+