Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2023: ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕಿಯಾಗಿ ಹರ್ಮನ್‌ಪ್ರೀತ್ ಕೌರ್ ನೇಮಕ

WPL 2023: Mumbai Indians announced Harmanpreet Kaur as Captain of the Team

ಚೊಚ್ಚಲ ಆವೃತ್ತಿಯ ವುಮೆನ್ಸ್ ಲೀಗ್ ಟೂರ್ನಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು ಮಾರ್ಚ್ 4ರಂದು ಈ ಪ್ರತಿಷ್ಠಿತ ಟೂರ್ನಿಗೆ ಚಾಲನೆ ದೊರೆಯಲಿದೆ. ಐದು ತಂಡಗಳ ಈ ಟೂರ್ನಿ ಸಾಕಷ್ಟು ಕುತೂಹಲ ಮೂಡಿಸಿದ್ದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಚೊಚ್ಚಲ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕಿಯನ್ನು ಫ್ರಾಂಚೈಸಿ ನೇಮಕಗೊಳಿಸಿದ್ದು ಹರ್ಮನ್‌ಪ್ರೀತ್ ಕೌರ್‌ಗೆ ನಾಯಕತ್ವದ ಹೊಣೆಗಾರಿಕೆ ದೊರೆತಿದೆ.

ಭಾರತ ಮಹಿಳಾ ತಂಡದ ನಾಯಕಿಯಾಗಿರುವ ಹರ್ಮನ್‌ಪ್ರೀತ್ ಕೌರ್‌ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಗಾರ್ತಿಯಾಗಿದ್ದಾರೆ. ಹೀಗಾಗಿ ನಾಯಕಿಯಾಗಿ ಹರ್ಮನ್‌ಪ್ರೀತ್ ಕೌರ್ ನಾಯಕಿಯಾಗಿ ಆಯ್ಕೆಯಾಗುವ ನಿರೀಕ್ಷೆಯಿತ್ತು. ಇದೀಗ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಈ ವಿಚಾರವನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.

ಡಬ್ಲ್ಯುಪಿಎಲ್ 2023 ಹರಾಜಿನಲ್ಲಿ ಹರ್ಮನ್‌ಪ್ರೀತ್ ಕೌರ್ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಯ್ಕೆಯಾಗಿದೆ. ಈ ಸ್ಟಾರ್ ಬ್ಯಾಟರ್ ಮುಂಬೈ ಇಂಡಿಯನ್ಸ್ ತಂಡಕ್ಕೆ 1.80 ಕೋಟಿ ಮೊತ್ತಕ್ಕೆ ಹರಾಜಾಗಿದ್ದಾರೆ. 50 ಲಕ್ಷ ರೂಪಾಯಿ ಮೂಲ ಬೆಲೆ ಹೊಂದಿದ್ದರು ಹರ್ಮನ್‌ಪ್ರೀತ್ ಕೌರ್.

ಮುಂಬೈ ಇಂಡಿಯನ್ಸ್ ತಂಡ ಚೊಚ್ಚಲ WPL ಆವೃತ್ತಿಯ ಮೊಟ್ಟಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಮಾರ್ಚ್ 4ರಂದು ಎದುರಿಸಲಿದೆ. ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ. ಪ್ರತಿ ತಂಡಗಳು ಕೂಡ ಲೀಗ್ ಹಂತದಲ್ಲಿ ಎರಡು ಬಾರಿ ಮುಖಾಮುಖಿಯಾಗಲಿದ್ದು ಲೀಗ್ ಹಂತದಲ್ಲಿ ಪ್ರತಿ ತಂಡ ಕೂಡ 8 ಪಂದ್ಯಗಳನ್ನು ಆಡಲಿದೆ.

ಇನ್ನು ಮುಂಬೈ ಇಂಡಿಯನ್ಸ್ ಮಹಿಳಾ ತಂಡಕ್ಕೆ ಚಾರ್ಲೊಟ್ ಎಡ್ವರ್ಡ್ಸ್ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದು ಭಾರತದ ಮಾಜಿ ವೇಗಿ ಜೂಲನ್ ಗೋಸ್ವಾಮಿ ಬೌಲಿಂಗ್ ಕೋಚ್ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ದೇವಿಕಾ ಪಲ್ಶೀಕರ್ ಬ್ಯಾಟಿಂಗ್ ಕೋಚ್ ಆಗಿ ಕರ್ತವ್ಯ ನಿರ್ವಹಿಸಲಿದ್ದು ಲಿಡಿಯಾ ಗ್ರೀನ್‌ವೇ ಫೀಲ್ಡಿಂಗ್ ಕೋಚ್ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಮುಂಬೈ ಇಂಡಿಯನ್ಸ್ ಮಹಿಳಾ ತಂಡದಲ್ಲಿ ಕೆಲ ಪ್ರಮುಖ ಆಟಗಾರರೆಂದರೆ ನ್ಯಾಟ್ ಸಿವರ್-ಬ್ರಂಟ್, ಪೂಜಾ ವಸ್ತ್ರಾಕರ್, ಯಾಸ್ತಿಕಾ ಭಾಟಿಯಾ ಮತ್ತು ಹೀದರ್ ಗ್ರಹಾಂ.

ಮುಂಬೈ ಇಂಡಿಯನ್ಸ್ ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್, ನ್ಯಾಟ್ ಸಿವರ್-ಬ್ರಂಟ್, ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಯಾಸ್ತಿಕಾ ಭಾಟಿಯಾ, ಹೀದರ್ ಗ್ರಹಾಂ, ಇಸಾಬೆಲ್ಲೆ ವಾಂಗ್, ಅಮನ್‌ಜೋತ್ ಕೌರ್, ನೀಲಂ ಬಿಶ್ತ್, ಧಾರಾ ಗುಜ್ಜರ್, ಸೈಕಾ ಇಶಾಕ್, ಹೇಲಿ ಮ್ಯಾಥ್ಯೂಸ್, ಕ್ಲೋಯ್ ಟ್ರಯಾನ್, ಹುಮೈರಾ ಕಾಜಿ, ಪ್ರಿಯಾಂಕಾ ಬಾಲಾ, ಸೋನಮ್ ಯಾದವ್ ಮತ್ತು ಜಿಂಟಿಮನಿ ಕಲಿತಾ.

Story first published: Wednesday, March 1, 2023, 18:18 [IST]
Other articles published on Mar 1, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+