Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2023: ಇಸ್ಸಿ ವಾಂಗ್ ಹ್ಯಾಟ್ರಿಕ್ : ಯುಪಿ ವಾರಿಯರ್ಸ್ ಮಣಿಸಿ ಫೈನಲ್‌ ಪ್ರವೇಶಿಸಿದ ಮುಂಬೈ ಇಂಡಿಯನ್ಸ್ ಪಡೆ

WPL 2023: Mumbai Indians Defeat UP Warriorz By 72 Runs To Enter The Final

ಮಹಿಳಾ ಪ್ರೀಮಿಯರ್ ಲೀಗ್ 2023ರ ಪ್ಲೇ ಆಫ್ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ 72 ರನ್‌ಗಳ ಭರ್ಜರಿ ಜಯ ಸಾಧಿಸಿದ ಮುಂಬೈ ಇಂಡಿಯನ್ಸ್ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

ಮುಂಬೈ ಇಂಡಿಯನ್ಸ್ ನೀಡಿದ 183 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಯುಪಿ ವಾರಿಯರ್ಸ್ ಆರಂಭದಲ್ಲೇ ಆಘಾತ ಅನುಭವಿಸಿತು, ಆರಂಭಿಕ ಆಟಗಾರ್ತಿ ಶ್ವೇತಾ ಶೆರಾವತ್ 8 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ, ಸೈಕಾ ಇಶಾಕ್‌ಗೆ ವಿಕೆಟ್ ಒಪ್ಪಿಸಿದರು. ನಾಯಕಿ ಅಲಿಸ್ಸಾ ಹೀಲಿ 6 ಎಸೆತಗಳಲ್ಲಿ 11 ರನ್ ಗಳಿಸಿ ಔಟಾದರು.

ನಂತರ ಬಂದ ಕಿರಣ್ ನವಿಗೆರೆ 27 ಎಸೆತಗಳಲ್ಲಿ 43 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾಗಲು ಯತ್ನಿಸಿದರೂ ಇತರೆ ಆಟಗಾರರಿಂದ ಅವರಿಗೆ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ತಹಿಲಾ ಮೆಗ್ರಾ 6 ಎಸೆತಗಳಲ್ಲಿ 7 ರನ್ ಗಳಿಸಿ ರನೌಟ್ ಆದರು.

ಗ್ರೇಸ್ ಹ್ಯಾರಿಸ್ 12 ಎಸೆತಗಳಲ್ಲಿ 14 ರನ್ ಗಳಿಸಿದರೆ, ದೀಪ್ತಿ ಶರ್ಮಾ 20 ಎಸೆತಗಳಲ್ಲಿ ಕೇವಲ 16 ರನ್ ಗಳಿಸಿ ನಿರ್ಗಮಿಸಿದರು. ಸಿಮ್ರಾನ್ ಶೇಕ್ ಮತ್ತು ಸೋಫಿ ಎಕ್ಲಸ್ಟೋನ್ ಶೂನ್ಯಕ್ಕೆ ಔಟಾದರು. ಅಂಜಲಿ ಸರ್ವಾಣಿ 11 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿ ಔಟಾದರು.

ಇಸ್ಸಿ ವಾಂಗ್ ಅಮೋಘ ಹ್ಯಾಟ್ರಿಕ್

ಮುಂಬೈ ಇಂಡಿಯನ್ಸ್ ತಂಡ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿತು. ಇಸ್ಸಿ ವಾಂಗ್ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಯುಪಿ ವಾರಿಯರ್ಸ್ ತಂಡಕ್ಕೆ ಆಘಾತ ನೀಡಿದರು. ಕಿರಣ್ ನವಿಗೆರೆ, ಸಿಮ್ರಾನ್ ಶೇಕ್ ಮತ್ತು ಸೋಫಿ ಎಕ್ಲಸ್ಟೋನ್ ಅವರ ವಿಕೆಟ್ ಪಡೆಯುವ ಮೂಲಕ ಮುಂಬೈ ಇಂಡಿಯನ್ಸ್ ತಂಡದ ಗೆಲುವನ್ನು ಖಚಿತಪಡಿಸಿದರು.

ಇಸ್ಸಿ ವಾಂಗ್ 4 ಓವರ್ ಗಳಲ್ಲಿ 15 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಮಿಂಚಿದರು. ಸೈಕಾ ಇಶಾಕ್ ಎರಡು ವಿಕೆಟ್ ಪಡೆದರೆ, ನ್ಯಾಟ್ ಸಿವರ್ ಬ್ರಂಟ್, ಹೇಲಿ ಮ್ಯಾಥ್ಯೂಸ್ ಮತ್ತು ಜಿಂತಿಮಣಿ ಕಲಿತಾ ತಲಾ ಒಂದು ವಿಕೆಟ್ ಪಡೆದರು.

WPL 2023: Mumbai Indians Defeat UP Warriorz By 72 Runs To Enter The Final

ನ್ಯಾಟ್ ಸಿವರ್ ಬ್ರಂಟ್ ಅಮೋಘ ಅರ್ಧಶತಕ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ನ್ಯಾಟ್ ಸಿವರ್ ಬ್ರಂಟ್ ಆಸರೆಯಾದರು. ಕೇವಲ 38 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಭರ್ಜರಿ ಸಿಕ್ಸರ್ ನೆರವಿನಿಂದ ಅಜೇಯ 72 ರನ್ ಗಳಿಸಿದರು. ಯಾಸ್ತಿಕಾ ಭಾಟಿಯಾ 21 ರನ್, ಹೇಳಿ ಮ್ಯಾಥ್ಯೂಸ್ 26, ಹರ್ಮನ್‌ಪ್ರೀತ್ ಕೌರ್ 14, ಮೆಲಿಯಾ ಕೆರ್ 29 ರನ್ ಗಳಿಸಿದರೆ, ಪೂಜಾ ವಸ್ತ್ರಾಕರ್ 4 ಎಸೆತಗಳಲ್ಲಿ ಅಜೇಯ 11 ರನ್ ಗಳಿಸಿದರು.

ಮುಂಬೈ ಇಂಡಿಯನ್ಸ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣೆಸಲಿದೆ. ಮಾರ್ಚ್ 26ರಂದು ಮುಂಬೈನ ಬ್ರಬೌರ್ನೆ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.

Story first published: Friday, March 24, 2023, 22:57 [IST]
Other articles published on Mar 24, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+