WPL 2023: ಮುಂಬೈ ಇಂಡಿಯನ್ಸ್‌ಗೆ ಗೆಲ್ಲಲು ಸುಲಭ ಸವಾಲು ನೀಡಿದ ಡೆಲ್ಲಿ ಕ್ಯಾಪಿಟಲ್ಸ್

ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಇಂದು ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬೌಲಿಂಗ್ ವಿಭಾಗ ಅದ್ಭುತ ಪ್ರದರ್ಶನ ನೀಡಿದ್ದು ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್‌ಗಳನ್ನು ಸುಲಭಕ್ಕೆ ಕಟ್ಟಿ ಹಾಕಿದ್ದಾರೆ. ಬ್ಯಾಟಿಂಗ್‌ಗೆ ಸ್ವರ್ಗವೆನಿಸಿದ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಬ್ಯಾಟಿಂಗ್ ನಡೆಸಲು ಪರದಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೇವಲ 105 ರನ್‌ಗಳಿಗೆ ಆಲೌಟ್ ಆಗಿದೆ.
ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಬಹುತೇಕ ಎಲ್ಲಾ ಆಟಗಾರರ್ತಿಯರು ಕೂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಆರಂಬಿಕ ಆಟಗಾರ್ತಿ ಶಫಾರ್ಲಿ ವರ್ಮಾ ಕೇವಲ ಎರಡು ರನ್‌ಗಳಿಸಿ ವಿಕೆಟ್ ಕಳೆದುಕೊಳ್ಳುವ ಮೂಲಕ ಡೆಲ್ಲಿ ತಂಡದ ಕುಸಿತ ಆರಂಭವಾಗಿತ್ತು. ನಾಯಕಿ ಮೆಗ್ ಲಾನಿಂಗ್ ಮಾತ್ರವೇ ಡೆಲ್ಲಿ ಪರವಾಗಿ ಉತ್ತಮ ಪ್ರದರ್ಶನ ನೀಡಿದರು. ಜಮಿಮಾ ರೋಡ್ರಿಗಸ್ ಬ್ಯಾಟ್‌ನಿಂದ ಸಣ್ಣ ಹೋರಾಟ ಬಂದಿದೆ. ಲ್ಯಾನಿಂಗ್ 41 ಎಸೆತಗಳಲ್ಲಿ 43 ರನ್‌ಗಳಿಸಿದರೆ ಜಮಿಮಾ 18 ಎಸೆತ ಎದುರಿಸಿ 25 ರನ್‌ಗಳಿಸಿದರು.
ಉಳಿದಂತೆ ಎಲ್ಲಾ ಬ್ಯಾಟರ್‌ಗಳು ಕೂಡ ಒಂದಂಕಿಗೆ ವಿಕೆಟ್ ಕಳೆದುಕೊಂಡಿದ್ದು ವಿಪರ್ಯಾಸ. 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಾಧಾ ಯಾದವ್ 10 ರನ್‌ಗಳಿಸಿದರು. ಈ ಮೂಲಕ ಮೊದಲ ಎರಡು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಡೆಲ್ಲಿ ಕ್ಯಾಪಿಟಲ್ಸ ಮೂರನೇ ಪಂದ್ಯದಲ್ಲಿ ಮುಗ್ಗರಿಸಿದೆ.
ಇನ್ನು ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಬೌಲರ್‌ಗಳು ಸಾಂಘಿಕ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಸೈಕಾ ಇಶಾಕ್, ಇಸೀ ವಾಂಗ್, ಹಾಗೂ ಹೇಲಿ ಮ್ಯಾಥ್ಯೂಸ್ ತಲಾ ಮೂರು ವಿಕೆಟ್ ಕಬಳಿಸಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಆಘಾತ ನೀಡಿದರು. ಒಂದು ವಿಕೆಟ್ ಪೂಜಾ ವಸ್ತ್ರಾಕರ್ ಪಾಲಾಗಿದೆ.
ಈ ಎರಡು ತಂಡಗಳಿಗೂ ಇದು ಮೂರನೇ ಪಂದ್ಯವಾಗಿದೆ. ಆಡಿರುವ ಎರಡು ಪಂದ್ಯಗಳಲ್ಲಿಯೂ ಎರಡು ತಂಡಗಳು ಕೂಡ ಗೆಲುವು ಸಾಧಿದ್ದು ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನದಲ್ಲಿದೆ. ನೆಟ್ ರನ್‌ರೇಟ್ ಆಧಾರದಲ್ಲಿ ಮುಂಬೈ ಇಂಡಿಯನ್ಸ ಮೊದಲ ಸ್ಥಾನದಲ್ಲಿದ್ದರೆ ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಸ್ಥಾನದಲ್ಲಿದೆ
ಮುಂಬೈ ಇಂಡಿಯನ್ಸ್ ಮಹಿಳೆಯರು (ಪ್ಲೇಯಿಂಗ್ XI): ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್(ನಾಯಕಿ), ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಇಸ್ಸಿ ವಾಂಗ್, ಅಮಂಜೋತ್ ಕೌರ್, ಹುಮೈರಾ ಕಾಜಿ, ಜಿಂತಿಮಣಿ ಕಲಿತಾ, ಸೈಕಾ ಇಶಾಕ್
ಡೆಲ್ಲಿ ಕ್ಯಾಪಿಟಲ್ಸ್: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಮರಿಜಾನ್ನೆ ಕಪ್, ಜೆಮಿಮಾ ರಾಡ್ರಿಗಸ್, ಆಲಿಸ್ ಕ್ಯಾಪ್ಸಿ, ಜೆಸ್ ಜೊನಾಸ್ಸೆನ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಮಿನ್ನು ಮಣಿ, ಶಿಖಾ ಪಾಂಡೆ, ರಾಧಾ ಯಾದವ್, ತಾರಾ ನಾರ್ರಿಸ್
ಬೆಂಚ್: ಲಾರಾ ಹ್ಯಾರಿಸ್, ಜಸಿಯಾ ಅಖ್ತರ್, ಅಪರ್ಣಾ ಮೊಂಡಲ್, ಪೂನಂ ಯಾದವ್, ಟಿಟಾಸ್ ಸಾಧು, ಸ್ನೇಹಾ ದೀಪ್ತಿ, ಅರುಂಧತಿ ರೆಡ್ಡಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications