
ವುಮೆನ್ಸ್ ಪ್ರೀಮಿಯರ್ ಲೀಗ್‌ನ ಚೊಚ್ಚಲ ಆವೃತ್ತಿಗೆ ಭರ್ಜರಿಯಾಗಿ ಚಾಲನೆ ದೊರೆತಿದ್ದು ಮೊದಲ ಪಂದ್ಯ ಆರಂಭವಾಗಿದೆ. ಚೊಚ್ಚಲ ಪಂದ್ಯದಲ್ಲಿ ಮುಂಬೈ ಇಂಡಿಯಮ್ಸ್ ಹಾಗೂ ಗುಜರಾತ್ ಟೈಂಟ್ಸ್ ತಂಡಗಳು ಕಣಕ್ಕಿಳಿದಿದ್ದು ಗುಜರಾತ್ ಜೈಂಟ್ಸ್ ತಂಡ ಟಾಸ್ ಗೆದ್ದು ಮೊದಲಿಗ ಬೌಲಿಂಗ್ ಆಯ್ಕೆ ಮಾಡಿಕೊಂಡದಿದೆ. ಹೀಗಾಗಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ಮೊದಲಿಗೆ ಬ್ಯಾಟಿಂಗ್ ನಡೆಸಲಿದೆ.
ಪಂದ್ಯದ ಟಾಸ್ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ನಾಯಕ ಹರ್ಮನ್‌ಪ್ರೀತ್ ಕೌರ್ ನಮ್ಮೆಲ್ಲರಿಗೂ ಇದು ಅತ್ಯಂತ ವಿಶೇಷವಾದ ದಿನವಾಗಿದೆ. ಈ ಕ್ಷಣವನ್ನು ಆನಂದಿಸಲು ಬಯಸುತ್ತೇವೆ. ಬ್ಯಾಟಿಂಗ್‌ಗೆ ಇದು ಬಹಳಷ್ಟು ನೆರವಾಗುವ ಸಾಧ್ಯತೆಯಿದೆ ಆದರೆ ಬೌಲಿಂಗ್ ವಿಭಾಗಕ್ಕೂ ಪಿಚ್ ಬೆಂಬಲ ನೀಡಲಿದೆ. ಕೆಲ ಯುವ ಆಟಗಾರ್ತಿಯನ್ನು ಇಂದು ತಂಡದಲ್ಲಿ ಹೊಂದಿದ್ದು ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಕಾದುನೋಡಬೇಕು ಎಂದಿದ್ದಾರೆ ಹರ್ಮನ್‌ಪ್ರೀತ್ ಕೌರ್.
Live ಸ್ಕೋರ್ ಇಲ್ಲಿದೆ
ಇನ್ನು ಗುಜರಾತ್ ಜೈಂಟ್ಸ್ ತಂಡದ ನಾಯಕಿ ಬೆತ್ ಮೂನಿ ವುಮೆನ್ಸ್ ಕ್ರಿಕೆಟ್ ಲೀಗ್‌ನಲ್ಲಿ ಭಾಗುಯಾಗಿರುವುದಕ್ಕೆ ರೋಮಾಂಚನವಾಗುತ್ತಿದೆ ಎಂದಿದ್ದಾರೆ. ಇನ್ನು ದೊಡ್ಡ ಪ್ರಮಾಣದ ಅಭಿಮಾನಿಗಳ ಮಧ್ಯದಲ್ಲಿ ಆಡುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದು ಕೂಡ ಆಸಿಸ್ ಆಟಗಾರ್ತಿ ಮೂನಿ ಪ್ರತಿಕ್ರಿಯಿಸಿದ್ದಾರೆ
ಗುಜರಾತ್ ಜೈಂಟ್ಸ್ ಸ್ಕ್ವಾಡ್: ಬೆತ್ ಮೂನಿ (ನಾಯಕಿ & ವಿಕೆಟ್ ಕೀಪರ್), ಸಬ್ಬಿನೇನಿ ಮೇಘನಾ, ಹರ್ಲೀನ್ ಡಿಯೋಲ್, ಆಶ್ಲೀ ಗಾರ್ಡ್ನರ್, ಅನ್ನಾಬೆಲ್ ಸದರ್ಲ್ಯಾಂಡ್, ದಯಾಲನ್ ಹೇಮಲತಾ, ಜಾರ್ಜಿಯಾ ವಾರೆಹಮ್, ಸ್ನೇಹ ರಾಣಾ, ತನುಜಾ ಕನ್ವರ್, ಮೋನಿಕಾ ಪಟೇಲ್, ಮಾನ್ಸಿ ಜೋಶಿ
ಬೆಂಚ್: ಸೋಫಿಯಾ ಡಂಕ್ಲಿ, ಅಶ್ವನಿ ಕುಮಾರಿ, ಹರ್ಲಿ ಗಾಲಾ, ಶಬ್ನಮ್ ಎಂಡಿ ಶಕಿಲ್, ಪರುಣಿಕಾ ಸಿಸೋಡಿಯಾ, ಸುಷ್ಮಾ ವರ್ಮಾ, ಕಿಮ್ ಗಾರ್ತ್
ಮುಂಬೈ ಇಂಡಿಯನ್ಸ್ ಸ್ಕ್ವಾಡ್: ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹರ್ಮನ್‌ಪ್ರೀತ್ ಕೌರ್ (ನಾಯಕಿ), ನ್ಯಾಟ್ ಸ್ಕಿವರ್-ಬ್ರಂಟ್, ಅಮೆಲಿಯಾ ಕೆರ್, ಅಮಂಜೋತ್ ಕೌರ್, ಪೂಜಾ ವಸ್ತ್ರಕರ್, ಹುಮೈರಾ ಕಾಜಿ, ಇಸ್ಸಿ ವಾಂಗ್, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್
ಬೆಂಚ್: ಹೀದರ್ ಗ್ರಹಾಂ, ಪ್ರಿಯಾಂಕಾ ಬಾಲಾ, ನೀಲಂ ಬಿಷ್ಟ್, ಧಾರಾ ಗುಜ್ಜರ್, ಸೋನಮ್ ಯಾದವ್, ಕ್ಲೋಯ್ ಟ್ರಯಾನ್