Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2023: ಮುಂಬೈ ಇಂಡಿಯನ್ಸ್‌ಗೆ ಇಂದು ಯುಪಿ ವಾರಿಯರ್ಸ್ ಸವಾಲು; ಸಂಭಾವ್ಯ ‍XI ಹಾಗೂ ಇತರ ಮಾಹಿತಿ

WPL 2023; Mumbai Indians Women vs UP Warriorz, match 15, probable XI and pitch report

ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಇಂದು ಎರಡು ಪಂದ್ಯಗಳು ನಡೆಯಲಿದೆ. ಮೊದಲ ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಯುಪಿ ವಾರಿಯರ್ಸ್ ವಿರುದ್ಧ ಸೆಣೆಸಾಟ ನಡೆಸಲಿದೆ. ಆಡಿರುವ ಐದು ಪಂದ್ಯಗಳಲ್ಲಿ ಐದರಲ್ಲಿಯೂ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಮುಂಬೈ ಇಂಡಿಯನ್ಸ್ ತಂಡ ಅಜೇಯವಾಗಿ ಮುಂದುವರಿಯುವ ವಿಶ್ವಾಸದಲ್ಲಿದೆ. ಇತ್ತ ಯುಪಿ ವಾರಿಯರ್ಸ್ ಮೂರನೇ ಗೆಲುವಿಗಾಗಿ ಚಿತ್ತ ನೆಟ್ಟಿದೆ.

ಹರ್ಮನ್‌ಪ್ರೀಯತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ಆಡಿರುವ ಐದು ಪಂದ್ಯಗಳಲ್ಲಿ ಐದರಲ್ಲಿಯೂ ಗೆದ್ದಿದ್ದು 10 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇತ್ತ ಯುಪಿ ವಾರಿಯರ್ಸ್ ತಂಡ ಆಡಿರುವ 5 ಪಂದ್ಯಗಳಲ್ಲಿ 2 ಗೆಲುವು ಸಾಧಿಸಿದ್ದು 3 ಸೋಲಿನೊಂದಿಗೆ 4 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

ಇನ್ನು ಈ ಎರಡು ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ದಾಗ ಯುಪಿ ವಾರಿಯರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಅಬ್ಬರದ ಪ್ರದರ್ಶನ ನೀಡಿತ್ತು. ಯುಪಿ ವಾರಿಯರ್ಸ್ ನೀಡಿದ್ದ 160 ರನ್‌ಗಳ ಗುರಿಯನ್ನು ಮುಂಬೈ ಇಂಡಿಯನ್ಸ್ ಕೇವಲ 2 ವಿಕೆಟ್ ಕಳೆದುಕೊಂಡು ಗೆದ್ದು ಬೀಗಿತ್ತು. ಅಜೇಯ ಅರ್ಧಶತಕ ಸಿಡಿಸಿದ್ದ ನಾಯಕಿ ಹರ್ಮನ್ ಆ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು.

ಮುಂಬೈ ಇಂಡಿಯನ್ಸ್ ಹಾಗೂ ಯುಪಿ ವಾರಿಯರ್ಸ್ ತಂಡಗಳ ನಡುವಿನ ಈ ಪಂದ್ಯ ನವಿ ಮುಂಬೈ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದ್ದು ಮಧ್ಯಾಹ್ನ 3:30ಕ್ಕೆ ಪಂದ್ಯ ಪ್ರಾರಂಭಗೊಳ್ಳಲಿದೆ. 3 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದ್ದು ಜಿಯೋ ಸಿನಿಮಾದಲ್ಲಿ ಪಂದ್ಯದ ನೇರಪ್ರಸಾರವಿರಲಿದೆ.

ಪಿಚ್ ರಿಪೋರ್ಟ್, ಹವಾಮಾನ ವರದಿ: ಡಿವೈ ಪಾಟೀಲ್ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳಿಗೆ ಉತ್ತಮವಾಗಿ ನೆರವಾಗಲಿದ್ದು ದೊಡ್ಡ ಮೊತ್ತದ ಹೋರಾಟ ನಡೆಯುವ ಸಾಧ್ಯತೆಯಿದೆ. 170ಕ್ಕಿಂತ ಹೆಚ್ಚಿನ ಸ್ಕೋರ್ ಇಲ್ಲಿ ಉತ್ತಮ ಮೊತ್ತವಾಗಿರಲಿದೆ. ಹೆಚ್ಚಿನ ಪಮದ್ಯಗಳು ನಡೆಯುತ್ತಿರುವ ಕಾರಣ ಟೂರ್ನಿಯ ಆರಂಭಕ್ಕೆ ಹೋಲಿಸಿದರೆ ಪಿಚ್ ವೇಗವನ್ನು ಕಳೆದುಕೊಂಡಿಡ್ಡು ಬ್ಯಾಟಿಂಗ್‌ಗೆ ಈ ಹಿಂದಿನಷ್ಟು ಸರಾಗವಾಗಿ ನೆರವು ದೊರೆಯಲಾರದು. ಇದರ ಲಾಭವನ್ನು ಬೌಲಿಂಗ್ ವಿಭಾಗ ಪಡೆಯಬಹುದು.

ಹವಾಮಾನ ವರದಿ: ಇನ್ನು ಈ ಪಂದ್ಯದ ಸಂದರ್ಭದಲ್ಲಿ ಮಳೆ ಅಡ್ಡಿಯುಂಟು ಮಾಡುವ ಯಾವುದೇ ಸಾಧ್ಯತೆಗಳು ಇಲ್ಲ. ನವಿ ಮುಂಬೈನಲ್ಲಿ ಇಂದು 38 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶವಾಗಿದ್ದು 26 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶವಾಗಿರಲಿದೆ.

ಯುಪಿ ವಾರಿಯರ್ಸ್ ಸಂಭಾವ್ಯ XI: ಅಲಿಸ್ಸಾ ಹೀಲಿ (ನಾಯಕಿ), ದೇವಿಕಾ ವೈದ್ಯ, ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ಗ್ರೇಸ್ ಹ್ಯಾರಿಸ್, ಸಿಮ್ರಾನ್ ಶೇಖ್, ದೀಪ್ತಿ ಶರ್ಮಾ, ಶ್ವೇತಾ ಸೆಹ್ರಾವತ್, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾನಿ, ರಾಜೇಶ್ವರಿ ಗಾಯಕ್ವಾಡ್

ಮುಂಬೈ ಇಂಡಿಯನ್ಸ್ ಸಂಭಾವ್ಯ XI: ಯಾಸ್ತಿಕಾ ಭಾಟಿಯಾ, ಹೇಲಿ ಮ್ಯಾಥ್ಯೂಸ್, ನ್ಯಾಟ್ ಸ್ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಇಸ್ಸಿ ವಾಂಗ್, ಹುಮೈರಾ ಕಾಜಿ, ಧಾರಾ ಗುಜ್ಜರ್, ಅಮನ್ಜೋತ್ ಕೌರ್, ಜಿಂಟಿಮಣಿ ಕಲಿತಾ

Story first published: Saturday, March 18, 2023, 12:13 [IST]
Other articles published on Mar 18, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+