Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2023: ಮೊದಲ ಪಂದ್ಯದಲ್ಲಿ ಮುಂಬೈ ಆರ್ಭಟ: ಗುಜರಾತ್ ಜೈಂಟ್ಸ್ ವಿರುದ್ಧ ದಾಖಲೆಯ ಗೆಲುವು

WPL 2023: Mumbai Indians won by 143 huge margin against Gujarat Giants in opening match

ವುಮೆನ್ಸ್ ಪ್ರೀಮಿಯರ್ ಲೀಗ್‌ನ ಪ್ರಪ್ರಥಮ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಅಮೋಘ ಪ್ರದರ್ಶನ ನೀಡಿದೆ. ಮೊದಲಿಗೆ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ ತಂಡ ಬಳಿಕ ಬೌಲಿಂಗ್‌ನಲ್ಲಿಯೂ ಅಮೋಘ ಪ್ರದರ್ಶನ ನೀಡಿ ಗುಜರಾತ್ ಟೈಟನ್ಸ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದೆ. ಈ ಮೂಲಕ ಭಾರೀ ಅಂತರದ ಗೆಲುವು ಸಾಧಿಸಿ ಪ್ರಥಮ ಪಂದ್ಯದಲ್ಲಿಯೇ 143 ರನ್‌ಗಳ ಅಂತರದ ಬೃಹತ್ ಗೆಲುವು ಸಾಧಿಸಿ ದಾಖಲೆ ಬರೆದಿದೆ.

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಸ್ವತಃ ನಾಯಕಿ ಕೌರ್ ಸ್ಪೋಟಕ ಪ್ರದರ್ಶನ ನೀಡಿದ್ದು ತಂಡದ ಬೃಹತ್ ಮೊತ್ತಕ್ಕೆ ಕಾರಣವಾದರು. ತಂಡದ ಆರಂಭಿಕ ಆಟಗಾರ್ತಿ ಯಸ್ತಿಕಾ ಭಾಟಿಯಾ ವೇಗನೆ ವಿಕೆಟ್ ಕಳದುಕೊಂಡರು. ಆದರೆ ಉಳಿದ ಬ್ಯಾಟರ್‌ಗಳಿಂದ ಅದ್ಭುತ ಪ್ರದರ್ಶನ ಬಂದಿದೆ. ಹೇಲಿಸ್ ಮ್ಯಾಥ್ಯೂಸ್ 47 ರನ್‌ಗಳ ಕೊಡುಗೆ ನೀಡಿದರೆ ಬ್ರುಂಟ್ 23 ರನ್‌ಗಳನ್ನು ಗಳಿಸಿದರು.

ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕಿ ಕೌರ್ ಅಬ್ಬರದ ಪ್ರದರ್ಶನ ನೀಡಿದ್ದಾರೆ. ಕೇವಲ 30 ಎಸೆತಗಳಲ್ಲಿ 65 ರನ್‌ಗಳಿಸಿದ ಹರ್ಮನ್ 216.67 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಬರೊಬ್ಬರಿ 14 ಬೌಂಡರಿ ಸಿಡಿಸಿದರು ಕೌರ್. ನಂತರ ಅಮೆಲಿ ಕೆರ್ ಕೂಡ ಸ್ಪೋಟಕ ಪ್ರದರ್ಶನ ನೀಡಿದ್ದು 24 ಎಸೆಯಗಳಲ್ಲಿ 45 ರನ್‌ಗಳಿಸಿದರು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ 5 ವಿಕೆಟ್ ಕಳೆದುಕೊಂಡು 207 ರನ್‌ಗಳನ್ನು ಗಳಿಸಿತು.

ಇದನ್ನು ಬೆನ್ನಟ್ಟಿದ ಗುಜರಾತ್ ಜೈಂಟ್ಸ್ ತಂಡ ಆರಂಭದಿಂದಲೇ ಮುಗ್ಗರಿಸಿತ್ತು. ಗುಜರಾತ್ ಜೈಂಟ್ಸ್ ತಂಡದ ಪರವಾಗಿ ಕೇವಲ ಇಬ್ಬರು ಆಟಗಾರ್ತಿಯರು ಮಾತ್ರವೇ ಎರಡಂಕಿಯನ್ನು ತಲುಪಲು ಯಶಸ್ವಿಯಾದರು. ದಯಾಳನ್ ಹೇಮಲತಾ 29 ರನ್‌ಗಳನ್ನು ಗಳಿಸಿ ಜೈಂಟ್ಸ್ ಪರ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ್ತಿ ಎನಿಸಿದರು. ಉಳಿದಂತೆ ಯಾವ ಆಟಗಾರ್ತಿ ಕೂಡ ಮಿಂಚಲಿಲ್ಲ. ಹೀಗಾಗಿ ಗುಜರಾತ್ ಜೈಂಟ್ಸ್ ತಂಡ ಕೇವಲ 64ರ ನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು.

ಇನ್ನು ಮುಂಬೈ ಇಂಡಿಯನ್ಸ್ ಪರವಾಗಿ ಬೌಲಿಂಗ್‌ನಲ್ಲಿ ಸೈಕಾ ಇಶಾಕ್ ನಾಲ್ಕು ವಿಕೆಟ್ ಕಿತ್ತು ಗಮನಸೆಳೆದಿದ್ದಾರೆ. ನ್ಯಾಟ್ ಸೀವಿಯರ್ ಬ್ರಂಟ್ ಹಾಗೂ ಅಮೆಲಾ ಕೆರ್ ತಲಾ 2 ವಿಕೆಟ್ ಪಡೆದು ಮಿಂಚಿದ್ದಾರೆ. ಒಂದು ವಿಕೆಟ್ ಇದೀ ವಾಂಗ್ ಪಾಲಾಯಿತು.

Story first published: Saturday, March 4, 2023, 23:23 [IST]
Other articles published on Mar 4, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+