Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2023 RCB Jersey : ಪ್ರಪ್ರಥಮ ಆವೃತ್ತಿಗೆ ಆರ್‌ಸಿಬಿ ತಂಡದ ಜರ್ಸಿ ಬಿಡುಗಡೆ

WPL 2023: RCB unveil jersey for 1st season of Womens premier League

ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್‌ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಎಲ್ಲಾ ತಂಡಗಳ ಬಹುತೇಕ ಆಟಗಾರ್ತಿಯರು ಮುಂಬೈ ತಲುಪಿದ್ದು ಟೂರ್ನಿಗೆ ಸಿದ್ಧತೆ ಆಂಭಿಸಿದ್ದಾರೆ. ಆರ್‌ಸಿಬಿ ತಂಡದ ಆಟಗಾರ್ತಿಯರು ಕೂಡ ಈಗಾಗಲೇ ಒಟ್ಟಾಗಿದ್ದು ಟೂರ್ನಿಯ ಆರಂಭಕ್ಕೆ ಎದುರು ನೋಡುತ್ತಿದ್ದಾರೆ. ಈ ಸಂದರ್ಭದಲ್ಲಿ ಚೊಚ್ಚಲ ಆವೃತ್ತಿಗೆ ಆರ್‌ಸಿಬಿ ಫ್ರಾಂಚೈಸಿ ಜರ್ಸಿಯನ್ನು ಬಿಡುಗಡೆಗೊಳಿಸಿದೆ.

ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ, ಆಟಗಾರ್ತಿಯರಾದ ರೇಣುಕಾ ಸಿಂಗ್, ರಿಚಾ ಘೋಷ್ ಮತ್ತು ಸೋಫಿ ಡಿವೈನ್ ನೂತನ ಜರ್ಸಿ ಧರಿಸಿ ಫೋಸ್ ನೀಡಿದ್ದಾರೆ. ಈ ಫೋಟೋಗಳನ್ನು ಆರ್‌ಸಿಬಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ವಿಮೆನ್ಸ್ ಪ್ರೀಮಿಯರ್ ಲೀಗ್‌ನ ಚೊಚ್ಚಲ ಆವೃತ್ತಿ ಮಾರ್ಚ್ 4ರಿಂದ ಆರಂಭವಾಗಲಿದ್ದು ಐದು ತಂಡಗಳು ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿದೆ. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಹಾಗೂ ಬ್ರೆಬೋರ್ನ್ ಸ್ಟೇಡಿಯಂ ಈ ಟೂರ್ನಿಯ ಆತಿಥ್ಯವನ್ನು ವಹಿಸಿಕೊಳ್ಳಲಿದೆ.

ಆರ್‌ಸಿಬಿ ತಂಡ ಕಳೆದ ಹಲವು ವರ್ಷಗಳಿಂದ ಧರಿಸುತ್ತಿರುವ ಕೆಂಪು ಹಾಗೂ ಕಪ್ಪು ಬಣ್ಣವನ್ನು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿಯೂ ಉಳಿಸಿಕೊಂಡಿದೆ. ಇನ್ನು ಡ್ರೀಮ್ 11 ಹಾಗೂ ಪುಮಾ ಜೊತೆಗೆ ಹೊಸ ಸ್ಪಾನ್ಸರ್ ಕೂಡ ಆರ್‌ಸಿಬಿ ಜರ್ಸಿಯಲ್ಲಿದೆ. ಆರ್‌ಸಿಬಿ ಪುರುಷರ ತಂಡದ ಜರ್ಸಿಯಂತೆಯೇ ಅಭಿಮಾನಿಗಳ ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇನ್ನು ಆರ್‌ಸಿಬಿ ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಅವರನ್ನು ನಾಯಕಿಯನ್ನಾಗಿ ಘೋಷಣೆ ಮಾಡಿದೆ. ಕಳೆದ ಫೆಬ್ರವರಿ 13ರಂದು ನಡೆದ ಹರಾಜಿನಲ್ಲಿ ಸ್ಮೃತಿ ಮಂಧಾನ ಅವರನ್ನು ಆರ್‌ಸಿಬಿ ಅತ್ಯಂತ ದುಬಾರಿ ಮೊತ್ತಕ್ಕೆ ಖರೀದಿಸುವಲ್ಲಿ ಯಶಸ್ವಿಯಾಗಿತ್ತು. 3.40 ಕೋಟಿ ದಾಖಲೆ ಮೊತ್ತಕ್ಕೆ ಮಂಧಾನ ಹರಾಜಾಗಿದ್ದಾರೆ. ಮಂಧಾನ ಮಾತ್ರವಲ್ಲದೆ, ಸೋಫಿ ದಿವೈನ್, ಎಲೀಸ್ ಪರ್ರಿ, ರೇಣುಕಾ ಸಿಂಗ್, ರಿಚಾ ಘೋಷ್, ಹೀದರ್ ನೈಟ್, ಎರಿನ್ ಬರ್ನ್ಸ್ ಮೊದಲಾದ ಸ್ಟಾರ್ ಆಟಗಾರ್ತಿಯರು ಭಾರತ ತಂಡದಲ್ಲಿದ್ದಾರೆ ಎಂಬುದು ಗಮನಾರ್ಹ.

ಇನ್ನು ಇದಕ್ಕೂ ಮುನ್ನ WPLನ ಮತ್ತೊಂದು ಪ್ರಮುಖ ತಂಡವಾಗಿರುವ ಮುಂಬೈ ಇಂಡಿಯನ್ಸ್ ಕೂಡ ತನ್ನ ಜರ್ಸಿಯನ್ನು ಬಿಡುಗಡೆಗೊಳಸಿತ್ತು. ಐಪಿಎಲ್‌ನಲ್ಲಿ ಮುಂಬೈ ಇಮಡಿಯನ್ಸ್ ತಂಡದ ನೀಲಿ ಹಾಗೂ ಬಂಗಾರದ ಬಣ್ಣವನ್ನು ಮಹಿಳಾ ತಂಡ ಕೂಡ ಉಳಿಸಿಕೊಂಡಿದೆ. ಮುಂಬೈ ಇಂಡಿಯನ್ಸ್ ತಂಡವನ್ನು ಡಬ್ಲ್ಯುಪಿಎಲ್‌ನಲ್ಲಿ ಅನುಭವಿ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್ ನಾಯಕಿಯಾಗಿ ಮುನ್ನಡೆಸಲಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ : ಸ್ಮೃತಿ ಮಂದಾನ (ನಾಯಕಿ), ದಿಶಾ ಕಸತ್, ರಿಚಾ ಘೋಷ್ (ವಿಕೆಟ್ ಕೀಪರ್‌), ಇಂದ್ರಾಣಿ ರಾಯ್, ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಎರಿನ್ ಬರ್ನ್ಸ್, ಶ್ರೇಯಾಂಕ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಬನಾ, ಹೀಥರ್ ನೈಟ್, ಡೇನ್ ವ್ಯಾನ್ ನೀಕರ್ಕ್, ಪೂನಂ ಖೇಮ್ನಾರ್, ರೇಣುಕಾ ಸಿಂಗ್, ಪ್ರೀತಿ ಬೋಸ್, ಕೋಮಲ್ ಜಂಜಾದ್

Story first published: Thursday, March 2, 2023, 14:02 [IST]
Other articles published on Mar 2, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+