Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2023: ಆರ್​​ಸಿಬಿ ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು: ಪಂದ್ಯದ ಸಮಯ, ಸಂಭಾವ್ಯ ಆಡುವ ಬಳಗ, ಪಿಚ್ ವರದಿ

WPL 2023: RCB Will Face Delhi Capitals In The 2nd Match Of The WPL, Probable XI, Picth Report

ಬಹು ನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್‌ನ ಚೊಚ್ಚಲ ಆವೃತ್ತಿಗೆ ಶನಿವಾರ (ಇಂದು) ಚಾಲನೆ ದೊರೆಯಲಿದೆ. ಮೊದಲನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ಮುಖಾಮುಖಿಯಾಗಲಿವೆ.

ಭಾನುವಾರ ಎರಡು ಪಂದ್ಯ ನಡೆಯಲಿದ್ದು ಮೊದಲನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣೆಸಲಿದೆ. ಬಲಿಷ್ಠ ತಂಡವೆಂದೇ ಬಿಂಬಿಸಲಾಗಿರುವ ಆರ್​​ಸಿಬಿ ಆಟವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಮಹಿಳಾ ಪ್ರೀಮಿಯರ್ ಲೀಗ್‌ನ ತಮ್ಮ ಮೊದಲ ಪಂದ್ಯವನ್ನಾಡಲು ಎರಡೂ ತಂಡಗಳು ಈಗಾಗಲೇ ಸಾಕಷ್ಟು ಸಿದ್ದತೆ ಮಾಡಿಕೊಂಡಿವೆ. ಆಟಗಾರರು ಈಗಾಗಲೇ ಕಠಿಣ ಅಭ್ಯಾಸವನ್ನು ನಡೆಸಿದ್ದಾರೆ.

ಸ್ಮೃತಿ ಮಂದಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಮ್ಮ ಮೊದಲನೇ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಮೊದಲನೇ ಪಂದ್ಯಕ್ಕೆ ಆರ್​​ಸಿಬಿ ಯಾವ ಪ್ಲೇಯಿಂಗ್‌ ಇಲೆವೆನ್‌ ಅನ್ನು ಕಣಕ್ಕಿಳಿಸಲಿದೆ ಎನ್ನುವ ಕುತೂಹಲವಿದೆ.

ಆರ್​​ಸಿಬಿ ತಂಡದಲ್ಲಿ ಸ್ಟಾರ್ ಆಟಗಾರರೇ ತುಂಬಿಕೊಂಡಿದ್ದಾರೆ. ಸ್ಮೃತಿ ಮಂಧಾನ, ಎಲ್ಲಿಸ್ ಪೆರ್ರಿ, ಸೋಫಿ ಡಿವೈನ್ ಮತ್ತು ಹೀದರ್ ನೈಟ್‌ರಂತಹ ಚಾಂಪಿಯನ್ ಆಟಗಾರರಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ರೇಣುಕಾ ಸಿಂಗ್ ಠಾಕೂರ್ ಪ್ರಮುಖ ಅಸ್ತ್ರವಾಗಿದ್ದಾರೆ.

WPL 2023: RCB Will Face Delhi Capitals In The 2nd Match Of The WPL, Probable XI, Picth Report

ಬ್ರಾಬೌರ್ನ್ ಪಿಚ್ ವರದಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯಕ್ಕೆ ಬ್ರಾಬೌರ್ನ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಬ್ರಾಬೌರ್ನ್ ಅಂಗಳದಲ್ಲಿ ಇದುವರೆಗೂ 11 ಟಿ20 ಪಂದ್ಯಗಳನ್ನು ಆಡಲಾಗಿದ್ದು, ಇದರಲ್ಲಿ 5 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಜಯ ಸಾಧಿಸಿದ್ದರೆ, 6 ಪಂದ್ಯಗಳಲ್ಲಿ ಮೊದಲು ಬೌಲಿಂಗ್ ಮಾಡಿದ ತಂಡಗಳು ಜಯ ಸಾಧಿಸಿವೆ.

ಬ್ರಾಬೌರ್ನ್ ಪಿಚ್ ಬ್ಯಾಟಿಂಗ್‌ಗೆ ಹೆಚ್ಚಿನ ನೆರವು ನೀಡಲಿದೆ. ಇಲ್ಲಿ ಸರಾಸರಿ ಸ್ಕೋರ್ 165 ಆಗಿದೆ. ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಮಾಡುವುದು ಉತ್ತಮ ನಿರ್ಧಾರ ಎನ್ನಲಾಗಿದೆ.

WPL 2023: RCB Will Face Delhi Capitals In The 2nd Match Of The WPL, Probable XI, Picth Report

ಡೆಲ್ಲಿ ಕ್ಯಾಪಿಟಲ್ಸ್ ಕೂಡ ಬಲಿಷ್ಠವಾಗಿದೆ

ಸ್ಫೋಟಕ ಬ್ಯಾಟರ್ ಗಳಾದ ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ಮೆಗ್ ಲ್ಯಾನಿಂಗ್ ತಂಡದ ಪ್ರಮುಖ ಶಕ್ತಿಯಾಗಿದ್ದಾರೆ. ರಾಧಾ ಯಾದವ್, ಪೂನಂ ಯಾದವ್ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದಾರೆ. ಬಲಿಷ್ಠ ಆರ್​​ಸಿಬಿ ತಂಡಕ್ಕೆ ಸವಾಲಾಕಲು ಸಿದ್ಧವಾಗಿದೆ.

ಉಭಯ ತಂಡಗಳ ಸಂಭಾವ್ಯ ಆಡುವ ಬಳಗ

ಆರ್​​ಸಿಬಿ ಮಹಿಳಾ ತಂಡ: ಸ್ಮೃತಿ ಮಂಧಾನ (ನಾಯಕ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಡೇನ್ ವ್ಯಾನ್ ನೀಕರ್ಕ್, ರಿಚಾ ಘೋಷ್ (ವಿಕೆಟ್ ಕೀಪರ್), ಇಂದ್ರಾಣಿ ರಾಯ್, ಕನಿಕಾ ಅಹುಜಾ, ಪೂನಂ ನಾನಾಸಾಹೇಬ್ ಖೇಮ್ನಾರ್, ಸಹನಾ ಪವಾರ್, ಮೇಗನ್ ಶುಟ್, ರೇಣುಕಾ ಸಿಂಗ್ ಠಾಕೂರ್.

ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ: ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಮೆಗ್ ಲ್ಯಾನಿಂಗ್ (ನಾಯಕಿ), ಮರಿಜಾನ್ನೆ ಕಪ್, ಆಲಿಸ್ ಕ್ಯಾಪ್ಸೆ, ತನಿಯಾ ಭಾಟಿಯಾ (ವಿಕೆಟ್ ಕೀಪರ್), ಜೆಸ್ ಜೊನಾಸೆನ್, ಅರುಂದತಿ ರೆಡ್ಡಿ, ರಾಧಾ ಯಾದವ್, ಶಿಖಾ ಪಾಂಡೆ, ಪೂನಂ ಯಾದವ್.

Story first published: Saturday, March 4, 2023, 13:11 [IST]
Other articles published on Mar 4, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+