Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2023: ಮೊದಲ ಆವೃತ್ತಿಗಾಗಿ ಸಿದ್ಧತೆ ಆರಂಭಿಸಿದ ಆರ್‌ಸಿಬಿ ಮಹಿಳಾ ಆಟಗಾರರು

WPL 2023: RCB Womens Team Started Preparatory Camp Ahead Of Womens Premier League

ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಆರಂಭಕ್ಕೆ ಈಗಾಗಲೇ ದಿನಗಣನೆ ಆರಂಭವಾಗಿದೆ. ಮಾರ್ಚ್ 4ರಂದು ಟೂರ್ನಿಯ ಮೊದಲನೇ ಪಂದ್ಯ ನಡೆಯಲಿದೆ. ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಚೊಚ್ಚಲ ಆವೃತ್ತಿಯಲ್ಲಿ 5 ತಂಡಗಳು ಕಪ್‌ಗಾಗಿ ಸೆಣೆಸಲಿವೆ. 5 ಫ್ರಾಂಚೈಸಿಗಳು ಬಲಿಷ್ಠವಾದ ಪಡೆಯನ್ನು ಹೊಂದಿದ್ದು, ರೋಚಕ ಹಣಾಹಣಿಯನ್ನು ನಿರೀಕ್ಷಿಸಲಾಗಿದೆ. ಎಲ್ಲಾ ತಂಡಗಳು ಈಗಾಗಲೇ ಸಿದ್ಧತೆಯನ್ನು ಆರಂಭಿಸಿವೆ.

ಆರ್‌ಸಿಬಿ ಮಹಿಳಾ ತಂಡ ಈ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ನ ಪ್ರಮುಖ ಆಕರ್ಷಣೆಯಾಗಿದೆ. ಭಾರತದ ಸ್ಟಾರ್ ಬ್ಯಾಟರ್ ಸ್ಮೃತಿ ಮಂದಾನ, ಎಲಿಸ್ ಪೆರ್ರಿ, ರಿಚಾ ಘೋಷ್ ತಂಡದ ಪ್ರಮುಖ ಆಕರ್ಷಣೆಯಾಗಿದ್ದಾರೆ.

ತಂಡದ ಮೆಂಟರ್ ಆಗಿ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾರನ್ನು ಆಯ್ಕೆ ಮಾಡುವ ಮೂಲಕ ಆರ್ ಸಿಬಿ ಎಲ್ಲರಿಗೂ ಅಚ್ಚರಿ ಉಂಟು ಮಾಡಿತ್ತು. ಮೊದಲನೇ ಆವೃತ್ತಿಯಲ್ಲಿ ಆರ್ ಸಿಬಿ ಮಹಿಳಾ ತಂಡದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅದಕ್ಕೆ ತಕ್ಕಂತೆ ಈಗಾಗಲೇ ತಂಡದ ಆಟಗಾರರು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ತಂಡದ ಮುಖ್ಯ ಕೋಚ್ ಬೆನ್‌ ಸಾಯರ್ ಈ ವೇಳೆ ಹಾಜರಿದ್ದರು.

WPL 2023: RCB Womens Team Started Preparatory Camp Ahead Of Womens Premier League

ಆಟಗಾರರ ಕಠಿಣ ಅಭ್ಯಾಸ

ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯ ಇರುವ ಕಾರಣ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡದ ಆಟಗಾರರು ತಡವಾಗಿ ಭಾರತಕ್ಕೆ ಆಗಮಿಸಲಿದ್ದಾರೆ. ಉಳಿದಂತೆ ಮಹಿಳಾ ಪ್ರೀಮಿಯರ್ ಲೀಗ್‌ನ ಕೆಲವು ವಿದೇಶಿ ಆಟಗಾರರು ಭಾರತಕ್ಕೆ ಆಗಮಿಸಿದ್ದು ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಆರ್ ಸಿಬಿ ಕೂಡ ಈಗಾಗಲೇ ಸಿದ್ಧತೆಯನ್ನು ಆರಂಭಿಸಿದ್ದು, ಕೆಲವು ಆಟಗಾರರು ಅಭ್ಯಾಸ ಮಾಡುತ್ತಿದ್ದಾರೆ. ಆರ್ ಸಿಬಿ ಶನಿವಾರ ಅಭ್ಯಾಸ ಶಿಬಿರದ ಮೊದಲ ದಿನವನ್ನು ಯಶಸ್ವಿಯಾಗಿ ಮುಗಿಸಿದೆ. ಹಲವು ಆಟಗಾರರು ಪಾಲ್ಗೊಂಡು ತರಬೇತಿಯನ್ನು ಪಡೆದುಕೊಂಡಿದ್ದಾರೆ. ಆರ್ ಸಿಬಿ ಟ್ವಿಟರ್ ನಲ್ಲಿ ಫೋಟೊಗಳನ್ನು ಹಂಚಿಕೊಂಡಿದೆ.

WPL 2023: RCB Womens Team Started Preparatory Camp Ahead Of Womens Premier League

ಮಾರ್ಚ್ 1ರ ವೇಳೆಗೆ ತಂಡದ ಎಲ್ಲಾ ಆಟಗಾರರು ಆಗಮಿಸುವ ನಿರೀಕ್ಷೆ ಇದ್ದು ಮುಂಬೈನಲ್ಲಿ ಕಠಿಣ ಅಭ್ಯಾಸ ಮಾಡಲಿದ್ದಾರೆ. ಆರ್ ಸಿಬಿ ಟೂರ್ನಿಯ ಮೊದಲನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡದ ವಿರುದ್ಧ ಸೆಣೆಸಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ : ಸ್ಮೃತಿ ಮಂದಾನ (ನಾಯಕಿ), ದಿಶಾ ಕಸತ್, ರಿಚಾ ಘೋಷ್ (ವಿಕೆಟ್ ಕೀಪರ್‌), ಇಂದ್ರಾಣಿ ರಾಯ್, ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಎರಿನ್ ಬರ್ನ್ಸ್, ಶ್ರೇಯಾಂಕ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಬನಾ, ಹೀಥರ್ ನೈಟ್, ಡೇನ್ ವ್ಯಾನ್ ನೀಕರ್ಕ್, ಪೂನಂ ಖೇಮ್ನಾರ್, ರೇಣುಕಾ ಸಿಂಗ್, ಪ್ರೀತಿ ಬೋಸ್, ಕೋಮಲ್ ಜಂಜಾದ್

Story first published: Saturday, February 25, 2023, 23:13 [IST]
Other articles published on Feb 25, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+