Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2023: ಗುಜರಾತ್ ಜೈಂಟ್ಸ್ ತಂಡದ ಸವಾಲನ್ನು ಗೆಲ್ಲುತ್ತಾ ಆರ್‌ಸಿಬಿ: ಸಂಭಾವ್ಯ XI ಹಾಗೂ ಇತರ ಮಾಹಿತಿ

WPL 2023; Royal Challengers Bangalore vs Gujarat Giants, match 16, probable XI and pitch report

ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಇಂದು ಎರಡು ಪಂದ್ಯಗಳು ನಡೆಯಲಿದ್ದು ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಯುಪಿ ವಾರಿಯರ್ಸ್ ವಿರುದ್ಧ ಸೆಣೆಸಾಟ ನಡೆಸಿದರೆ ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಜೈಂಟ್ಸ್ ತಂಡಗಳ ಮಧ್ಯ ಕಾದಾಟ ನಡೆಯಲಿದೆ. ಸತತ ಸೋಲು ಅನುಭವಿಸಿ ಹಿನ್ನಡೆ ಕಂಡಿದ್ದ ಆರ್‌ಸಿಬಿ ಕಳೆದ ಪಂದ್ಯದಲ್ಲಿ ಮೊದಲ ಗೆಲುವು ಸಾಧಿಸಿದ್ದು ಗೆಲುವಿನ ಲಯವನ್ನು ಮುಂದುವರಿಸುವ ವಿಶ್ವಾಸದಲ್ಲಿದೆ.

ಇನ್ನು ಮೊದಲ ಸುತ್ತಿನಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದಾಗ ಆರ್‌ಸಿಬಿ ತಂಡ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರತಿಸ್ಪರ್ಧೆ ನೀಡಿತ್ತು. ಆದರೆ ಅಂತಿಮವಾಗಿ 11 ರನ್‌ಗಳ ಅಂತರದಿಂದ ಗುಜರಾತ್ ಜೈಂಟ್ಸ್ ತಂಡಕ್ಕೆ ಶರಣಾಗಿತ್ತು. ಜಿಜಿ ತಂಡಗಳಿಸಿದ್ದ 201 ರನ್‌ಗಳಿಗೆ ಪ್ರತಿಯಾಗಿ ಆರ್‌ಸಿಬಿ 190 ರನ್‌ಗಳಿಸಿ ಹೋರಾಟವನ್ನು ಅಂತ್ಯಗೊಳಿಸಿತ್ತು.

ಇನ್ನು ಅಂಕಪಟ್ಟಿಯಲ್ಲಿ ಆರ್‌ಸಿಬಿ ತಂಡ ಕೊನೆಯ ಸ್ಥಾನದಲ್ಲಿದ್ದು ಆಡಿರುವ 6 ಪಂದ್ಯಗಳಲ್ಲಿ ಕೇವಲ 1 ಗೆಲುವು ಮಾತ್ರವೇ ಸಾಧಿಸಿ 2 ಅಂಕಗಳನ್ನು ಹೊಂದಿದೆ. ಇನ್ನು ಗುಜರಾತ್ ಜೈಂಟ್ಸ್ ತಂಡ ಆಡಿರುವ 6 ಪಂದ್ಯಗಳಲ್ಲಿ 2 ಗೆಲುವುಗಳ ಮೂಲಕ 4 ಅಂಕಗಳನ್ನು ಹೊಂದಿದ್ದು 4ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಆರ್‌ಸಿಬಿ ತಂಡಕ್ಕೆ ನಾಲ್ಕನೇ ಸ್ಥಾನಕ್ಕೇರುವ ಅವಕಾಶವಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಜೈಂಟ್ಸ್ ತಂಡಗಳ ನಡುವಿನ ಈ ಪಂದ್ಯ ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಕ್ರೀಡಾಂಗಣದಲ್ಲಿ ನಡೆಯಲಿದ್ದು ಸಂಜೆ 7:30ಕ್ಕೆ ಪಂದ್ಯ ಪ್ರಾರಂಭಗೊಳ್ಳಲಿದೆ. 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದ್ದು ಜಿಯೋ ಸಿನಿಮಾದಲ್ಲಿ ಪಂದ್ಯದ ನೇರಪ್ರಸಾರವಿರಲಿದೆ.

ಪಿಚ್ ರಿಪೋರ್ಟ್: ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದೆ. ವುಮೆನ್ಸ್ ಪ್ರೀಮಿಯರ್ ಲೀಗ್‌ ನಲ್ಲಿ ಈವರೆಗೆ ಇಲ್ಲಿ 12 ಪಂದ್ಯಗಳನ್ನು ಆಡಿದ್ದು ಮೊದಲು ಬ್ಯಾಟಿಂಗ್ ನಡೆಸಿರುವ ತಂಡಗಳು ಇಲ್ಲಿ 6 ಬಾರಿ ಗೆದ್ದಿದ್ದರೆ ಮೊದಲು ಬೌಲಿಂಗ್ ನಡೆಸಿದ ತಂಡ ಕೂಡ 6 ಬಾರಿ ಗೆದ್ದುಕೊಂಡಿದೆ. 165 ರನ್ ಇಲ್ಲಿನ ಸರಾಸರಿ ಸ್ಕೋರ್ ಆಗಿದ್ದು ಟಾಸ್ ಗೆದ್ದ ತಂಡ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವದು ಉತ್ತಮ.

ಹವಾಮಾನ ವರದಿ: ಇನ್ನು ಈ ಪಂದ್ಯದ ಸಂದರ್ಭದಲ್ಲಿ ಮಳೆ ಅಡ್ಡಿಯುಂಟು ಮಾಡುವ ಯಾವುದೇ ಸಾಧ್ಯತೆಗಳು ಇಲ್ಲ. ನವಿ ಮುಂಬೈನಲ್ಲಿ ಇಂದು 38 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶವಾಗಿದ್ದು 26 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶವಾಗಿರಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ XI: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್ (ವಿಕೆಟ್ ಕೀಪರ್), ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ದಿಶಾ ಕಸತ್, ಮೇಗನ್ ಶುಟ್, ಆಶಾ ಶೋಬನಾ, ರೇಣುಕಾ ಠಾಕೂರ್/ ಪ್ರೀತಿ ಬೋಸ್

ಗುಜರಾತ್ ಜೈಂಟ್ಸ್ ಸಂಭಾವ್ಯ XI: ಸೋಫಿಯಾ ಡಂಕ್ಲಿ, ಲಾರಾ ವೊಲ್ವಾರ್ಡ್ಟ್, ಹರ್ಲೀನ್ ಡಿಯೋಲ್, ಆಶ್ಲೀ ಗಾರ್ಡ್ನರ್, ದಯಾಲನ್ ಹೇಮಲತಾ, ಸ್ನೇಹ ರಾಣಾ (ನಾಯಕಿ), ಸುಷ್ಮಾ ವರ್ಮಾ (ವಿಕೆಟ್ ಕೀಪರ್), ಕಿಮ್ ಗಾರ್ತ್, ತನುಜಾ ಕನ್ವರ್, ಮಾನ್ಸಿ ಜೋಶಿ, ಅಶ್ವನಿ ಕುಮಾರಿ

Story first published: Saturday, March 18, 2023, 13:00 [IST]
Other articles published on Mar 18, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+