WPL 2023: ಆರ್‌ಸಿಬಿ ತಂಡವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದ ಯುಪಿ ವಾರಿಯರ್ಸ್ ಕೋಚ್

ಮಹಿಳಾ ಪ್ರೀಮಿಯರ್ ಲೀಗ್ 2023ರಲ್ಲಿ ಬಲಿಷ್ಠ ತಂಡ ಎಂದು ಹೇಳಲಾಗುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೀನಾಯ ಪ್ರದರ್ಶನ ನೀಡಿದೆ. ಆಡಿರುವ 5 ಪಂದ್ಯಗಳನ್ನು ಸೋಲುವ ಮೂಲಕ ಟೂರ್ನಿಯಿಂದಲೇ ಹೊರಬೀಳುವ ಅಪಾಯದಲ್ಲಿದೆ.
ಮಾರ್ಚ್ 5ರಂದು ಬುಧವಾರ (ಇಂದು) ನಡೆಯಲಿರುವ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಸೋತರೆ ಆರ್‌ಸಿಬಿ ಅಧಿಕೃತವಾಗಿ ಮಹಿಳಾ ಪ್ರೀಮಿಯರ್ ಲೀಗ್ ಪ್ಲೇಆಫ್ ರೇಸ್‌ನಿಂದ ಹೊರಬೀಳಲಿದೆ. ಉತ್ತಮ ಪ್ರದರ್ಶನ ನೀಡದಿದ್ದರೂ ಅವರನ್ನು ಲಘುವಾಗಿ ಪರಿಗಣಿಸುವಂತಿಲ್ಲ ಎಂದು ಯುಪಿ ವಾರಿಯರ್ಜ್ ಕೋಚ್ ಜಾನ್ ಲೂಯಿಸ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಎರಡು ಪಂದ್ಯಗಳಲ್ಲಿ ಆರ್‌ಸಿಬಿ ಪ್ರದರ್ಶನದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ, ಅವರನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸಬಾರದು. ಪಂದ್ಯವನ್ನು ಗೆಲ್ಲಬೇಕಾದರೆ ನಾವು ಗಂಭೀರವಾಗಿ ತಯಾರಿ ಮಾಡಿಕೊಳ್ಳಬೇಕು ಎಂದು ಜಾನ್ ಲೂಯಿಸ್ ಹೇಳಿದ್ದಾರೆ.
ಯುಪಿ ವಾರಿಯರ್ಸ್ ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರು ಆಡಿದ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲನುಭವಿಸಿದ್ದು, ಆರ್ ಸಿಬಿ ವಿರುದ್ಧ ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದಾರೆ.

ಉತ್ತಮವಾಗಿ ಆಡಿದರೆ ಮಾತ್ರ ಗೆಲುವು ಸಾಧ್ಯ
ಯುಪಿ ವಾರಿಯರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ. ಯುಪಿ ವಾರಿಯರ್ಸ್ ತಯಾರಿ, ರಣತಂತ್ರದ ಬಗ್ಗೆ ಕೋಚ್ ಮಾತನಾಡಿದ್ದಾರೆ.
"ಕೊನೆಯ ಪಂದ್ಯದಲ್ಲಿ ನಾವು ಉತ್ತಮವಾಗಿ ಆಡಿದೆವು. ಆರ್‌ಸಿಬಿ ಉತ್ತಮ ಆಟಗಾರರನ್ನು ಒಳಗೊಂಡಿರುವ ತಂಡವಾಗಿದೆ. ಅಗ್ರ ಕ್ರಮಾಂಕದ ಆಟಗಾರರ ಮೇಲೆ ಒತ್ತಡ ಹೇರಿದರೆ, ಪವರ್‌ಪ್ಲೇಯಲ್ಲಿ ಹೆಚ್ಚು ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾದರೆ, ನಾವು ಸುಲಭವಾಗಿ ಗೆಲುವು ಸಾಧಿಸಬಹುದು. ಆರಂಭದಲ್ಲಿ ವಿಕೆಟ್ ಪಡೆದರೆ ಮಾತ್ರ ಮುಂದಿನ ಹಾದಿ ಸುಲಭವಾಗಲಿದೆ. ತಂಡ ನೀಡುತ್ತಿರುವ ಪ್ರದರ್ಶನದ ಬಗ್ಗೆ ನನಗೆ ಸಂತೋಷವಿದೆ" ಎಂದು ಮುಖ್ಯ ಕೋಚ್ ಜಾನ್ ಲೂಯಿಸ್ ಹೇಳಿದರು.

ಪ್ಲೇ ಆಫ್‌ಗೆ ಅರ್ಹತೆ ಪಡೆಯುವುದು ಮುಖ್ಯ
ಪಂದ್ಯಾವಳಿಯ ದ್ವಿತೀಯಾರ್ಧದಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ಪ್ಲೇ ಆಫ್‌ಗೆ ತಲುಪುವುದು ನಮ್ಮ ಮೊದಲ ಗುರಿಯಾಗಿದೆ ಎಂದು ಅವರು ಹೇಳಿದರು. ಯುಪಿ ವಾರಿಯರ್ಸ್ ಕೊನೆಯ ಬಾರಿಗೆ ಆರ್ ಸಿಬಿ ವಿರುದ್ಧ ಆಡಿದಾಗ ಸುಲಭವಾದ ಜಯ ಸಾಧಿಸಿದ್ದರು.
"ಕಳೆದ ಎರಡು ಪಂದ್ಯಗಳಲ್ಲಿ ಆರ್‌ಸಿಬಿ ಸಾಕಷ್ಟು ಸುಧಾರಿಸಿದೆ ಮತ್ತು ಅವರು ನಿಜವಾಗಿಯೂ ಪ್ರತಿಭಾವಂತ ಕ್ರಿಕೆಟಿಗರು, ಅತ್ಯುತ್ತಮ ವಿದೇಶಿ ಆಟಗಾರರು, ಉತ್ತಮ ಭಾರತೀಯ ಆಟಗಾರರನ್ನು ಹೊಂದಿದ್ದಾರೆ. ಅದು ಅಪಾಯಕಾರಿ ತಂಡ, ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಉತ್ತಮವಾಗಿ ತಯಾರಿ ನಡೆಸಿದ್ದೇವೆ ಎನ್ನುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು" ಎಂದು ಲೂಯಿಸ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications