WPL 2023 : ಮುಂಬೈ ಇಂಡಿಯನ್ಸ್‌ಗೆ ಮೊದಲ ಸೋಲು: ಯುಪಿ ವಾರಿಯರ್ಸ್‌ಗೆ 5 ವಿಕೆಟ್ ಜಯ

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಮೊದಲ ಸೋಲಿನ ರುಚಿ ನೋಡಿದೆ. ಯುಪಿ ವಾರಿಯರ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 5 ವಿಕೆಟ್‌ಗಳ ರೋಚಕ ಜಯ ಸಾಧಿಸುವ ಮೂಲಕ ಪ್ಲೇಆಫ್‌ಗೆ ಅರ್ಹತೆ ಪಡೆಯುವ ಸನಿಹದಲ್ಲಿದೆ.
ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಯುಪಿ ವಾರಿಯರ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಯುಪಿ ವಾರಿಯರ್ಸ್ ತಂಡದ ಸ್ಪಿನ್ನರ್ ಗಳು ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಹೇಲಿ ಮ್ಯಾಥ್ಯೂಸ್ ಆರಂಭದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದರೂ, ಸರಿಯಾದ ಜೊತೆಯಾಟ ಸಿಗಲಿಲ್ಲ.
ಮ್ಯಾಥ್ಯೂಸ್ 30 ಎಸೆತಗಳಲ್ಲಿ 35 ರನ್ ಗಳಿಸಿದರೆ, ಯಾಸ್ತಿಕಾ ಭಾಟಿಯಾ ಕೇವಲ 7 ರನ್ ಗಳಿಸಿ ಔಟಾದರು. ನ್ಯಾಟ್ ಸಿವರ್ ಬ್ರಂಟ್ 5 ರನ್‌ಗಳಿಗೆ ಔಟಾದರು. ನಾಯಕಿ ಹರ್ಮನ್‌ಪ್ರೀತ್ ಕೌರ್ 25 ರನ್ ಗಳಿಸಿದರೂ, ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಇಸ್ಸಿ ವಾಂಗ್ 19 ಎಸೆತಗಳಲ್ಲಿ 4 ಬೌಂಡರಿ ಒಂದು ಭರ್ಜರಿ ಸಿಕ್ಸರ್ ಸಹಿತ 32 ರನ್ ಗಳಿಸಿದರು. 20 ಓವರ್ ಗಳಲ್ಲಿ 127 ರನ್‌ಗಳಿಗೆ ಮುಂಬೈ ಇಂಡಿಯನ್ಸ್ ಆಲೌಟ್ ಆಗಿತ್ತು. ಇದೇ ಮೊದಲ ಬಾರಿಗೆ ಮುಂಬೈ ಆಲೌಟ್ ಆಗಿತ್ತು.

ಯುಪಿ ವಾರಿಯರ್ಸ್‌ಗೆ ಆರಂಭಿಕ ಆಘಾತ
ಸುಲಭದ ಸವಾಲನ್ನು ಬೆನ್ನತ್ತಿದ ಯುಪಿ ವಾರಿಯರ್ಸ್‌ಗೆ ಹೇಲಿ ಮ್ಯಾಥ್ಯೂಸ್ ಆರಂಭದಲ್ಲೇ ಆಘಾತ ನೀಡಿದರು. ದೇವಿಕಾವೈದ್ಯ 1 ರನ್ ಗಳಿಸಿದ್ದಾಗ ನಾಯಕ ಹರ್ಮನ್‌ಪ್ರೀತ್ ಕೌರ್ ಸ್ಲಿಪ್‌ನಲ್ಲಿ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದರು.
ಅಲಿಸ್ಸಾ ಹೀಲಿ ಕೇವಲ 8 ರನ್ ಗಳಿಸಿದ್ದಾಗ ಇಸ್ಸಿ ವಾಂಗ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲಗೆ ಬಿದ್ದರು. ಕಿರನ್ ನವಿಗೆರೆ ಕೂಡ 12 ರನ್ ಗಳಿಸಿ ಔಟಾದರು. 27 ರನ್‌ಗಳಾಗುಷ್ಟರಲ್ಲಿ 3 ವಿಕೆಟ್ ಕಳೆದುಕೊಂಡ ಯುಪಿ ವಾರಿಯರ್ಸ್ ಒತ್ತಡಕ್ಕೆ ಸಿಲುಕಿತು.

ತಹಿಲಾ, ಗ್ರೇಸ್ ಹ್ಯಾರಿಸ್ ಜವಾಬ್ದಾರಿಯುತ ಇನ್ನಿಂಗ್ಸ್
ಕುಸಿತ ಕಂಡ ಯುಪಿ ವಾರಿಯರ್ಸ್ ತಂಡದ ಆಲ್‌ರೌಂಡರ್ ಗಳಾದ ತಹಿಲಾ ಮೆಕ್‌ಗ್ರಾತ್ ಮತ್ತು ಗ್ರೇಸ್ ಹ್ಯಾರಿಸ್ ಆಸರೆಯಾದರು. ತಹಿಲಾ ಮೆಕ್‌ಗ್ರಾತ್ 25 ಎಸೆತಗಳಲ್ಲಿ 6 ಬೌಂಡರಿ 1 ಭರ್ಜರಿ ಸಿಕ್ಸರ್ ಸಹಿತ 38 ರನ್ ಗಳಿಸಿದರು. ಗ್ರೇಸ್ ಹ್ಯಾರಿಸ್ 28 ಎಸೆತಗಳಲ್ಲಿ 7 ಬೌಂಡರಿ ಸಹಿತ 39 ರನ್ ಗಳಿಸಿದರು. 4ನೇ ವಿಕೆಟ್‌ಗೆ ಈ ಜೋಡಿ 44 ರನ್‌ಗಳ ಜೊತೆಯಾಟ ಆಡಿದರು.
ಮೆಕ್‌ಗ್ರಾತ್ ಔಟಾದ ನಂತರ ಗ್ರೇಸ್ ಹ್ಯಾರಿಸ್ ಮತ್ತು ದೀಪ್ತಿ ಶರ್ಮಾ 34 ರನ್‌ಗಳ ಜೊತೆಯಾಟ ಆಡಿದರು. ದೀಪ್ತಿ ಶರ್ಮಾ ಮತ್ತು ಸೋಫಿ ಎಕಲ್‌ಸ್ಟೋನ್ ಕೊನೆಯವರೆಗೂ ಎಚ್ಚರಿಕೆಯಿಂದ ಆಡುವ ಮೂಲಕ ತಂಡಕ್ಕೆ 5 ವಿಕೆಟ್‌ಗಳ ಸುಲಭ ಜಯ ತಂದುಕೊಟ್ಟರು.

ಪ್ಲೇ ಆಫ್‌ಗೆ ಹತ್ತಿರವಾದ ಯುಪಿ ವಾರಿಯರ್ಸ್
ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸುವ ಮೂಲಕ 6 ಅಂಕಗಳೊಂದಿಗೆ ಯುಪಿ ವಾರಿಯರ್ಸ್ 3ನೇ ಸ್ಥಾನದಲ್ಲಿದೆ. ಉಳಿದ ಎರಡು ಪಂದ್ಯಗಳಲ್ಲಿ ಒಂದು ಗೆಲುವು ಕಂಡರೂ ಯುಪಿ ವಾರಿಯರ್ಸ್ ಪ್ಲೇ ಆಫ್‌ಗೆ ಪ್ರವೇಶ ಪಡೆಯಲಿದೆ.
6 ಪಂದ್ಯಗಳಲ್ಲಿ 5 ಗೆಲುವು ಕಂಡಿರುವ ಮುಂಬೈ ಇಂಡಿಯನ್ಸ್ 10 ಅಂಕಗಳೊಂದಿಗೆ ಈಗಾಗಲೇ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿದೆ. ಉಳಿದ ಎರಡು ಪಂದ್ಯಗಳಲ್ಲಿ ಗೆದ್ದರೆ ಮುಂಬೈ ಇಂಡಿಯನ್ಸ್ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದುಕೊಳ್ಳಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications