Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2023: ಆರ್‌ಸಿಬಿಯಿಂದ ಮತ್ತೊಂದು ನೀರಸ ಪ್ರದರ್ಶನ; ಯುಪಿ ವಾರಿಯರ್ಸ್‌ಗೆ ಸುಲಭ ಸವಾಲು

WPL 2023: UP Warriorz need 139 runs to win against Royal Challengers Bangalore

ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ತಂಡದ ನೀರಸ ಪ್ರದರ್ಶನ ಮತ್ತೆ ಮುಂದುವರಿದಿದೆ. ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿಯೂ ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದು ಸುಲಭ ಸವಾಲು ನೀಡಿದೆ. ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡರು ಅದರ ಲಾಭ ಪಡೆಯುವಲ್ಲಿ ವಿಫಲವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 138 ರನ್‌ಗಳಿಗೆ ಆಲೌಟ್ ಆಗಿದೆ.

ನಾಯಕಿ ಸ್ಮೃತಿ ಮಂಧಾನ 4 ರನ್‌ಗಳಿಸಿ ವಿಕೆಟ್ ಕಳೆದುಕೊಂಡ ಬಳಿಕ ಅನುಭವಿ ಆಟಗಾರ್ತಿಯಾದ ಸೋಫಿ ಡಿವೈನ್ ಹಾಗೂ ಎಲಿಸಾ ಪೆರ್ರಿ ಉತ್ತಮ ಪ್ರದರ್ಶನ ನೀಡಿದರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕಾರ್‌ಸಿಬಿ ಮತ್ತೆ ಕುಸಿತ ಕಾಣುತ್ತಾ ಸಾಗಿತು. ಸೋಫಿ ಡಿವೈನ್ 24 ಎಸೆತಗಳಲ್ಲಿ 36 ರನ್‌ಗಳಿಸಿದರೆ ಎಲಿಸಾ ಪೆರ್ರಿ ಈ ಪಂದ್ಯದಲ್ಲಿ ಅರ್ಧ ಶತಿ ಬಾರಿಸಿದರು. 39 ಎಸೆತಗಳಲ್ಲಿ ಅವರು 52 ರನ್ ಬಾರಿಸಿ ಮಿಂಚಿದರು.

ಉಳಿದಂತೆ ಯಾವ ಆಟಗಾರ್ತಿಯರು ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದರು. ಇನ್ನು ಯುಪಿ ವಾರಿಯರ್ಸ್ ಪರವಾಗಿ ಸೋಫಿ ಎಕಲ್ಸ್ಟನ್ 4 ವಿಕೆಟ್ ಕಿತ್ತು ಆರ್‌ಸಿಬಿ ತಂಡಕ್ಕೆ ಆಘಾತ ನೀಡಿದರು. ದೀಪ್ತಿ ಶರ್ಮಾ ಕೂಡ 3 ವಿಕೆಟ್ ಪಡೆದುಕೊಂಡಿದ್ದಾರೆ.

ಯುಪಿ ವಾರಿಯರ್ಸ್ ತಂಡಕ್ಕೆ ಇದು ಮೂರನೇ ಪಂದ್ಯವಾಗಿದ್ದರೆ ಆರ್‌ಸಿಬಿ ತಂಡಕ್ಕೆ ಇದು ನಾಲ್ಕನೇ ಪಂದ್ಯವಾಗಿದೆ. ಆದರೆ ಯುಪಿ ವಾರಿಯರ್ಸ್ ಆಡಿರುವ ಎರಡು ಪಂದ್ಯಗಳ ಪೈಕಿ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ ಒಂದು ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿದೆ. ಇತ್ತ ಆರ್‌ಸಿಬಿ ಮೊದಲ ಆಡಿರುವ ಮೂರು ಪಂದ್ಯಗಳಲ್ಲಿಯೂ ಸೋಲು ಮಾತ್ರವೇ ಕಂಡಿದ್ದು ಮೊದಲ ಗೆಲುವಿಗಾಗಿ ಎದುರು ನೋಡುತ್ತಿದೆ.

ಯುಪಿ ವಾರಿಯರ್ಸ್ ಆಡುವ ಬಳಗ: ಅಲಿಸ್ಸಾ ಹೀಲಿ(ನಾಯಕಿ/ವಿಕೆಟ್ ಕೀಪರ್), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಗ್ರಾತ್, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ದೇವಿಕಾ ವೈದ್ಯ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಬಳಗ: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್ (ವಿಕೆಟ್ ಕೀಪರ್), ಎರಿನ್ ಬರ್ನ್ಸ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಸಹನಾ ಪವಾರ್, ಕೋಮಲ್ ಝಂಜಾದ್, ರೇಣುಕಾ ಠಾಕೂರ್ ಸಿಂಗ್

Story first published: Friday, March 10, 2023, 21:07 [IST]
Other articles published on Mar 10, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+