
ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಇಂದು 20ನೇ ಪಂದ್ಯ ನಡೆಯುತ್ತಿದ್ದು ಈ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಫಿಟಲ್ಸ್ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಯುಪಿ ವಾರಿಯರ್ಸ್ ಆರಂಭದಲ್ಲಿ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದೆ
ಇನ್ನು ಈ ಎರಡು ತಂಡಗಳು ಕೂಡ ಈಗಾಗಲೇ ನಾಕೌಟ್ ಹಂತಕ್ಕೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿರುವ 7 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿದ್ದು 10 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ ಯುಪಿ ವಾರಿಯರ್ಸ್ ತಂಡ ಆಡಿರುವ 7 ಪಂದ್ಯಗಳಲ್ಲಿ 4 ಗೆದ್ದು 8 ಅಂಕಗಳನ್ನು ಹೊಂದಿದೆ. ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಡೆಲ್ಲಿ ಪಡೆಗಿದ್ದು ಈ ಮೂಲಕ ನೇರವಾಗಿ ಫೈನಲ್‌ಗೆ ಪ್ರವೇಶ ಪಡೆಯುವ ಅವಕಾಶವಿದೆ. ಹೀಗಾಗಿ ಈ ಗೆಲುವಿಗಾಗಿ ಡಿಸಿ ಪಡೆ ಸರ್ವ ಪ್ರಯತ್ನ ನಡೆಸಲಿದೆ.
ಇನ್ನು ಈ ಪಂದ್ಯ ಯುಪಿ ವಾರಿಯರ್ಸ್ ತಂಡ ಪ್ಲೇಆಫ್ ಸುತ್ತಿಗೇರಲು ಸಾಕಷ್ಟು ಪೈಪೋಟಿ ಎದುರಿಸಿದ ಬಳಿಕ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದು ಈ ಪಂದ್ಯದಲ್ಲಿ ಗೆದ್ದು ತನ್ನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸಲಿದೆ. ಹೀಗಾಗಿ ಬಲಿಷ್ಠ ತಂಡಗಳ ನಡುವಿನ ಕಾದಾಟ ಈಗ ಕುತೂಹಲ ಮೂಡಿಸಿದೆ.
ಇನ್ನು ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಯುಪಿ ವಾರಿಯರ್ಸ್ ತಂಡಗಳು ಮೊದಲ ಸುತ್ತಿನಲ್ಲಿ ಮುಖಾಮುಖಿಯಾಗಿದ್ದಾಗ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಗೆಲುವು ಕಂಡಿತ್ತು. ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ ಡಿಸಿ ಬಳಗ 211 ರನ್‌ಗಳನ್ನು ಗಳಿಸಿತ್ತು. ಇದಕ್ಕೆ ಪ್ರತಿಯಾಗಿ ಯುಪಿ ವಾರಿಯರ್ಸ್ ಗಳಿಸಿದ್ದು 169 ರನ್ ಮಾತ್ರ. ಹೀಗಾಗಿ 42 ರನ್‌ಗ ಅಂತರದಿಂದ ಯುಪಿ ವಾರಿಯರ್ಸ್ ತಂಡ ಸೋಲು ಅನುಭವಿಸಿತ್ತು.
ಯುಪಿ ವಾರಿಯರ್ಸ್ ಆಡುವ ಬಳಗ: ಶ್ವೇತಾ ಸೆಹ್ರಾವತ್, ಅಲಿಸ್ಸಾ ಹೀಲಿ (ನಾಯಕಿ & ವಿಕೆಟ್ ಕೀಪರ್), ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್, ಸಿಮ್ರಾನ್ ಶೇಖ್, ಪಾರ್ಶವಿ ಚೋಪ್ರಾ, ಅಂಜಲಿ ಸರ್ವಾಣಿ, ಸೊಪ್ಪದಂಡಿ ಯಶಸ್ರಿ, ಶಬ್ನಿಮ್ ಇಸ್ಮಾಯಿಲ್
ಬೆಂಚ್: ದೇವಿಕಾ ವೈದ್ಯ, ಗ್ರೇಸ್ ಹ್ಯಾರಿಸ್, ರಾಜೇಶ್ವರಿ ಗಾಯಕ್ವಾಡ್,
ಲಾರೆನ್ ಬೆಲ್, ಶಿವಾಲಿ ಶಿಂಧೆ, ಲಕ್ಷ್ಮಿ ಯಾದವ್
ಡೆಲ್ಲಿ ಕ್ಯಾಪಿಟಲ್ಸ್ ಆಡುವ ಬಳಗ: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸೆ, ಜೆಮಿಮಾ ರಾಡ್ರಿಗಸ್, ಮರಿಝನ್ನೆ ಕಪ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಜೆಸ್ ಜೋನಾಸೆನ್, ರಾಧಾ ಯಾದವ್, ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ಪೂನಂ ಯಾದವ್
ಬೆಂಚ್: ಲಾರಾ ಹ್ಯಾರಿಸ್, ತಾರಾ ನಾರ್ರಿಸ್, ಜಸಿಯಾ ಅಖ್ತರ್, ಮಿನ್ನು ಮಣಿ, ಅಪರ್ಣಾ ಮೊಂಡಲ್, ಟೈಟಾಸ್ ಸಾಧು, ಸ್ನೇಹಾ ದೀಪ್ತಿ