For Quick Alerts
ALLOW NOTIFICATIONS  
For Daily Alerts
 

WPL 2023: ಪ್ಲೇ ಆಫ್‌ ಪಂದ್ಯದಲ್ಲಿ ಯುಪಿ ವಾರಿಯರ್ಸ್-ಮುಂಬೈ ಇಂಡಿಯನ್ಸ್ ಹಣಾಹಣಿ : ಫೈನಲ್ ಟಿಕೆಟ್ ಯಾರಿಗೆ?

WPL 2023: UP Warriorz Will Play Against Mumbai Indians In A WPL Playoff Match

ಮಹಿಳಾ ಪ್ರೀಮಿಯರ್ ಲೀಗ್‌ 2023ರ ಪ್ಲೇಆಫ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಯುಪಿ ವಾರಿಯರ್ಸ್ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.

ಮೊದಲ ಐದು ಪಂದ್ಯಗಳಲ್ಲಿ ಸತತವಾಗಿ ಗೆಲುವಿನ ಖುಷಿ ನೋಡಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಮೊದಲ ಸೋಲಿನ ಆಘಾತ ನೀಡಿದ್ದು, ಯುಪಿ ವಾರಿಯರ್ಸ್ ತಂಡ. ಲೀಗ್ ಹಂತದಲ್ಲಿ ಮೊದಲ ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಿದ್ದರೆ, ಎರಡನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಗೆಲುವು ಸಾಧಿಸುವ ಮೂಲಕ ಸೇಡು ತೀರಿಸಿಕೊಂಡಿತ್ತು. ಈಗ ಮೂರನೇ ಬಾರಿಗೆ ಎರಡೂ ತಂಡಗಳು ಮುಖಾಮುಖಿಯಾಗಲಿವೆ.

ಆಡಿದ ಮೊದಲ ಐದು ಪಂದ್ಯಗಳಲ್ಲಿ ಸತತವಾಗಿ ಗೆಲುವು ಸಾಧಿಸಿದ್ದ ಮುಂಬೈ ಇಂಡಿಯನ್ಸ್ ನಂತರ ಎರಡು ಪಂದ್ಯಗಳನ್ನು ಸೋಲುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿಯಿತು. ಮುಂಬೈ ಇಂಡಿಯನ್ಸ್ ಆಡಿದ 8 ಪಂದ್ಯಗಳಲ್ಲಿ ಆರು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಎರಡನೇ ಸ್ಥಾನದಲ್ಲಿದ್ದರೆ, ಯುಪಿ ವಾರಿಯರ್ಸ್ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಮೂರನೇ ಸ್ಥಾನದಲ್ಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ಕೂಡ 8 ಪಂದ್ಯಗಳಲ್ಲಿ 6 ಪಂದ್ಯಗಳಲ್ಲಷ್ಟೇ ಗೆಲುವು ಸಾಧಿಸಿದರೂ ರನ್‌ ರೇಟ್‌ನಲ್ಲಿ ಮುಂಬೈ ಇಂಡಿಯನ್ಸ್‌ಗಿಂತ ಉತ್ತಮವಾಗಿದ್ದ ಕಾರಣ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.

WPL 2023: UP Warriorz Will Play Against Mumbai Indians In A WPL Playoff Match

ತಪ್ಪು ತಿದ್ದಿಕೊಳ್ಳುತ್ತಾ ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್ ಆಡಿದ ಕೊನೆಯ ಲೀಗ್‌ ಹಂತದ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಜಯ ಸಾಧಿಸಿದರೂ, ಮೊದಲ ಐದು ಪಂದ್ಯಗಳಲ್ಲಿ ನೀಡಿದ ಪ್ರದರ್ಶನ ಬಂದಿಲ್ಲ ಎನ್ನುವುದಂತೂ ನಿಜ, ತಂಡದ ಪ್ರಮುಖ ವಿಕೆಟ್ ಟೇಕರ್ ಸೈಕಾ ಇಶಾಕ್ ಕಳೆದ ಮೂರು ಪಂದ್ಯಗಳಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲವಾಗಿದ್ದಾರೆ. ಆರಂಭಿಕ ಆಟಗಾರ್ತಿ ಹೇಲಿ ಮ್ಯಾಥ್ಯೂಸ್ ಕೂಡ ರನ್ ಗಳಿಸದೇ ಇರುವುದು ತಂಡದ ತಲೆನೋವನ್ನು ಹೆಚ್ಚಿಸಿದೆ. ಈ ಎರಡೂ ವಿಚಾರಗಳಲ್ಲಿ ತಪ್ಪು ತಿದ್ದಿಕೊಂಡರೆ ಮಾತ್ರ ಅವರಿಗೆ ಗೆಲುವಿನ ಅವಕಾಶ ಇರುತ್ತದೆ.

ಮತ್ತೊಂದೆಡೆ ಯುಪಿ ವಾರಿಯರ್ಸ್ ಏಳು ಬೀಳು ಗಳ ಮೂಲಕ ಪ್ಲೇ ಆಫ್‌ಗೆ ಪ್ರವೇಶ ಪಡೆದುಕೊಂಡಿದೆ. ಸ್ಪಿನ್ನರ್ ಗಳು ತಂಡದ ಪ್ರಮುಖ ಶಕ್ತಿಯಾಗಿದ್ದಾರೆ. ರಾಜೇಶ್ವರಿ ಗಾಯಕ್ವಾಡ್, ಸೋಫಿ ಎಕ್ಲಸ್ಟೋನ್, ದೀಪ್ತಿ ಶರ್ಮಾ ಬೌಲಿಂಗ್‌ನಲ್ಲಿ ಮೋಡಿ ಮಾಡಿದರೆ, ಮುಂಬೈ ಇಂಡಿಯನ್ಸ್ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಬಹುದಾಗಿದೆ. ಗ್ರೇಸ್ ಹ್ಯಾರಿಸ್, ಅಲಿಸ್ಸಾ ಹೀಲಿ, ಕಿರಣ್ ನವಿಗೆರೆ, ತಹಿಲಾ ಮೆಕ್‌ಗ್ರಾತ್ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ.

ಪ್ಲೇ ಆಫ್ ಪಂದ್ಯ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮಾರ್ಚ್ 24ರಂದು ನಡೆಯಲಿದೆ. ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ. ಪಿಚ್‌ ನಿಧಾನಗತಿಯಲ್ಲಿ ವರ್ತಿಸುತ್ತಿರುವ ಕಾರಣ ಟಾಸ್ ಗೆಲ್ಲುವ ತಂಡ ಮೊದಲು ಬೌಲಿಂಗ್ ಮಾಡುವ ಸಾಧ್ಯತೆ ಹೆಚ್ಚಾಗಿದೆ.

WPL 2023: UP Warriorz Will Play Against Mumbai Indians In A WPL Playoff Match

ಉಭಯ ತಂಡಗಳ ಸಂಭಾವ್ಯ ಆಡುವ ಬಳಗ

ಮುಂಬೈ ಇಂಡಿಯನ್ಸ್: ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಇಸ್ಸಿ ವಾಂಗ್, ಹುಮೈರಾ ಕಾಜಿ, ಧಾರಾ ಗುಜ್ಜರ್, ಅಮಂಜೋತ್ ಕೌರ್, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್.

ಯುಪಿ ವಾರಿಯರ್ಜ್: ಅಲಿಸ್ಸಾ ಹೀಲಿ(ನಾಯಕಿ), ದೇವಿಕಾ ವೈದ್ಯ, ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಪಾರ್ಶವಿ ಚೋಪ್ರಾ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್.

Story first published: Thursday, March 23, 2023, 21:58 [IST]
Other articles published on Mar 23, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+