WPL 2023: ಆರ್‌ಸಿಬಿಗೆ ಮತ್ತೊಂದು ಹೀನಾಯ ಸೋಲು; 10 ವಿಕೆಟ್‌ಳಿಂದ ಗೆದ್ದ ಯುಪಿ ವಾರಿಯರ್ಸ್

ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿನ ಸರಪಳಿ ಮುಂದುವರಿದಿದೆ. ನಾಲ್ಕನೇ ಪಂದ್ಯದಲ್ಲಿಯೂ ಹೀನಾಯ ಪ್ರದರ್ಶನ ನೀಡುವ ಮೂಲಕ ಆರ್‌ಸಿಬಿ ಸೋಲು ಅನುಭವಿಸಿದೆ. ಆರ್‌ಸಿಬಿ ತಂಡ ನೀಡಿದ 139 ರನ್‌ಗಳ ಸುಲಭ ಸವಾಲನ್ನು ಯುಪಿ ವಾರಿಯರ್ಸ್ ಯಾವುದೇ ವಿಕೆಟ್ ಕಳೆದುಕೊಳ್ಳದೆ ಬೆನ್ನಟ್ಟುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ 10 ವಿಕೆಟ್‌ಗಳ ಅಂತರದ ಬೃಹತ್ ಗೆಲುವು ಸಾಧಿಸಿತು.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡ ಆರ್‌ಸಿಬಿ ಅದರ ಲಾಭ ಪಡೆಯುವಲ್ಲಿ ವಿಫಲವಾಗಿ 138 ರನ್‌ಗಳಿಗೆ ಆಲೌಟ್ ಆಯಿತು. ನಾಯಕಿ ಸ್ಮೃತಿ ಮಂಧಾನ 4 ರನ್‌ಗಳಿಸಿ ವಿಕೆಟ್ ಕಳೆದುಕೊಂಡ ಬಳಿಕ ಅನುಭವಿ ಆಟಗಾರ್ತಿಯಾದ ಸೋಫಿ ಡಿವೈನ್ ಹಾಗೂ ಎಲಿಸಾ ಪೆರ್ರಿ ಉತ್ತಮ ಪ್ರದರ್ಶನ ನೀಡಿದರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕಾರ್‌ಸಿಬಿ ಮತ್ತೆ ಕುಸಿತ ಕಾಣುತ್ತಾ ಸಾಗಿತು.
ಸೋಫಿ ಡಿವೈನ್ 24 ಎಸೆತಗಳಲ್ಲಿ 36 ರನ್‌ಗಳಿಸಿದರೆ ಎಲಿಸಾ ಪೆರ್ರಿ ಈ ಪಂದ್ಯದಲ್ಲಿ ಅರ್ಧ ಶತಿ ಬಾರಿಸಿದರು. 39 ಎಸೆತಗಳಲ್ಲಿ ಅವರು 52 ರನ್ ಬಾರಿಸಿ ಮಿಂಚಿದರು. ಉಳಿದಂತೆ ಯಾವ ಆಟಗಾರ್ತಿಯರು ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದರು. ಇನ್ನು ಯುಪಿ ವಾರಿಯರ್ಸ್ ಪರವಾಗಿ ಸೋಫಿ ಎಕಲ್ಸ್ಟನ್ 4 ವಿಕೆಟ್ ಕಿತ್ತು ಆರ್‌ಸಿಬಿ ತಂಡಕ್ಕೆ ಆಘಾತ ನೀಡಿದರು. ದೀಪ್ತಿ ಶರ್ಮಾ ಕೂಡ 3 ವಿಕೆಟ್ ಪಡೆದುಕೊಂಡರು.
ಈ ಮೊತ್ತವನ್ನು ಬೆನ್ನಟ್ಟಿದ ಯುಪಿ ವಾರಿಯರ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಅಬ್ಬರಿಸಿದೆ. ನಾಯಕಿ ಆರಂಭಿಕ ಆಟಗಾರ್ತಿ ಅಲಿಸಾ ಹೀಲಿ ಸ್ಪೋಟಕ ಪ್ರದರ್ಶನ ನೀಡಿ ಆರ್‌ಸಿಬಿ ಬೌಲಿಂಗ್ ವಿಭಾಗವನ್ನು ಧ್ವಂಸಮಾಡಿದರು. 47 ಎಸೆತಗಳನ್ನು ಎದುರಿಸಿದ ಹೀಲಿ 96 ರನ್ ಬಾರಿಸಿ ಅಬ್ಬರಿಸಿದ್ದಾರೆ. ಮತ್ತೊಂದು ತುದಿಯಲ್ಲಿ ದೀವಿಕಾ ವೈದ್ಯ ನಾಯಕಿಗೆ ಉತ್ತಮ ಸಾಥ್ ನೀಡಿದ್ದು 31 ಎಸೆತಗಳಲ್ಲಿ 36 ರನ್‌ಗಳಿಸಿ ಅಜೇಯವಾಗುಳಿದರು. ಈ ಮೂಲಕ ಇನ್ನೂ 7 ಓವರ್‌ಗಳು ಬಾಕಿಯುರುವಂತೆಯೇ ಯುಪಿ ವಾರಿಯರ್ಸ್ ಗೆದ್ದು ಬೀಗಿದೆ.
ಯುಪಿ ವಾರಿಯರ್ಸ್ ಆಡುವ ಬಳಗ: ಅಲಿಸ್ಸಾ ಹೀಲಿ(ನಾಯಕಿ/ವಿಕೆಟ್ ಕೀಪರ್), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಗ್ರಾತ್, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ದೇವಿಕಾ ವೈದ್ಯ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಬಳಗ: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್ (ವಿಕೆಟ್ ಕೀಪರ್), ಎರಿನ್ ಬರ್ನ್ಸ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಸಹನಾ ಪವಾರ್, ಕೋಮಲ್ ಝಂಜಾದ್, ರೇಣುಕಾ ಠಾಕೂರ್ ಸಿಂಗ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications