Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2023: ಡೆಲ್ಲಿ ಕ್ಯಾಪಿಟಲ್ಸ್‌ಗೆ ಗೆಲ್ಲಲು 139 ರನ್‌ಗಳ ಗುರಿ ನೀಡಿದ ಯುಪಿ ವಾರಿಯರ್ಸ್

WPL 2023: UPW vs DC, Delhi Capitals need 139 runs to win against UP Warriorz

ವುಮೆನ್ಸ್ ಪ್ರೀಮಿಯರ್ ಲೀಗ್‌ನ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಯುಪಿ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಯುಪಿ ವಾರಿಯರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸಾಧಾರಣ ಗುರಿ ನಿಗದಿಪಡಿಸಿದೆ. ಯುಪಿ ತಂಡದ ಪರವಾಗಿ ತಹಿಲಾ ಮೆಗ್ರಾಥ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿಸಿದರೂ ಅವರಿಗೆ ಉತ್ತಮ ಸಾಥ್ ದೊರೆಯಲಿಲ್ಲ. ಹೀಗಾಗಿ ನಿಗದಿತ 20 ಓವರ್‌ಗಳಲ್ಲಿ ಯುಪಿ ವಾರಿಯರ್ಸ್ ತಂಡ 6 ವಿಕೆಟ್ ಕಳೆದುಕೊಂಡು ಗಳಿಸಿದ್ದು 138 ರನ್ ಮಾತ್ರ.

ಈ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಪರವಾಗಿ ತಹಿಲಾ ಮೆಗ್ರಾಥ್ ಏಕಾಂಗಿ ಪ್ರದರ್ಶನ ನೀಡಿದರು. ಉಳಿದಂತೆ ನಾಯಕಿ ಹೀಲಿ ಅವರ 36 ರನ್‌ಗಳ ಕೊಡುಗೆ ತಂಡಕ್ಕೆ ನೆರವಾಯಿತು. ಇತರ ಯಾವ ಆಟಗಾರ್ತಿಯರು ಕೂಡ ಈ ಪಂದ್ಯದಲ್ಲಿ ಮಿಂಚಲು ವಿಫಲವಾಗಿದ್ದಾರೆ. ಹೀಗಾಗಿ 20 ಓವರ್‌ಗಳ ಸಂಪೂರ್ಣ ಬ್ಯಾಟಿಂಗ್ ನಡೆಸಿದರು ಕೂಡ ಸಾಧಾರಣ ಮೊತ್ತವನ್ನಷ್ಟೇ ಗಳಿಸಲು ಯುಪಿ ಪಡೆ ಶಕ್ತವಾಯಿತು.

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಬೌಲಿಂಗ್‌ನಲ್ಲಿ ಅಲೈಸ್ ಕ್ಯಾಪ್ಸಿ 3 ವಿಕೆಟ್ ಕಿತ್ತು ಮಿಂಚಿದ್ದಾರೆ. ಉಳಿದಂತೆ ರಾಧಾ ಯಾದವ್ 2 ವಿಕೆಟ್ ಪಡೆದರೆ ಒಂದು ವಿಕೆಟ್ ಜೊನಾಸನ್ ಪಾಲಾಯಿತು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲಿಂಗ್ ವಿಭಾಗ ಮತ್ತೊಮ್ಮೆ ಮಿಂಚಿದೆ.

ಯುಪಿ ವಾರಿಯರ್ಸ್ ಆಡುವ ಬಳಗ: ಶ್ವೇತಾ ಸೆಹ್ರಾವತ್, ಅಲಿಸ್ಸಾ ಹೀಲಿ (ನಾಯಕಿ & ವಿಕೆಟ್ ಕೀಪರ್), ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್, ಸಿಮ್ರಾನ್ ಶೇಖ್, ಪಾರ್ಶವಿ ಚೋಪ್ರಾ, ಅಂಜಲಿ ಸರ್ವಾಣಿ, ಸೊಪ್ಪದಂಡಿ ಯಶಸ್ರಿ, ಶಬ್ನಿಮ್ ಇಸ್ಮಾಯಿಲ್

ಬೆಂಚ್: ದೇವಿಕಾ ವೈದ್ಯ, ಗ್ರೇಸ್ ಹ್ಯಾರಿಸ್, ರಾಜೇಶ್ವರಿ ಗಾಯಕ್ವಾಡ್,
ಲಾರೆನ್ ಬೆಲ್, ಶಿವಾಲಿ ಶಿಂಧೆ, ಲಕ್ಷ್ಮಿ ಯಾದವ್

ಡೆಲ್ಲಿ ಕ್ಯಾಪಿಟಲ್ಸ್ ಆಡುವ ಬಳಗ: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸೆ, ಜೆಮಿಮಾ ರಾಡ್ರಿಗಸ್, ಮರಿಝನ್ನೆ ಕಪ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಜೆಸ್ ಜೋನಾಸೆನ್, ರಾಧಾ ಯಾದವ್, ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ಪೂನಂ ಯಾದವ್
ಬೆಂಚ್: ಲಾರಾ ಹ್ಯಾರಿಸ್, ತಾರಾ ನಾರ್ರಿಸ್, ಜಸಿಯಾ ಅಖ್ತರ್, ಮಿನ್ನು ಮಣಿ, ಅಪರ್ಣಾ ಮೊಂಡಲ್, ಟೈಟಾಸ್ ಸಾಧು, ಸ್ನೇಹಾ ದೀಪ್ತಿ

Story first published: Tuesday, March 21, 2023, 21:13 [IST]
Other articles published on Mar 21, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+