WPL 2023: ವಿರಾಟ್ ಕೊಹ್ಲಿ ಮಾತುಗಳು ನನಗೆ ಸ್ಪೂರ್ತಿ ತುಂಬಿದವು: ಆರ್‌ಸಿಬಿ ಗೆಲ್ಲಿಸಿದ ನಂತರ ಕನಿಕಾ ಅಹುಜಾ ಮಾತು

ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಗೆಲುವು ದಾಖಲಿಸಿದೆ. ಬುಧವಾರ ನಡೆದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿ ನಿಟ್ಟುಸಿರು ಬಿಟ್ಟಿದೆ.
20 ವರ್ಷದ ಆಟಗಾರ್ತಿ ಕನಿಕಾ ಅಹುಜಾ ಅತ್ಯುತ್ತಮ ಬ್ಯಾಟಿಂಗ್ ಮಾಡುವ ಮೂಲಕ ಆರ್ ಸಿಬಿ ಗೆಲುವಿನಲ್ಲಿ ಮುಖ್ಯಪಾತ್ರ ವಹಿಸಿದರು. 30 ಎಸೆತಗಳಲ್ಲಿ 46 ರನ್ ಗಳಿಸಿದ ಅವರು ಯುಪಿ ವಾರಿಯರ್ಸ್ ನೀಡಿದ 136 ರನ್‌ಗಳ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಯಿತು.
ಸತತವಾಗಿ 5 ಸೋಲುಗಳನ್ನು ಕಂಡಿದ್ದ ಸ್ಮೃತಿ ಮಂದಾನ ಪಡೆಗೆ ವಿರಾಟ್ ಕೊಹ್ಲಿ ಸ್ಪೂರ್ತಿ ತುಂಬಿದ್ದರು. ಬುಧವಾರ ಪಂದ್ಯಕ್ಕೆ ಮುನ್ನ ತಂಡವನ್ನು ಭೇಟಿ ಮಾಡಿದ್ದ ಕೊಹ್ಲಿ ಸಾಕಷ್ಟು ಮಾತುಕತೆ ನಡೆಸಿದ್ದರು. ಮಹಿಳಾ ಆಟಗಾರರಿಗೆ ಒತ್ತಡ ನಿವಾರಣೆ ಬಗ್ಗೆ ಪಾಠ ಮಾಡಿದ್ದರು.
ಪಂದ್ಯ ಮುಗಿದ ಬಳಿಕ ಮಾತನಾಡಿದ ಕನಿಕಾ ಅಹುಜಾ ವಿರಾಟ್ ಕೊಹ್ಲಿ ನೀಡಿದ ಸ್ಪೂರ್ತಿ ಬಗ್ಗೆ ಮಾತನಾಡಿದರು. "ಒತ್ತಡದ ಬಗ್ಗೆ ವಿರಾಟ್ ಸರ್ ನಮ್ಮ ಜೊತೆ ಮಾತನಾಡಿದರು, ಮೈದಾನದಲ್ಲಿ ಇರುವಾಗ ಯಾವುದೇ ಒತ್ತಡಕ್ಕೆ ಒಳಗಾಗಬೇಡಿಎಂದು ಅವರು ನಮಗೆ ಹೇಳಿದರು, ನಮಗೆ ಇಲ್ಲಿ ಆಡಲು ಸಿಗುತ್ತಿರುವುದು ಸಂತಸದ ವಿಷಯ ಎಂದ ಅವರು, ಎಲ್ಲರಿಗೂ ಒಂದೇ ರೀತಿಯ ಅವಕಾಶ ಸಿಗುವುದಿಲ್ಲ ಎಂದು ಮನವರಿಕೆ ಮಾಡಿದರು" ಎಂದು ಕನಿಕಾ ಅಹುಜಾ ತಿಳಿಸಿದ್ದಾರೆ.

ಸೂರ್ಯಕುಮಾರ್ ಯಾದವ್ ರೀತಿ ಆಡುವುದು ಇಷ್ಟ
ತನಗೆ ಸೂರ್ಯಕುಮಾರ್ ಯಾದವ್‌ರಂತೆ 360 ಡಿಗ್ರಿ ಬ್ಯಾಟಿಂಗ್ ಮಾಡುವುದು ತುಂಬಾ ಇಷ್ಟ ಎಂದು ಕನಿಕಾ ಅಹುಜಾ ಹೇಳಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ ಕೂಡ ಕನಿಕಾ ಅದೇ ರೀತಿ ನಿರ್ಭೀತಿಯಿಂದ ಬ್ಯಾಟಿಂಗ್ ಮಾಡಿದರು, ಬೌಂಡರಿಗಳನ್ನು ಬಾರಿಸಿದರು, ರಿವರ್ಸ್ ಸ್ವೀಪ್ ಮಾಡಲು ಯತ್ನಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು ಒಂದು ಸಿಕ್ಸರ್ ಅನ್ನು ಹೊಡೆದರು. ರಿಚಾ ಘೋಷ್ ಅವರೊಂದಿಗೆ 5ನೇ ವಿಕೆಟ್‌ಗೆ 60 ರನ್‌ಗಳನ್ನು ಕಲೆಹಾಕಿದರು.
"ಏನೆ ಆದರೂ ನಾವು ಗೆಲ್ಲಬೇಕು ಎನ್ನುವುದು ನನ್ನ ಮನಸ್ಸಿನಲ್ಲಿತ್ತು, ನಮಗೆ ನೀಡಿದ್ದ ಗುರಿ ಕೂಡ ಕಡಿಮೆ ಇತ್ತು. ಹೀಗಾಗಿ ಸಮಯ ತೆಗೆದುಕೊಂಡು ಪರಿಸ್ಥಿತಿಗೆ ತಕ್ಕಂತೆ ಆಡಲು ನಿರ್ಧರಿಸಿದೆವು, ಕೆಟ್ಟ ಎಸೆತಗಳಿಗಾಗಿ ಕಾಯುತ್ತಿದ್ದೆವು" ಎಂದು ಅವರು ಹೇಳಿದರು.
ತಾವು ಕ್ರಿಕೆಟಿಗರಾಗಲು ತನ್ನ ತಾಯಿಯೇ ಸ್ಪೂರ್ತಿ ಎಂದು ಕನಿಕಾ ಅಹುಜಾ ಬಹಿರಂಗಪಡಿಸಿದ್ದಾರೆ. ಯುಪಿ ವಾರಿಯರ್ಸ್ ವಿರುದ್ಧದ ಇನ್ನಿಂಗ್ಸ್ ಅನ್ನು ತನ್ನ ತಾಯಿಗೆ ಅರ್ಪಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications