ಐಸಿಸಿ ಟೂರ್ನಿಯಲ್ಲಿನ ಹಿನ್ನಡೆಗೆ WPL ಪರಿಹಾರ ನೀಡಲಿದೆ: ಜಹೀರ್ ಖಾನ್

ವುಮೆನ್ಸ್ ಪ್ರೀಮಿಯರ್ ಲೀಗ್ ಮಾರ್ಚ್ 4ರಿಂದ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಯನ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗುವ ಮೂಲಕ ಮಹಿಳಾ ಪ್ರೀಮಿಯರ್ ಲೀಗ್ ಅಧಿಕೃತವಾಗಿ ಚಾಲನೆ ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಡಬ್ಲ್ಯುಪಿಎಲ್ ಬಗ್ಗೆ ಭಾರೀ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಈ ಟೂರ್ನಿಯಿಂದಾಗಿ ಭಾರತೀಯ ಮಹಿಳಾ ಕ್ರಿಕೆಟ್ ಬಹಗಳಷ್ಟು ಲಾಭ ಪಡೆದುಕೊಳ್ಳಲಿದೆ ಎಂದಿದ್ದಾರೆ ಜಹೀರ್ ಖಾನ್.
ಐಸಿಸಿ ಟೂರ್ನಿಯಲ್ಲಿ ಭಾರತ ಫೈನಲ್ ಸೆಮಿಫೈನಲ್ ಹಂತದಲ್ಲಿ ಎಡವುತ್ತಿದೆ. ಭಾರತದ ಈ ಹಿನ್ನಡೆಗೆ ಡಬ್ಲ್ಯುಪಿಎಲ್ ಪರಿಹಾರ ಒದಗಿಸಲಿದೆ ಎಂದಿರುವ ಜಹೀರ್ ಖಾನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಲು ಸಿದ್ಧವಾಗಿರುವ ಸಾಕಷ್ಟು ಆಟಗಾರ್ತಿಯರು ಈ ಟೂರ್ನಿಯಿಂದ ತಯಾರಾಗಲಿದ್ದಾರೆ ಎಂದಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಆವೃತ್ತಿ ಶನಿವಾರ ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ವರ್ಣರಂಜಿತ ಕಾರ್ಯಕ್ರಮದೊಂದಿಗೆ ಚಾಲನೆ ಪಡೆದಿದೆ. ಬಾಲಿವುಡ್ ನಟರಾದ ಕಿಯಾರಾ ಅಡ್ವಾಣಿ, ಕೃತಿ ಸನನ್ ಮತ್ತು ಪ್ರಸಿದ್ಧ ಗಾಯಕ ಎಪಿ ಧಿಲ್ಲೋನ್ ಉದ್ಘಾಟನಾ ಸಮಾರಂಭಕ್ಕೆ ಮೆರುಗು ತುಂಬಿದರು. ಸಾವಿರಾರು ಅಭಿಮಾನಿಗಳ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾಗಿದ್ದಾರೆ.
ಟೂರ್ನಿಯ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದೆ. ಇದಕ್ಕೂ ಮು್ನನ ನಡೆದ ಉದ್ಘಾಟನಾ ಸಮಾರಂಭದಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ ಮತ್ತು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಕೂಡ ಭಾಗವಹಿಸಿದ್ದರು.
5 ತಂಡಗಳ ಚೊಚ್ಚಲ ಡಬ್ಲ್ಯುಪಿಎಲ್ ಟೂರ್ನಿ ಮುಂಬೈನ ಎರಡು ತಾಣಗಳಲ್ಲಿ ಮಾರ್ಚ್ 4 ರಿಂದ 28 ರವರೆಗೆ ನಡೆಯಲಿದ್ದು ಒಟ್ಟು 22 ಪಂದ್ಯಗಳನ್ನು ಆಡಲಾಗುತ್ತದೆ. ಸ್ಮೃತಿ ಮಂಧಾನ (ಆರ್‌ಸಿಬಿ), ಹರ್ಮನ್‌ಪ್ರೀತ್ ಕೌರ್ (ಎಂಐ), ಅಲಿಸ್ಸಾ ಹೀಲಿ (ಯುಪಿ ವಾರಿಯರ್ಸ್), ಮೆಗ್ ಲ್ಯಾನಿಂಗ್ (ಡೆಲ್ಲಿ ಕ್ಯಾಪಿಟಲ್ಸ್) ಮತ್ತು ಬೆತ್ ಮೂನಿ (ಗುಜರಾತ್ ಜೈಂಟ್ಸ್) ಮೊದಲ ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ತಂಡಗಳನ್ನು ಮುನ್ನಡೆಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications