WPL 2024: ಮುಂಬೈ ಹಾಗೂ ಕರ್ನಾಟಕದ ಈ ನಗರದಲ್ಲಿ 2ನೇ ಆವೃತ್ತಿ ಆಡುವ ಸಾಧ್ಯತೆ!
ವುಮೆನ್ಸ್ ಪ್ರೀಮಿಯರ್ ಲೀಗ್ (WPL) ನ ಎರಡನೇ ಆವೃತ್ತಿಯು ಫೆಬ್ರವರಿ 2024ರಲ್ಲಿ ನಡೆಯಲಿದ್ದು, ಬೆಂಗಳೂರು ಮತ್ತು ಮುಂಬೈನಲ್ಲಿ ಪಂದ್ಯಾವಳಿ ನಡೆಯುವ ಸಾಧ್ಯತೆಯಿದೆ.
ಉದ್ಘಾಟನಾ ಆವೃತ್ತಿಯ ಋತುವಿನಂತೆಯೇ, ಮಹಿಳಾ ಟಿ20 ಪಂದ್ಯಾವಳಿಯಲ್ಲಿ ಕಳೆದ ಬಾರಿ ಸ್ಪರ್ಧಿಸಿದ್ದ ಐದು ಫ್ರಾಂಚೈಸಿಗಳು ಸ್ಪರ್ಧಿಸಲಿವೆ.
ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ರಚನೆಯು ಮೊದಲ ಋತುವಿನಂತೆಯೇ ಇರುತ್ತದೆ. ಅಗ್ರ ಮೂರು ತಂಡಗಳು ನಾಕೌಟ್‌ಗೆ ಮುನ್ನಡೆಯುವ ಮುನ್ನ, ಐದು ತಂಡಗಳು ಡಬಲ್ ರೌಂಡ್-ರಾಬಿನ್ ಮಾದರಿಯಲ್ಲಿ ಸ್ಪರ್ಧಿಸುತ್ತವೆ.

ಅಂಕಪಟ್ಟಿಯ ಅಗ್ರಸ್ಥಾನಿ ತಂಡವು ನೇರವಾಗಿ ಫೈನಲ್‌ಗೆ ಪ್ರವೇಶಿಸಲಿದ್ದರೆ, ಎರಡು ಹಾಗೂ ಮೂರನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್‌ನಲ್ಲಿ ಕಾದಾಟ ನಡೆಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಲಿದೆ.
ಮಹಿಳಾ ಪ್ರೀಮಿಯರ್ ಲೀಗ್‌ನ ವೇಳಾಪಟ್ಟಿಯನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲವಾದರೂ, ಮಹಿಳಾ ಕ್ರಿಕ್‌ಝೋನ್ ವರದಿಯ ಪ್ರಕಾರ, ಪಂದ್ಯಾವಳಿಯು ಕಾರವಾನ್ ಶೈಲಿಯಲ್ಲಿ ನಡೆಯಲಿದೆ. ಪ್ರತಿ ತಂಡವು ಒಂದು ನಗರದಲ್ಲಿ ತನ್ನ ಪಂದ್ಯಗಳ ಸೆಟ್‌ಗಳನ್ನು ಆಡಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಂತೆಯೇ ಮುಂದಿನ ವರ್ಷದ ಮಹಿಳಾ ಪ್ರೀಮಿಯರ್ ಲೀಗ್ ತವರು ಮತ್ತು ಎದುರಾಳಿ ನೆಲದ ಮಾದರಿಯನ್ನು ಬಳಸುತ್ತದೆ ಎಂದು ಈ ಹಿಂದೆ ವರದಿಯಾಗಿತ್ತು.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಕ್ಟೋಬರ್ 19ರಂದು, ಆಟಗಾರ್ತಿಯರ ಪಟ್ಟಿಯನ್ನು ಪ್ರಕಟಿಸಿತು ಮತ್ತು ಅವರಲ್ಲಿ ಐದು ಮಹಿಳಾ ಪ್ರೀಮಿಯರ್ ಲೀಗ್ ಫ್ರಾಂಚೈಸಿಗಳು 60 ಆಟಗಾರ್ತಿಯರನ್ನು ಉಳಿಸಿಕೊಂಡು 29 ಆಟಗಾರ್ತಿಯರನ್ನು ಬಿಡುಗಡೆ ಮಾಡಿದವು.
ವರದಿಗಳ ಪ್ರಕಾರ, ಬಿಸಿಸಿಐ ಡಿಸೆಂಬರ್ 2023ರಲ್ಲಿ ಮಿನಿ ಹರಾಜು ಪ್ರಕ್ರಿಯೆಯನ್ನು ನಡೆಸುತ್ತದೆ. ಆ ವೇಳೆ ತಂಡಗಳು ತಮ್ಮ ತಂಡಕ್ಕೆ ಉಳಿದ ಆಟಗಾರ್ತಿಯನ್ನು ಸೇರಿಸಿಕೊಳ್ಳಲು ಬಿಡ್ಡಿಂಗ್ ನಡೆಸಲಿವೆ.

ಸುದೀರ್ಘ ಕಾಯುವಿಕೆಯ ನಂತರ, ಮಹಿಳಾ ಪ್ರೀಮಿಯರ್ ಲೀಗ್ ಅಂತಿಮವಾಗಿ ಫೆಬ್ರವರಿ 2023ರಲ್ಲಿ ಐದು ಫ್ರಾಂಚೈಸಿಗಳಾದ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ಜ್, ಗುಜರಾತ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಭಾಗವಹಿಸುವುದರೊಂದಿಗೆ ತನ್ನ ಮೊದಲ ಪ್ರಯತ್ನದಲ್ಲೇ ಛಾಪು ಮೂಡಿಸಿತು.
ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಋತುವಿನ ಎಲ್ಲಾ ಪಂದ್ಯಗಳು ಮುಂಬೈನ ಬ್ರೆಬೋರ್ನ್ ಸ್ಟೇಡಿಯಂ ಮತ್ತು ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದವು.
ಭಾರತದ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್, ಮುಂಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೆಗ್ ಲ್ಯಾನ್ನಿಂಗ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಪಂದ್ಯಾವಳಿಯ ಮೊದಲ ಚಾಂಪಿಯನ್ ತಂಡವೆನಿಸಿತು.
ಮರೆಯಲಾಗದ ಕಳಪೆ ಋತುವನ್ನು ಹೊಂದಿರುವ ಎರಡು ತಂಡಗಳೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ಕ್ರಮವಾಗಿ ಅಂಕಪಟ್ಟಿಯಲ್ಲಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications