WPL Auction: ಇಂದು ಬಹು-ನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ ಹರಾಜು; ಗಮನಿಸಬೇಕಾದ ಅಂಶಗಳು
ಇಂದು (ಶನಿವಾರ, ಡಿಸೆಂಬರ್ 9) ಮುಂಬೈನ ಹೋಟೆಲ್‌ನಲ್ಲಿ ಬಹು ನಿರೀಕ್ಷಿತ 2024ರ ಮಹಿಳಾ ಪ್ರೀಮಿಯರ್ ಲೀಗ್‌ಗಾಗಿ (WPL) ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ.
2ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಎಲ್ಲಾ ಐದು ಫ್ರಾಂಚೈಸಿಗಳಾದ ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಜ್ ಎದುರಾಳಿ ತಂಡಗಳ ಯೋಜನೆಗಳನ್ನು ಹಳಿತಪ್ಪಿಸಲು ತಮ್ಮ ಅಪೇಕ್ಷಿತ ಆಟಗಾರರ ಆಟಗಾರ್ತಿಯರನ್ನು ಪಡೆದುಕೊಳ್ಳುವ ಮೂಲಕ ತಮ್ಮ ತಂಡದ ಬಲವನ್ನು ಹೆಚ್ಚಿಸಲು ಎದುರು ನೋಡುತ್ತಿವೆ.

ಈ ಬಾರಿ ಎಲ್ಲಾ ಐದು ತಂಡಗಳಿಗೆ ಹೆಚ್ಚುವರಿಯಾಗಿ 1.5 ಕೋಟಿ ರೂಪಾಯಿಗಳನ್ನು ಬಳಸಲು ಅವಕಾಶ ನೀಡಲಾಗಿದ್ದು, ಕಳೆದ ಹರಾಜಿನಿಂದ ಮತ್ತು ಇತ್ತೀಚಿನ ಆಟಗಾರರ ಬಿಡುಗಡೆಯ ನಂತರ ಉಳಿದಿರುವ ಪರ್ಸ್ ಅನ್ನು ಬಳಸಬಹುದು. 9 ಸಾಗರೋತ್ತರ ಸೇರಿದಂತೆ 30 ಸ್ಲಾಟ್‌ಗಳನ್ನು ಹರಾಜಿನಲ್ಲಿ ಭರ್ತಿ ಮಾಡಲಾಗುತ್ತದೆ.
ಐದು ತಂಡಗಳು ತಮ್ಮ ರಿಟೇನ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಒಟ್ಟು 60 ಆಟಗಾರ್ತಿಯರನ್ನು ಉಳಿಸಿಕೊಳ್ಳಲಾಗಿದೆ. ಈ 60 ಆಟಗಾರ್ತಿಯರ ಪೈಕಿ 21 ಮಂದಿ ಸಾಗರೋತ್ತರ ತಾರೆಯರಾಗಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಋತುವಿನಲ್ಲಿ, ಪ್ರತಿ ತಂಡಕ್ಕೆ ತಮ್ಮ ತಂಡವನ್ನು ರಚಿಸಲು ಮೀಸಲಿದ್ದ 12 ಕೋಟಿ ರೂಪಾಯಿಯನ್ನು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಯುಪಿ ವಾರಿಯರ್ಜ್ ಮಾತ್ರ ಈ ಹಣವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗಿತ್ತು.

ಉದ್ಘಾಟನಾ ಋತುವಿನಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಗಳಿಸಿದ ಗುಜರಾತ್ ಜೈಂಟ್ಸ್ ಈ ಬಾರಿ ತಮ್ಮ ಅರ್ಧದಷ್ಟು ತಂಡವನ್ನು ಬಿಡುಗಡೆ ಮಾಡಿದ್ದರಿಂದ, ಗರಿಷ್ಠ 5.95 ಕೋಟಿ ರೂಪಾಯಿ ಪರ್ಸ್ ಹೊಂದಿದೆ. ಇದೀಗ 10 ಸ್ಲಾಟ್‌ಗಳನ್ನು ಖಾಲಿ ಹೊಂದಿದ್ದು, ಅದರಲ್ಲಿ 3 ಸಾಗರೋತ್ತರ ಆಟಗಾರ್ತಿಯರನ್ನು ಭರ್ತಿ ಮಾಡಬೇಕಾಗಿದೆ.
ಪ್ಲೇಆಫ್‌ಗೆ ಅರ್ಹತೆ ಪಡೆದು ಮೂರನೇ ಸ್ಥಾನ ಪಡೆದ ಯುಪಿ ವಾರಿಯರ್ಜ್ ತಂಡದ ಪರ್ಸ್‌ನಲ್ಲಿ 4 ಕೋಟಿ ರೂಪಾಯಿ ಇದೆ. ಒಂದು ಸಾಗರೋತ್ತರ ಆಟಗಾರ್ತಿ ಸೇರಿದಂತೆ ಐದು ಸ್ಲಾಟ್‌ಗಳನ್ನು ತುಂಬಲು ಬಳಸಬಹುದು.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕಳೆದ ವರ್ಷ ಪ್ರಭಾವ ಬೀರಲು ವಿಫಲವಾದ ಸ್ಮೃತಿ ಮಂಧಾನ, ಸೋಫಿ ಡಿವೈನ್ ಮತ್ತು ಎಲ್ಲಿಸ್ ಪೆರ್ರಿ ಅವರನ್ನೊಳಗೊಂಡ ಸ್ಟಾರ್-ಸ್ಟಡ್ ತಂಡವನ್ನು ಹೊಂದಿದೆ. ಇದೀಗ ಮೂರು ವಿದೇಶಿ ಆಟಗಾರ್ತಿಯರು ಸೇರಿದಂತೆ 7 ಸ್ಲಾಟ್‌ಗಳನ್ನು ತುಂಬಲು ತಮ್ಮ ಪರ್ಸ್‌ನಲ್ಲಿ 3.35 ಕೋಟಿ ರೂಪಾಯಿ ಉಳಿಸಿಕೊಂಡಿದ್ದಾರೆ.
ರನ್ನರ್-ಅಪ್ ಆಗಿರುವ ದೆಹಲಿ ಕ್ಯಾಪಿಟಲ್ಸ್ ತಮ್ಮ ಮೂರು ಸ್ಲಾಟ್‌ಗಳನ್ನು ತುಂಬಲು 2.25 ಕೋಟಿ ರೂಪಾಯಿಗಳ ಪರ್ಸ್ ಹೊಂದಿದೆ, ಇದರಲ್ಲಿ ಒಂದು ಸಾಗರೋತ್ತರವೂ ಸೇರಿದೆ.
ಮುಂಬೈ ತಂಡವು 2.1 ಕೋಟಿ ರೂಪಾಯಿಯೊಂದಿಗೆ ಕಡಿಮೆ ಮೊತ್ತದ ಪರ್ಸ್ ಹೊಂದಿದೆ. ಅವರಿಗೆ ಒಂದು ಸಾಗರೋತ್ತರ ಸೇರಿದಂತೆ ಐದು ಸ್ಲಾಟ್‌ಗಳನ್ನು ತುಂಬುವ ಅವಕಾಶ ಹೊಂದಿದ್ದಾರೆ.
ಮಾರ್ಚ್ 2023ರಲ್ಲಿ ನಡೆದ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಭಾರಿ ಯಶಸ್ಸನ್ನು ಕಂಡಿತು. ವಿಶ್ವದಾದ್ಯಂತದ ಅನೇಕ ಅಗ್ರ ಕ್ರಿಕೆಟ್ ಆಟಗಾರ್ತಿಯರು 22-ಪಂದ್ಯಗಳ ಟೂರ್ನಿಯಲ್ಲಿ ಭಾಗವಹಿಸಿದರು. ಇದನ್ನು ಮುಂಬೈನ ಮೂರು ಮೈದಾನಗಳಲ್ಲಿ ಆಡಲಾಗಿತ್ತು.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಎರಡನೇ ಆವೃತ್ತಿಯ ದಿನಾಂಕ ಮತ್ತು ಅದನ್ನು ತವರು-ಎದುರಾಳಿ ನೆಲದ ಸ್ವರೂಪದಲ್ಲಿ ಆಡಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.
ಕಳೆದ ವರ್ಷದ ಹರಾಜಿನಲ್ಲಿ ಮೂವರು ಆಟಗಾರ್ತಿಯರು 3 ಕೋಟಿ ರೂಪಾಯಿಯ ಗಡಿ ದಾಟಿದರು. ಅವರೆಂದರೆ, ಸ್ಮೃತಿ ಮಂಧಾನ (ಆರ್‌ಸಿಬಿಗೆ 3.4 ಕೋಟಿ ರೂ.), ಆಶ್ಲೀಗ್ ಗಾರ್ಡ್ನರ್ (ಗುಜರಾತ್ ಜೈಂಟ್ಸ್‌ಗೆ 3.2 ಕೋಟಿ ರೂ.) ಮತ್ತು ನ್ಯಾಟ್ ಸಿವರ್-ಬ್ರಂಟ್ (ಮುಂಬೈ ಇಂಡಿಯನ್ಸ್‌ಗೆ 3.2 ಕೋಟಿ ರೂಪಾಯಿ). ಇನ್ನು ಏಳು ಆಟಗಾರ್ತಿಯರು 2 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications