WPL 2024: ಎಡ ಎಡವಟ್ಟು ಅಲ್ಲವೇ ಅಲ್ಲ.. ಕಪ್ ಗೆಲ್ಲುವ ಫೆವರೀಟ್
ಸಾಮಾನ್ಯವಾಗಿ ಯಾವುದಾದರೂ ಕೆಲಸವನ್ನು ಮಾಡುವಾಗ ಅಪ್ಪಿ ತಪ್ಪಿ ಎಡಗೈಯಿಂದ ಮಾಡಿದರೆ, ಹಿರಿಯರು ಬೈಯುತ್ತಾರೆ. ಶುಭ ಕೆಲಸವನ್ನು ಎಡ ಕೈಯಿಂದ ಮಾಡ ಬಾರದು ಎಂಬ ಭಾವನೆ ನಮ್ಮ ತಲೆಯಲ್ಲಿ ಕೂಡಿಸಿ ಬಿಟ್ಟಿದ್ದಾರೆ. ದೇವರಿಗೆ ಪ್ರದಕ್ಷಿಣೆ ಹಾಕುವಾಗಲು ನಾವು ದೇವರ ಬಲಗಡೆಯಿಂದಲೇ ಹೋಗುತ್ತೇವೆ. ಆದರೆ ಇಂದು ನಾವು ಇಲ್ಲಿ ಹೇಳುತ್ತಿರುವ ಸ್ಟೋರಿಯನ್ನು ನೋಡಿದ ಮೇಲೆ ಎಡವೇ ಬಲ ಇದ್ದಂತೆ ಕಾಣುತ್ತಿದೆ. ಹಾಗಿದ್ದರೆ ಎಡವೇ ಬಲ ಎಂದಿದ್ದು ಯಾವುದಕ್ಕೆ ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ..
ಪ್ರಮುಖ ಟೂರ್ನಿಯ ಫೈನಲ್ ಪಂದ್ಯಕ್ಕೂ ಉಭಯ ನಾಯಕರೊಂದಿಗೆ ಟ್ರೋಫಿ ಇಟ್ಟು ಫೋಟೋ ತೆಗೆದುಕೊಳ್ಳುವುದು ಒಂದು ವಾಡಿಕೆ. ಈ ಫೋಟೋ ಎಲ್ಲ ಮಾಧ್ಯಮಗಳಲ್ಲಿ ರಾರಾಜಿಸುತ್ತವೆ. ಆದರೆ ನೀವೆಲ್ಲಾ ಸಾಮಾನ್ಯವಾಗಿ ನೋಡಬಹುದಾದ ಸಂಗತಿ ಎಂದರೆ, ನಮ್ಮ ತಂಡದ ನಾಯಕ ಎಲ್ಲಿ ಇದ್ದಾನೆ. ಆತನ ಹಾವ ಭಾವ ಎಂತಹದ್ದು ಎಂದು. ಆದರೆ ಆತ ಯಾವ ಬದಿಯಲ್ಲಿ ನಿಂತಿದ್ದಾನೆ ಎಂಬುದರ ಮೇಲೆ ಅವನ ಲಕ್ ಸಹ ನಿರ್ಧಾರವಾಗುತ್ತದೆ ಎಂಬುದಕ್ಕೆ ಹಲವು ಉದಾಹರಣೆಗಳು ಸಿಕ್ಕಿವೆ. ಈ ಎಲ್ಲ ಉದಾಹರಣೆಗಳನ್ನು ಇಲ್ಲಿ ನೋಡುತ್ತಾ ಹೋಗೋಣ..

ಟ್ರೋಫಿಯೊಂದಿಗೆ ಫೋಟೋ ತೆಗೆಸಿಕೊಳ್ಳುವಾಗ ನಾಯಕರು ಯಾವ ಬದಿಯಲ್ಲಿ ನಿಲ್ಲುತ್ತಾರೆ ಎಂಬುದನ್ನು ಒಮ್ಮೆ ನೀವು ನೋಡಿ. ನಾವು ಇಂದು ಹೇಳುವ ವರದಿಯಲ್ಲಿ ಟ್ರೋಫಿಯ ಎಡಗಡೆ ನಿಂತ ನಾಯಕರೇ ಆ ಟ್ರೋಫಿಯನ್ನು ಎತ್ತಿ ಹಿಡಯುತ್ತಾರೆ ಎಂಬ ಸೂಚನೆ ಸಿಕ್ಕಂತೆ ಆಗುತ್ತದೆ. ಅದಕ್ಕೆ ಪುಷ್ಠಿ ನೀಡುವಂತೆ ಹಲವು ಉದಾಹರಣೆಗಳು ಸಿಕ್ಕವೆ ಒಂದಾದಾಗಿ ಇಲ್ಲಿವೆ ನೋಡಿ..
ಸ್ಮೃತಿ ನಿಂತಿದ್ದು ಎಡದಲ್ಲೇ
ಅಂದಹಾಗೆ ಈಗ 2024 wpl ತೆರೆ ಕಂಡಿದೆ. ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಫೋಟೋ ಶೂಟ್‌ನಲ್ಲಿ ಸ್ಮೃತಿ ಎಡ ಭಾಗದಲ್ಲಿ ನಿಂತು ಫೋಟೋ ಪೋಸ್ ನೀಡಿದರು. ಅಲ್ಲದೆ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಆರ್‌ಸಿಬಿ wpl ಮುಕುಟ ತೊಡಿಸಿದರು. ಈ ಮೂಲಕ ಆರ್‌ಸಿಬಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾದರು. ಸತತ 16 ವರ್ಷಗಳಿಂದ ಪ್ರಶಸ್ತಿ ಬರವನ್ನು ಎದುರುಸುತ್ತಿದ್ದ ಆರ್‌ಸಿಬಿ ಕೊನೆಗೂ ಪ್ರಶಸ್ತಿ ಎತ್ತಿ ಹಿಡಿದಿದೆ.
ಈ ಫೋಟೋ ಒಮ್ಮೆ ನೋಡಿ ಈ ಫೋಟೋದಲ್ಲಿ ಸ್ಮೃತಿ ಎಡಗಡೆ ನಿಂತಿದ್ದಾರೆ. ಈ ಎಳೆಯನ್ನೇ ಹಿಡಿದು ನೋಡಿದಾಗ ಇನ್ನಷ್ಟು ಇದಕ್ಕೆ ಹೋಲುವ ಫೋಟೋಗಳು ನಮ್ಮ ಕಣ್ಣಿಗೆ ಕಾಣುತ್ತವೆ.

wpl ಚಾಂಪಿಯನ್ ಮುಂಬೈ
ಕಳೆದ ಬಾರಿ wpl ಮೊದಲ ಆವೃತ್ತಿಯನ್ನು ಆಡಲಾಗಿತ್ತು. ಈ ಪಂದ್ಯದಲ್ಲಿ ಮುಂಬೈ ಭರ್ಜರಿ ಪ್ರದರ್ಶನ ನೀಡಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 131 ರನ್ ಸೇರಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಮುಂಬೈ 19.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 134 ರನ್ ಸೇರಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈ ಫೋಟೋವನ್ನು ಸಹ ನೀವು ನೋಡಿದರೆ ಹರ್ಮನ್ ಪ್ರೀತ್ ಟ್ರೋಫಿಯ ಎಡಗಡೆಯ ಕಾಣಿಸಿಕೊಳ್ಳುತ್ತಾರೆ.

ಏಕದಿನ ವಿಶ್ವಕಪ್‌ನಲ್ಲಿ ಎಡವೇ ಲಕ್ಕಿ
ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಇದನ್ನು ಕಾಣಬಹುದಾಗಿದೆ. ಡಿಸೆಂಬರ್ 18 ರಂದು ನಡೆದ ಫೋಟೋ ಶೂಟ್ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾ ಎಡಗಡೆ ಇತ್ತು. ಡಿಸೆಂಬರ್ 19 ರಂದು ನಡೆದ ಫೈನಲ್ ಪಂದ್ಯದಲ್ಲಿ, ಆಸೀಸ್ ಜಯ ಸಾಧಿಸಿತು. ಟೂರ್ನಿಯುದಕ್ಕೂ ಸೊಗಸಾದ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಫೈನಲ್‌ನಲ್ಲಿ ನಿರಾಸೆ ಅನುಭವಿಸಿತ್ತು. ಈ ಮೂಲಕ ಮೂರನೇ ಬಾರಿಗೆ ಟ್ರೋಫಿಗೆ ಮುತ್ತಿಡುವ ಆಸೆ ನುಚ್ಚುನೂರಾಯಿತು.

ಟಿ20 ವಿಶ್ವಕಪ್ 2022ರಲ್ಲೂ ಸಾಬೀತು
2022 ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕ್ 8 ವಿಕೆಟ್‌ಗೆ 137 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್ ಇನ್ನು ಆರು ಎಸೆತಗಳು ಬಾಕಿ ಇರುವಾಗಲೇ ಐದು ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದು ಬೀಗಿತು.

ಭಾರತಕ್ಕೆ ಅಂಡರ್19 ವಿಶ್ವಕಪ್‌ನಲ್ಲಿ ನಿರಾಸೆ
ಇನ್ನು ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 253 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಭಾರತ 43.5 ಓವರ್‌ಗಳಲ್ಲಿ 174 ರನ್‌ಗಳಿಗೆ ಕುಸಿದು, ಟ್ರೋಫಿ ಗೆಲ್ಲುವ ಆಸೆಯನ್ನು ಕೈ ಚೆಲ್ಲಿತು.

WTC ಚಾಂಪಿಯನ್‌ನಲ್ಲೂ ರೋಹಿತ್ ಪಡೆಗೆ ಆಘಾತ
WTC ಫೈನಲ್ ಪಂದ್ಯದಲ್ಲಿ ರೋಹಿತ್ ಪಡೆ ಮುಗ್ಗರಿಸಿದೆ. ದಿ ಓವಲ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಿತು. ಆಸೀಸ್ 209 ರನ್ ಗಳಿಂದ ಭಾರತ ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications